Advertisement
ಲಸಿಕೆ ಆರಂಭದ ದಿನವೇ ಅಪಸ್ವರವೂ ಕೇಳಿಬಂತು. ದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರು “ನಮಗೆ ಕೊವ್ಯಾಕ್ಸಿನ್ ಬೇಡ. ಕೊವಿಶೀಲ್ಡ್ ಕೊಡಿ’ ಎಂಬ ಬೇಡಿಕೆಯ ಪತ್ರವನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ. “ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಇನ್ನೂ ಪ್ರಯೋಗ ಹಂತದಲ್ಲಿದೆ. ಟ್ರಯಲ್ ವೇಳೆ ಇದನ್ನು ಸಾಕಷ್ಟು ಸಂಖ್ಯೆಯ ಪ್ರತಿನಿಧಿಗಳಿಗೆ ನೀಡಿಲ್ಲ. ಹೀಗಾಗಿ ಕೊವಿಶೀಲ್ಡನ್ನೇ ನಮಗೆ ನೀಡಿ’ ಎಂದು ಮನವಿ ಮಾಡಿದ್ದಾರೆ.
Related Articles
Advertisement
ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಗಂಭೀರ ಅಡ್ಡಪರಿಣಾಮವೇನಾದರೂ ಉಂಟಾದರೆ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭಾರತ್ ಬಯೋಟೆಕ್ ಶನಿವಾರ ಘೋಷಿಸಿದೆ. ಪ್ರತಿಕೂಲ ಪರಿಣಾಮ ಕುರಿತು 7 ದಿನಗಳ ಒಳಗಾಗಿ ಮಾಹಿತಿ ನೀಡಲೆಂದು ಅರ್ಜಿಯೊಂದನ್ನೂ ನೀಡಿರುತ್ತೇವೆ ಎಂದು ಸಂಸ್ಥೆ ತಿಳಿಸಿದೆ.
ಪ್ರತಿಯೊಬ್ಬ ಭಾರತೀಯನಿಗೂ ಇದೊಂದು ಹೆಮ್ಮೆಯ ಕ್ಷಣ. ದಾಖಲೆ ಅವಧಿಯಲ್ಲಿ ಕ್ಷಿಪ್ರ ವೇಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಿದ ಎಲ್ಲ ವಿಜ್ಞಾನಿಗಳನ್ನೂ ಅಭಿನಂದಿಸುತ್ತೇನೆ.-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಈ ಲಸಿಕೆ ಅಭಿಯಾನವು ಸ್ವಾವಲಂಬಿ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ಐತಿಹಾಸಿಕ ಮೈಲುಗಲ್ಲು. –ಅಮಿತ್ ಶಾ, ಕೇಂದ್ರ ಗೃಹ ಸಚಿವ
ಮುಂದಿನ 100 ದಿನಗಳೊಳಗಾಗಿ ಎಲ್ಲ ದೇಶಗಳಲ್ಲೂ ಲಸಿಕೆ ಹಂಚಿಕೆ ಆರಂಭವಾಗಲಿ ಎಂದು ಆಶಿಸುತ್ತೇನೆ. ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕ ರಿಸ್ಕ್ ಹೊಂದಿರುವವರನ್ನು ಮೊದಲಿಗೆ ರಕ್ಷಿಸಬೇಕಿದೆ.-ಟೆಡ್ರೋಸ್ ಘೆಬ್ರೆಯೇಸಸ್, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ