Advertisement

ಮಕ್ಕಳಿಗೆ ಲಸಿಕೆ: ಶೇ.76 ಗುರಿ ಸಾಧನೆ; ಗದಗ ಪ್ರಥಮ, ಕೊಡಗು ಶೇ. 97

01:22 AM Feb 03, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ 15ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್‌ ಲಸಿಕೆ ಮೊದಲ ಡೋಸ್‌ ವಿತರ‌ಣೆಯಲ್ಲಿ ಶೇ.76ರಷ್ಟು ಗುರಿ ಸಾಧಿಸಲಾಗಿದೆ.

Advertisement

ಜ.4ರಿಂದ ಫೆ.1ರ ವರೆಗೆ ಲಸಿಕೆ ನೀಡಿ ರುವುದರಲ್ಲಿ ಗದಗ ಅಗ್ರಸ್ಥಾನ ಪಡೆದು ಕೊಂಡು ಶೇ.99ರಷ್ಟು ಗುರಿ ಸಾಧಿಸಿದೆ. ಕಲಬುರಗಿ ಹಾಗೂ ರಾಯಚೂರು ಜಿಲ್ಲೆ ಗಳು ಶೇ.61ರಷ್ಟು ಸಾಧನೆ ಮಾಡುವ ಮೂಲಕ ಕೊನೆಯ ಸ್ಥಾನದಲ್ಲಿವೆ.
ಕೊಡಗು ಶೇ. 97, ಉಡುಪಿ ಶೇ. 88, ಬೆಂಗಳೂರು ನಗರ ಶೇ. 85, ಉತ್ತರ ಕನ್ನಡ, ದಕ್ಷಿಣ ಕನ್ನಡ ತಲಾ ಶೇ. 83, ಕೋಲಾರ ಶೇ. 82, ಬಾಗಲಕೋಟೆ ಶೇ. 81, ಶಿವಮೊಗ್ಗ ಶೇ. 78, ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಶೇ. 77, ಚಿಕ್ಕಬಳ್ಳಾಪುರ ಶೇ. 74, ಚಿತ್ರದುರ್ಗ, ಮಂಡ್ಯ, ಹಾವೇರಿ ಜಿಲ್ಲೆಯಲ್ಲಿ ತಲಾ ಶೇ. 73, ವಿಜಯಪುರ ಶೇ.72, ಬೆಳಗಾವಿ ಶೇ.70, ರಾಮನಗರ ಶೇ.71, ಹಾಸನ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ತಲಾ ಶೇ. 68, ತುಮಕೂರು ಶೇ.67, ಮೈಸೂರು ಶೇ.66, ಚಾಮರಾಜನಗರ, ಯಾದಗಿರಿ, ಕೊಪ್ಪಳ ಜಿಲ್ಲೆಯಲ್ಲಿ ತಲಾ ಶೇ.65, ಬೀದರ್‌ ಶೇ.64, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.62 ರಷ್ಟು ಸಾಧನೆ ಮಾಡಲಾಗಿದೆ.

8 ಲಕ್ಷ ಬಾಕಿ ಲಸಿಕೆ
30 ಲಕ್ಷ ವಿದ್ಯಾರ್ಥಿಗಳಿಗೆ ಮೊದಲ ಡೋಸ್‌ ನೀಡುವ ಗುರಿ ಇತ್ತಾದರೂ 22 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ನೀಡಲು ಸಾಧ್ಯವಾಗಿದೆ. ಸುಮಾರು 8 ಲಕ್ಷ ವಿದ್ಯಾರ್ಥಿಗಳು ಮೊದಲ ಡೋಸ್‌ನಿಂದ ದೂರ ಉಳಿದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಿಬಿಎಂಪಿ 2.7 ಲಕ್ಷ, ಬೆಳಗಾವಿ 1.89 ಲಕ್ಷ, ಬಳ್ಳಾರಿ 1.12, ಕಲಬುರಗಿ 98,011, ಮೈಸೂರು 98,287, ವಿಜಯಪುರ 89,522, ತುಮಕೂರು 83,128, ರಾಯಚೂರು 70,494, ಬೀದರ್‌ 68,183, ದ.ಕ. 85,176, ಬಾಗಲಕೋಟೆಯಲ್ಲಿ 81,240 ಮಂದಿ ಸಹಿತ ಉಳಿದ ಜಿಲ್ಲೆಗಳ ಒಟ್ಟು 22 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.

2ನೇ ಡೋಸ್‌ ಪಡೆಯಲು 10.50 ಲಕ್ಷ ಅರ್ಹ ಫ‌ಲಾನುಭವಿಗಳಿದ್ದಾರೆ. ಸದ್ಯ 1.68 ಲಕ್ಷ ವಿದ್ಯಾರ್ಥಿಗಳು ಪಡೆದಿದ್ದಾರೆ.
ಎರಡನೇ ಡೋಸ್‌ ವಿತರಣೆಯಲ್ಲಿ ಹಾಸನ 11,850, ವಿಜಯಪುರ 11,640, ಬೆಳಗಾವಿ 11,117, ಕೋಲಾರ 9,112, ಕಲಬುರಗಿ 9,008, ಬಳ್ಳಾರಿ 7,061 ಮಂದಿಗೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಸೇರಿ ಫೆ. 2ರಂದು 1.68 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 63, ಬೆಂಗಳೂರು ಗ್ರಾಮಾಂತರದಲ್ಲಿ 960 ವಿತರಿಸುವ ಮೂಲಕ ಎರಡನೇ ಡೋಸ್‌ ವಿತರಣೆಯಲ್ಲಿ ಕನಿಷ್ಠ ಸಾಧನೆ ಮಾಡಿವೆ.

Advertisement

ಇದನ್ನೂ ಓದಿ:ರಾಜ್ಯದಲ್ಲಿ ಇಂದು 20,505 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 81 ಮಂದಿ ಬಲಿ

ಲಸಿಕೆ ನೀಡಲು
ಆದ್ಯತೆ ಕೊಡಿ
15-18 ವರ್ಷ ವಯೋಮಿತಿ ಒಳಗಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು. ಅವರಿಗೆ 2ನೇ ಡೋಸ್‌ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಮೂಲಕ ಸಲಹೆ ಮಾಡಿದ್ದಾರೆ. ಇದರ ಜತೆಗೆ ಪ್ರತಿ ದಿನವೂ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ.

ರಾಜ್ಯಾದ್ಯಂತ
15ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್‌ ಲಸಿಕೆ ನೀಡ ಲಾಗುತ್ತಿದ್ದು, ನಿಧಾನಗತಿ ಇರುವ ಜಿಲ್ಲೆಯಲ್ಲಿ ತ್ವರಿತವಾಗಿ ಲಸಿಕೆ ಗುರಿ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಡಾ| ರಣದೀಪ್‌,
ಆಯುಕ್ತರು ಆರೋಗ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next