Advertisement
ಆ.9ರಿಂದ 31ರವರೆಗೆ ರಾಜ್ಯವ್ಯಾಪಿ ಲಸಿಕೆ ವಿತರಣೆ ಅಭಿಯಾನವನ್ನು ಸರ್ಕಾರ ಕೈಗೊಂಡಿದೆ. ವಿಶೇಷವೆಂದರೆ, ಸರ್ಕಾರವು ಖಾಸಗಿ ಆಸ್ಪ ತ್ರೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ಸಾರ್ವಜನಿಕರಿಗೆ ವಿತರಿಸಲು ನಿರ್ಧರಿಸಿದೆ. ಅದರಂತೆ, ಖಾಸಗಿ ಆಸ್ಪತ್ರೆಗ ಳಲ್ಲಿ 20 ಲಕ್ಷ ಡೋಸ್ ಲಸಿಕೆ ಇವೆ. ಅದರ ಜೊತೆಗೆ ಈ ತಿಂಗಳು ಕೇಂದ್ರ ಸರ್ಕಾರವು 24 ಲಕ್ಷ ಡೋಸ್‌ಗಳನ್ನು ರಾಜ್ಯಕ್ಕೆ ಒದಗಿಸಲಿದೆ ಎಂದೂ ಸಿಎಂ ಪಿಣರಾಯಿ ತಿಳಿಸಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯ ನೂಳ್‌ಪುಳದಲ್ಲಿ ಶೇ.100ರಷ್ಟು ಲಸಿಕೆ ವಿತರಣೆ ಪೂರ್ಣಗೊಂಡಿದೆ. ಈ ಮೂಲಕ ಲಸಿಕೆ ನೀಡುವಿಕೆ ಪೂರ್ಣ ಗೊಳಿಸಿದ ಮೊದಲ ಬುಡಕಟ್ಟು ಪಂಚಾಯತ್ ಎಂಬ ಹೆಗ್ಗಳಿಕೆಗೆ ನೂಳ್‌ಪುಳ ಪಾತ್ರವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದೇ ವೇಳೆ, ಶನಿವಾರದಿಂದ ಭಾನುವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 39,070 ಮಂದಿಗೆ ಸೋಂಕು ದೃಢಪಟ್ಟಿದ್ದು, 491 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 4,06,822ಕ್ಕಿಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
Related Articles
Advertisement
ಪ್ರಯಾಣ ನಿರ್ಬಂಧ ಸಡಿಲಿಕೆ:ಭಾರತಕ್ಕೆ ವಿಧಿಸಿದ್ದ ಪ್ರಯಾಣ ನಿರ್ಬಂಧವನ್ನು ಯುಕೆ ಭಾನುವಾರ ಸಡಿಲಿಕೆ ಮಾಡಿದೆ. ಅದರಂತೆ, ಇನ್ನು ಮುಂದೆ ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ಭಾರತೀಯರು ಬ್ರಿಟನ್ ತಲುಪಿದಾಗ 10 ದಿನಗಳ ಕಡ್ಡಾಯ ಹೋಟೆಲ್ ಕ್ವಾರಂಟೈನ್‌ನಿಂದ ವಿನಾಯ್ತಿ ಪಡೆಯಲಿದ್ದಾರೆ. ಜಾಗತಿಕ ಲಸಿಕೆ
ಈವ ರೆಗೆ ಜಗತ್ತಿನಾದ್ಯಂತ 440 ಕೋ ಟಿ ಡೋಸ್ ಲಸಿಕೆ ವಿತರಣೆಯಾಗಿದೆ. ಅಂದರೆ ಇದು ಪ್ರತಿ 100 ಮಂದಿಗೆ 57 ಡೋಸ್‌ಗೆ ಸಮ. ಅಭಿ ವೃದ್ಧಿ ಹೊಂದಿರುವ ಅಥವಾ ಅಧಿಕ ಆದಾಯವುಳ್ಳ ಶ್ರೀಮಂತ ರಾಷ್ಟ್ರಗಳು ಪ್ರತಿ 100 ಮಂದಿಗೆ ಸುಮಾರು 100 ಡೋಸ್‌ಗಳ ವಿತರಣೆಯನ್ನು ಪೂರ್ಣಗೊಳಿಸಿದೆ. ಆದರೆ, ಕಡಿಮೆ ಆದಾಯವಿರುವ ಬಡ ದೇಶಗಳಲ್ಲಿ ಇನ್ನೂ ಪ್ರತಿ 100 ಮಂದಿಯಲ್ಲಿ ಕೇವಲ 1.5 ಡೋಸ್‌ಗಳಷ್ಟೇ ವಿತರಣೆ ಯಾಗಿವೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಯಾವ ದೇಶದಲ್ಲಿ ಎಷ್ಟು? (ಸಿಂಗಲ್ ಡೋಸ್)
ಯುಎಇ – ಶೇ.81
ಮಾಲ್ಟಾ- ಶೇ.80
ಐಸ್ ಲ್ಯಾಂಡ್- ಶೇ.76
ಸಿಂಗಾಪು ರ- ಶೇ.76
ಉರುಗ್ವೆ- ಶೇ.75
ಕತಾರ್- ಶೇ.75
ಚಿಲಿ- ಶೇ.73
ಕೆನಡಾ – ಶೇ.72
ಸ್ಪೇನ್- ಶೇ.70
ಪೋರ್ಚುಗಲ್- ಶೇ.70
ಯುಕೆ- ಶೇ.70
ಅಮೆರಿಕ- ಶೇ.58
ಭಾರತ- ಶೇ. 44