ಬೀದರ: ಜಿಲ್ಲಾದ್ಯಂತ 15-18 ವರ್ಷದೊಳಗಿನ ಮಕ್ಕಳಿಗೂ ಸಹ ಕೋವಿಡ್-19 ಲಸಿಕಾಕರಣವು ಸಮರೋಪಾದಿಯಲ್ಲಿ ನಡೆಯುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿ ಕಾರಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ.
ಪೂರ್ವ ನಿರ್ಧಾರದಂತೆ ತಂಡವಾಗಿ ನಗರದ ವಿವಿಧೆಡೆ ತೆರಳಿ ಲಸಿಕೆ ನೀಡುವ ಉದ್ದೇಶದಿಂದ ಜ.6ರಂದು ಬ್ರಿಮ್ಸ್‌ನ ಆರೋಗ್ಯ ತಂಡದ ಎಲ್ಲ ಸದಸ್ಯರು ಬ್ರಿàಮ್ಸ್ ಬೋಧಕ ಆಸ್ಪತ್ರೆಗೆ ಆಗಮಿಸಿ ಒಗ್ಗೂಡಿ ಕಾರ್ಯಾಚರಣೆಗೆ ಮುಂದಾಗಿದ್ದು ವಿಶೇಷವಾಗಿತ್ತು. ಏರ್ ಪೋರ್ ಶಾಲೆ, ಬಾಲಕರ ಸರ್ಕಾರಿ ಪಿಯು ಕಾಲೇಜ್, ವಿಜxಮ್ ಬಾಲಕಿಯರ ಕಾಲೇಜ್, ಡಿವೈನ್ ಪಬ್ಲಿಕ್ ಶಾಲೆ, ಸೆಂಟ್ರಲ್ ಸ್ಕೂಲ್, ಎಂಬಿಎಎಸ್‌ಎಸ್ ವೈ ಶಾಲೆಗಳಿಗೆ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ತಂಡವು ತೆರಳಿ ಮಕ್ಕಳಿಗೆ ಲಸಿಕೆ ನೀಡಿತು.
ಜೊತೆಗೆ ಪೊಲೀಸ್ ಹೆಲ್ತ್ ಸೆಂಟರ್‌ನ ಆರೋಗ್ಯ ತಂಡವು ಕೂಡ ಕರ್ನಾಟಕ ಹೈಸ್ಕೂಲ್ ಮತ್ತು ಹೋಳಿ ಸೇಪರ್ಡ್ ಶಾಲೆಗಳಿಗೆ ತೆರಳಿ ಲಸಿಕೆ ನೀಡಿತು. ಜ.6ರಂದು ಭಾಲ್ಕಿ ತಹಶೀಲ್ದಾರ್ ಕೀರ್ತಿ ಚಾಲಕ, ಹುಮನಾಬಾದ ತಹಶೀಲ್ದಾರ್ ನಾಗಯ್ಯ ಹಿರೇಮಠ ಮತ್ತು ಬೀದರ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಸೇರಿದಂತೆ ಇನ್ನಿತರ ತಹಶೀಲ್ದಾರರು ಮತ್ತು ಅಧಿ ಕಾರಿಗಳು ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಲಸಿಕಾಕರಣ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಿರ್ದೇಶನ ಪಾಲನೆ ಮಾಡಿ: ಜಿಲ್ಲಾಡಳಿತವು ಕೋವಿಡ್-19ರ ರೂಪಾಂತರ ವೈರಸ್ ಓಮಿಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯದ ಸುರಕ್ಷತಾ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಕಾಲ-ಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಜಿಲ್ಲೆಯ ಜನರು ಪಾಲನೆ ಮಾಡಿ ಸಹಕರಿಸಬೇಕು ಎಂದು ಜಿಲ್ಲಾಧಿ ಕಾರಿಗಳು ಮನವಿ ಮಾಡಿದ್ದಾರೆ.
ಭಾಲ್ಕಿ ವಾರ್ ರೂಮ್: ಭಾಲ್ಕಿ ತಾಲೂಕಿನಲ್ಲಿನ ಕೋವಿಡ್-19 ವಾರ್ ರೂಮ್‌ನ ಸಹಾಯವಾಣಿ ದೂ.08484-262218ಗೆ ಕರೆ ಮಾಡಿ ಕೋವಿಡ್-19ಗೆ ಸಂಬಂ ಧಿಸಿದ ಸಂದೇಹಗಳನ್ನು ಪರಿಹರಿಸಿಕೊಳ್ಳ ಬಹುದು ಎಂದು ತಹಶೀಲ್ದಾರ್ ಕೀರ್ತಿ ಚಾಲಕ ತಿಳಿಸಿದ್ದಾರೆ.