Advertisement

ವಾರದಲ್ಲಿ ಒಂದು ದಿನ ಲಸಿಕೆ ಉತ್ಸವ; ಬುಧವಾರ ರಾಜ್ಯದಲ್ಲಿ 10 ಲಕ್ಷ ಲಸಿಕೆ ನೀಡಿಕೆ: ಸುಧಾಕರ್

12:42 PM Aug 30, 2021 | Team Udayavani |

ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ವಾರದಲ್ಲಿ ಒಂದು ದಿನ ಅಂದರೆ ಬುಧವಾರದಂದು ಲಸಿಕೆ ಉತ್ಸವ ಮಾಡುತ್ತೇವೆ. ಅಂದು 10 ಲಕ್ಷ ಲಸಿಕೆ ಕೊಡುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1.10 ಕೋಟಿ ಲಸಿಕೆ ಬಂದಿದೆ. ಲಸಿಕೆ ಪ್ರಮಾಣ ಬರುವುದು ಜಾಸ್ತಿಯಾಗಿದೆ. ಕೊಟ್ಟ ಭರವಸೆಯಂತೆ ಲಸಿಕೆ ಕಳುಹಿಸುತ್ತಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಸರಾಸರಿ 5 ಲಕ್ಷ ಲಸಿಕೆ ಕೊಡುತ್ತೇವೆ. ತಿಂಗಳಿಗೆ ಒಂದೂವರೆಯಿಂದ ಎರಡು ಕೋಟಿ ಲಸಿಕೆ ಕೊಡಲು ಕಾರ್ಯತಂತ್ರ ರೂಪಿಸಿದ್ದೇವೆ ಎಂದರು ಹೇಳಿದರು.

ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 42,909 ಕೋವಿಡ್ ಪ್ರಕರಣ ಪತ್ತೆ, 380 ಮಂದಿ ಸಾವು

ಇಡೀ ರಾಜ್ಯದಲ್ಲಿ ಶೇಕಡ 20ರಷ್ಟು ಎರಡನೇ ಡೋಸ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಶೇಕಡ 27 ರಷ್ಟು ಎರಡನೇ ಡೋಸ್ ನೀಡಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next