Advertisement

ನಟ ಮಹೇಶ್ ಬಾಬು ಅವರಿಂದ ಬರಿಪಲೇಮ್ ಗ್ರಾಮಸ್ಥರಿಗೆ ಉಚಿತ ಕೋವಿಡ್ ಲಸಿಕೆ

03:02 PM May 31, 2021 | Team Udayavani |

ಆಂಧ್ರ ಪ್ರದೇಶ : ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಾವು ದತ್ತು ಪಡೆದಿರುವ ಬರಿಪಲೇಮ್ ಹಳ್ಳಿಯ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.

Advertisement

ಇಂದು ( ಮೇ.31) ಮಹೇಶ್ ಬಾಬು ಅವರ ತಂದೆ ಕೃಷ್ಣಾ ಅವರ ಜನ್ಮ ದಿನ . ಜನ್ಮದಾತನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಮಹೇಶ್ ಬಾಬು, ಬರಿಪಲೇಮ್ ಗ್ರಾಮದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸುತ್ತಿದ್ದಾರೆ.

 

ತಮ್ಮ ‘ಶ್ರೀಮಂತಡು’ ಸಿನಿಮಾ ಬಿಡುಗಡೆಯ ನಂತರ ಆಂಧ್ರ ಪ್ರದೇಶದ ಬರಿಪಲೇಮ್ ಹಾಗೂ ಸಿದ್ದಪುರಂ ಎಂಬ ಎರಡು ಹಳ್ಳಿಗಳನ್ನು ಮಹೇಶ್ ಬಾಬು ಅವರು ದತ್ತು ಪಡೆದರು. ಅಂದಿನಿಂದ ಈ ಗ್ರಾಮಗಳ ಅಭಿವೃದ್ಧಿಯ ಹರಿಕಾರ ಆಗಿರುವ ಅವರು, ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಇದೀಗ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಹಳ್ಳಿಗಳ ಜನರ ನೆರವಿಗೆ ಧಾವಿಸಿದ್ದಾರೆ.

Advertisement

ಇನ್ನು ಮತ್ತೊಂದು ಗ್ರಾಮ ಸಿದ್ದಪುರಂ ಗ್ರಾಮಗಳ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸುವ ವ್ಯವಸ್ಥೆಯನ್ನೂ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮಹೇಶ್ ಬಾಬು ಅವರು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಭಾರತ ಸರ್ಕಾರವು 18 ವಯೋಮಾನದ ಮೇಲಿನವರು ಲಸಿಕೆ ಪಡೆಯಲು ಅವಕಾಶ ನೀಡಿರುವುದನ್ನು ಸ್ವಾಗತಿಸಿದ್ದ ಮಹೇಶ್ ಬಾಬು, ಎಲ್ಲರೂ ತಪ್ಪದೆ ಲಸಿಕೆ ಪಡೆಯುವಂತೆ ತಮ್ಮ ಅಭಿಮಾನಿಗಳಿಗೆ ಹಾಗೂ ಜನರಿಗೆ ತಿಳಿ ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next