Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿ ನಲ್ಲೂ ಕಾಲುಬಾಯಿ ಕಾಯಿಲೆಯ ಲಸಿಕೆ ಹಾಕಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬೆಂಗಳೂರು ಹಾಲು ಒಕ್ಕೂಟವು ಸಹ ಸಹಕಾರವನ್ನು ನೀಡುತ್ತಿದೆ. 1 ಲಕ್ಷ 87 ಸಾವಿರ 700 ಡೋಸ್ ಕಾಲುಬಾಯಿ ರೋಗದ ಲಸಿಕೆ ಹಾಗೂ 1 ಲಕ್ಷ 67,000 ಸಿರಿಂಜ್‌ಗಳನ್ನು ಸರಬರಾಜು ಮಾಡಲಾಗಿದೆ. ಬೆಂಗಳೂರು ಹಾಲು ಒಕ್ಕೂಟ ಕೂಡ ಲಸಿಕೆ ವಿತರಣೆಗೆ ಸಹಯೋಗ ನೀಡಿದೆ. ಬೆಂಗಳೂರು ಹಾಲು ಒಕ್ಕೂಟದಿಂದ ಒಟ್ಟು 36 ವಾಹನ 51 ಲಸಿಕೆದಾರರನ್ನು ಒದಗಿಸಲಾಗುತ್ತಿದೆ.
Related Articles
Advertisement
ಲಸಿಕಾ ವಿತರಣಾ ಕಾರ್ಯ ಪ್ರಾರಂಭ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 1, 62, 980 ಧನ ಮತ್ತು ಕಾಲುಬಾಯಿ ರೋಗ ಕಂಡು ಬಂದರೆ ಹಾಲಿನ ಉತ್ಪಾದನೆ ಕುಸಿಯುವ ಸೇರಿದಂತೆ ಜಾನುವಾರು ಗಳು ಸಾಯುವ ಆತಂಕ ಕೂಡ ಇದೆ. ಅದಕ್ಕಾಗಿ ಲಸಿಕಾ ವಿತರಣಾ ಕಾರ್ಯ ಪ್ರಾರಂಭಿಸಿದೆ.
ಕಳೆದ ಒಂದು ತಿಂಗಳ ಕಾಲ ಪ್ರತಿ ಹಳ್ಳಿಯಲ್ಲೂ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಲಿದೆ. ರೈತರಲ್ಲಿ ಲಸಿಕೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಮಟ್ಟದಲ್ಲಿ ರಾಸುಗಳಿಗೆ ಕಾಲುಬಾಯಿ ಲಸಿಕೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಲಸಿಕೆ ವಿತರಣೆಗಾಗಿ 65 ತಂಡಗಳನ್ನು ರಚಿಸಿದ್ದು. 276 ಮಂದಿ ಲಸಿಕೆದಾರರು ಪ್ರತಿದಿನ ಬೆಳಗ್ಗೆ 6 ರಿಂದ 11 ಗಂಟೆವರೆಗೆ ನಿಗದಿಪಡಿಸಿದ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಅದಕ್ಕಾಗಿ ಹಳ್ಳಿ ವಾರು ಮೈಕ್ರೋಪ್ಲಾನ್ ಸಿದ್ದಪಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೈನುಗಾರಿಕೆಯಲ್ಲಿ ಹೆಚ್ಚು ರೈತರು ತೊಡಗಿಸಿಕೊಂಡಿದ್ದಾರೆ.
ರಾಸುಗಳಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರ ವರೆಗೆ ಒಂದು ತಿಂಗಳ ಕಾಲ ಕಾಲು ಬಾಯಿ ರೋಗದ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ. ಎಲ್ಲಾ ರೈತರು ಮೊದಲು ಕಾಲುಬಾಯಿ ರೋಗದ ಲಸಿಕೆಯನ್ನು ರಾಸುಗಳಿಗೆ ಕೊಡಿಸಬೇಕು.– ಡಾ.ಸಿ.ಎಸ್.ಅನಿಲ್‌ಕುಮಾರ್, ಜಿಲ್ಲಾ ಮುಖ್ಯ ಪಶುಪಾಲನಾಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ ಅಭಿಯಾನಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಪ್ರತಿ ರೈತರು ತಮ್ಮ ರಾಸುಗಳಿಗೆ ತಪ್ಪದೇ ಕಾಲುಬಾಯಿ ರೋಗದ ಲಸಿಕೆಯನ್ನು ಹಾಕಿಸಬೇಕು. ಇದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ. ಕಾಲುಬಾಯಿ ರೋಗದ ತಡೆಗಟ್ಟಬೇಕಾದರೆ ಪ್ರತಿ ರೈತರು ರಾಸುಗಳಿಗೆ ಲಸಿಕೆ ಹಾಕಿಸಿ. ಮೂರನೇ ತಿಂಗಳು ಮೇಲ್ಪಟ್ಟ ಎಲ್ಲಾ ರಾಸುಗಳಿಗೆ ಲಸಿಕೆ ಹಾಕಿಸಬೇಕು.– ಡಾ.ಜಗದೀಶ್, ಉಪನಿರ್ದೇಶಕರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
– ಎಸ್.ಮಹೇಶ್