Advertisement
ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ವಿಎಗಳ ನಿಯೋಜನೆ, ಅನ್ಯ ಇಲಾಖೆ ಕೆಲಸ ಕಾರ್ಯ ನಿರ್ವಹಣೆಯಿಂದಾಗಿ ಒತ್ತಡದಲ್ಲಿ ಸಾರ್ವಜನಿಕರು ಮತ್ತು ಸರಕಾರದ ನಡುವೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ವಿಎಗಳದ್ದು.
Related Articles
Advertisement
ಇಲ್ಲಿನ ಬಹುತೇಕ ವಿಭಾಗದಲ್ಲಿ ಎಫ್ ಡಿಎ, ಎಸ್‌ಡಿಎ, ಕ್ಲರಿಕಲ್ ಪೋಸ್ಟ್ ಗಳು ಖಾಲಿ ಇದ್ದು, ಇವರ ಕೆಲಸವನ್ನು ವಿಎ ಅವರೇ ನಿರ್ವಹಿಸಬೇಕಿದೆ. ಜಿಲ್ಲೆಯಲ್ಲಿ ಕೊನೆಯದಾಗಿ 2019ರಲ್ಲಿ ವಿಎ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಬಳಿಕ ಕೋವಿಡ್ ಕಾರಣಗಳಿಂದ ಎರಡು ವರ್ಷ ತಡವಾಗಿ ಪ್ರಕ್ರಿಯೆ ನಡೆದಿತ್ತು. ರಾಜ್ಯದಲ್ಲಿ ವಿಎಗಳ ನೇಮಕಾತಿ ನಡೆಸುವ ಜಿಲ್ಲಾಧಿಕಾರಿಗಳಿಗಿರುವ ಅಧಿಕಾರವನ್ನು ಇತ್ತೀಚೆಗೆ ಸರಕಾರ ರದ್ದುಗೊಳಿಸಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಏನೆಲ್ಲಾ ಸಮಸ್ಯೆಗಳಾಗುತ್ತಿವೆ ?
* ಜನರಿಗೆ ಸಕಾಲದಲ್ಲಿ ವಿಎಗಳು ಸಿಗದೇ ಆದಾಯ, ಜಾತ್ರಿ ಪ್ರಮಾಣ ಪತ್ರ ಮೊದಲಾದ ಸೌಲಭ್ಯ ಪಡೆಯಲು ವಿಳಂಬ
* ಕೃಷಿ ಜಮೀನಿಗೆ 11ಎ ನಕ್ಷೆ ಕೋರಿ ಬಂದ ಅರ್ಜಿಗಳ ವಿಲೇವಾರಿ ಕೆಲಸದಲ್ಲಿ ಒತ್ತಡ, 7ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ
* ಅಕ್ರಮ-ಸಕ್ರಮ ಕಡತ ವಿಲೇವಾರಿ ಕೆಲಸಗಳಿಗೆ ಹಿನ್ನಡೆ
ಕಂದಾಯ ಸೇವೆಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡು ಉತ್ತಮ ಸೇವೆ ಕೊಡುತ್ತಿದೆ. ಗ್ರಾಮ ಲೆಕ್ಕಾಧಿಕಾರಿಗಳು ನಿರಂತರ ಶ್ರಮದಿಂದ ಈ ಗುರಿ ಸಾಧ್ಯವಾಗಿದೆ. ವಿಎಗಳ ಕೊರತೆಯಿದ್ದರೂ ಎಲ್ಲವನ್ನು ಸರಿದೂಗಿಸಿಕೊಂಡು ಸಾರ್ವಜನಿಕರಿಗೆ ಸೇವೆಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿದ್ದು, ಜನರಿಗೆ ತೊಂದರೆಯಾಗದಂತೆ ಕಂದಾಯ ಇಲಾಖೆ ಸೇವೆ ನೀಡಲಿದೆ. ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಎಗಳ ಶೀಘ್ರ ನೇಮಕಾತಿ ಸಂಬಂಧಿಸಿ ಮತ್ತೂಮ್ಮೆ ಸರಕಾರದ ಗಮನಕ್ಕೆ ತರಲಾಗುವುದು. – ಕೂರ್ಮಾ ರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ