Advertisement

ನೂತನ ಜಿಲ್ಲೆ ಇನ್ನೊಂದು ಯಾದಗಿರಿ ಆಗದಿರಲಿ: ಉಗ್ರಪ್ಪ

03:25 PM Feb 27, 2021 | Team Udayavani |

ಹೊಸಪೇಟೆ: ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಿಜಿಸಿ, ಪ್ರತೇಕ ವಿಜಯನಗರ ಜಿಲ್ಲೆ ಮಾಡಿದವರು ಎರಡೂ ಜಿಲ್ಲೆಯ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಿ ಎಂದು ಕಾಂಗ್ರೆಸ್‌ ವಕ್ತಾರ ಉಗ್ರಪ್ಪ ಹೇಳಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿಜಯನಗರ ಹೆಸರಿನಲ್ಲಿ ಘೋಷಣೆಯಾದ ನೂತನ ಜಿಲ್ಲೆ ಇನ್ನೊಂದು ಯಾದಗಿರಿ ಆಗದಿರಲಿ ಎಂದು ಸಚಿವ ಆನಂದ ಸಿಂಗ್‌ ಹೆಸರು ಹೇಳದೇ ಟಾಂಗ್‌ ನೀಡಿದರು.

ಎರಡು ಜಿಲ್ಲೆ ಆಗಬಿಟ್ರೆ ಅಭಿವೃದ್ಧಿ ಆಗಲಿಕ್ಕೆ ಸಾಧ್ಯವಿಲ್ಲ. ಜಿಲ್ಲೆಗೆ ಕಾರಣರಾದವರಿಗೆ ಮನವಿ ಮಾಡುವೆ. ಉದ್ಯೋಗ ಸೇರಿ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎರಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು. ಇದಕ್ಕಾಗಿ ಮುಂದಿನ ಬಜೆಟ್‌ ನಲ್ಲಿ ಎರಡು ಜಿಲ್ಲೆಗೆ ತಲಾ 2.5 ಸಾವಿರ ಕೋಟಿ ರೂದಂತೆ ಒಟ್ಟು 5 ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಟಿ.ಬಿ. ಡ್ಯಾಂ ಹೂಳು: ಟಿ.ಬಿ ಡ್ಯಾಂ ಹೂಳು ತೆರವಿಗೆ ಹಾಗೂ ನೀರು ಶೇಖರಣೆ ಮಾಡಿ, ಎರಡು ಜಿಲ್ಲೆಗೆ ಸಂಪರ್ಕ ಹಂಚಿಕೆ ಮಾಡಬೇಕು. ವಿಜಯನಗರ ಸಾಮ್ರಾಜ್ಯದ ಇತಿಹಾಸ ತಿಳಿದರೆ ವೈಭವ ಇತ್ತು. ಆದರೆ ಹಂಪಿಯಲ್ಲಿ ಕುಡಿವ ನೀರು, ಚರಂಡಿ ಸೇರಿ ನಾನಾ ಸಮಸ್ಯೆ ಇದ್ದು, ಪ್ರವಾಸಿಗರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಮತ್ತು ಇಲ್ಲಿನ ಜನಪ್ರತಿನಿಧಿ ಗಳು ಇತ್ತ ಗಮನ ಹರಿಸಬೇಕಿದೆ ಎಂದರು.

ರೈತ ವಿರೋಧಿ  ನೀತಿ: ದೇಶಾದ್ಯಂತ ರೈತರ, ಜನ ವಿರೋಧಿ ನೀತಿಗಳನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟಗಾರರಿಗೆ ಆಂದೋಲನ ಜೀವಿ ಎಂದು ಪ್ರಧಾನಿ ಬೇಜವಾಬ್ದಾರಿಯಾಗಿ ಹೇಳಿಕೆ ನೀಡುತ್ತಾರೆ. ಆದರೆ ರೈತರ, ಜನಸಾಮಾನ್ಯರ ರಕ್ತ ಹೀರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೊಸ ತಳಿಯ ಜಿಗಣೆ ಜೀವಿಗಳು ಉತ್ಪದನೆಯಾಗಿವೆ ಎಂದು ಹೇಳಬಹುದು.

Advertisement

ದೇಶದಲ್ಲಿ ರೈತರಿಂದ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಬಿಜೆಪಿ ನೇತೃತ್ವದ ಸರಕಾರ ತೋಲಗಿದರೆ ಸಾಕು ಎಂದು ದೇಶದ ಜನರು ಕಾಯುತ್ತಿದ್ದಾರೆ ಎಂದು ಹೇಳಿದರು.

ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎನ್‌. ಮೊಹಮ್ಮದ್‌ ಇಮಾಮ್‌ ನಿಯಾಜಿ, ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೋಮಪ್ಪ, ಮುಖಂಡರಾದ ಗುಜಲ್ಲ ನಾಗರಾಜ್‌, ಎನ್‌. ರಾಮಕೃಷ್ಣ ಹಾಗೂ ವೀರಸ್ವಾಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next