ಮುಂಡಗೋಡ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ ಅವರನ್ನು ಸ್ಥಾನದಿಂದ ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ
ಕಳೆದ ಒಂದು ವಾರದಿಂದ ಮಾಜಿ ಶಾಸಕ ವಿ.ಎಸ್.ಪಾಟೀಲ ಕಾಂಗ್ರೆಸ್ ಗೆ ಸೇರುವ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಅಲ್ಲದೇ, ಬಿಜೆಪಿ ಪಕ್ಷಕ್ಕೆ ಬಂದಿರುವ ವಲಸಿಗರಿಂದ ತಮಗೆ ಹಾಗೂ ಕಾರ್ಯಕರ್ತರಿಗೆ ತಮ್ಮನ್ನು ನಂಬಿರುವ ಅನ್ಯಾಯ ಮಾಡಲಾಗಿದೆ. ಇದರಿಂದ ಬೇಸತ್ತು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುವುದಾಗಿ ವಿ.ಎಸ್.ಪಾಟೀಲ ಅವರು ಹೇಳಿದ್ದರು.
ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರನ್ನು ಮನವೊಲಿಸಲು ಬಿಜೆಪಿ ರಾಜ್ಯ ಮುಖಂಡರು ಪ್ರಯತ್ನಿಸಿದ್ದರು ಎನ್ನಲಾಗಿತ್ತು. ಆದರೆ ವಿ.ಎಸ್.ಪಾಟೀಲ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ ಅನಿವಾರ್ಯವಾಗಿ ಪಾಟೀಲರ ಅಧ್ಯಕ್ಷ ಹುದ್ದೆಯನ್ನು ತಕ್ಷಣಕ್ಕೆ ಜಾರಿಯಾಗುವಂತೆ ಹಿಂಪಡೆಯಲಾಗಿದೆ.
ಈ ಮೂಲಕ ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಮೂಲ ಹಾಗೂ ವಲಸಿಗರ ರಾಜಕಾರಣ ಮತ್ತೊಂದು ಮಜಲು ಸೇರಲು ಮುನ್ನುಡಿ ಬರೆದಂತಾಗಿದೆ.
ಇದನ್ನೂ ಓದಿ : ಹುಣಸೂರು: ದೊಡ್ಡಹೆಜ್ಜೂರು ಗ್ರಾ.ಪಂ.ಉಪಾಧ್ಯಕ್ಷರಾಗಿ ಯಶೋಧ ಮಂಜುನಾಥ್ ಅವಿರೋಧ ಆಯ್ಕೆ