ಸಂತೆ ಎಂದ ಕೂಡಲೆ ಮನಸ್ಸಿಗೆ ಬರುವುದು ರಸ್ತೆ ಬದಿ ಕುಳಿತುಕೊಂಡು ಇಲ್ಲವೇ, ಗಾಡಿಗಳ ಮೇಲೆ ತರಕಾರಿ ಮತ್ತು ಗೃಹಬಳಕೆಯ ಉತ್ಪನ್ನಗಳನ್ನು ಮಾರುವ ದೃಶ್ಯಾವಳಿ. ಕಣ್ಣಿಗೆ ಮತ್ತು ಮನಸ್ಸಿಗೆ ಆಪ್ತ ಎನಿಸುವ ಈ ದೃಶ್ಯವನ್ನೇ ನೆನಪಿಸುವ ಒಂದು ಕಾರ್ಯಕ್ರಮ “ಚಿತ್ರ ಸಂತೆ’. ಒಂದು ಪ್ರಮುಖ ವ್ಯತ್ಯಾಸವೆಂದರೆ, ಇದು ಚಿತ್ರಗಳ ಸಂತೆ.
ನಮ್ಮ ರಾಜ್ಯದ ಕಲಾವಿದರು ಮಾತ್ರವಲ್ಲದೆ ಹೊರ ರಾಜ್ಯಗಳ, ಅಷ್ಟೇ ಏಕೆ ಹೊರ ದೇಶಗಳ ಕಲಾವಿದರು ಸಂತೆಗೆ ಬರುತ್ತಿದ್ದಾರೆ. ಪ್ರದರ್ಶನಕ್ಕಿಡಲು ತಮ್ಮ ಕಲಾಕೃತಿಗಳನ್ನೂ ತರುತ್ತಿದ್ದಾರೆ. ಇಲ್ಲಿಗೆ ಬಂದರೆ ಕಂಗಳಿಗೆ ಹಬ್ಬ ಖಂಡಿತ. ಬಣ್ಣ ಬಣ್ಣದ ಚಿತ್ತಾರಗಳು, ನಾನಾ ಅರ್ಥಗಳನ್ನು ಸು#ರಿಸುವ, ಮೆದುಳಿಗೆ ಕಸರತ್ತು ನೀಡುವ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಮುಖವಾಡಮಯ: ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಗಳ ಕೈಗಳಲ್ಲರಳಿರುವ ಮುಖವಾಡಗಳು ಸಂತೆಯ ಮತ್ತೂಂದು ವಿಶೇಷ. ಜನಪದ ಕಲೆಯನ್ನು ಪ್ರತಿಬಿಂಬಿಸುವ ಮುಖವಾಡಗಳು ಒಂದೊಂದೂ ಸಂದೇಶವನ್ನೇನೋ ನೀಡುತ್ತಿರುವಂತಿದೆ.
ಎಲ್ಲಿ?: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಯಾವಾಗ?: ಜನವರಿ 7