Advertisement

ಪತಿ ನಟರಾಜನ್‌ ವಿಧಿವಶ ; ಪೆರೋಲ್‌ ಮೇಲೆ ಶಶಿಕಲಾ ಚೆನ್ನೈಗೆ 

08:33 AM Mar 20, 2018 | Team Udayavani |

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಶಿಕ್ಷೆಗೊಳಗಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಪತಿ  ಮಾರುತಪ್ಪನ್‌ ನಟರಾಜನ್‌ ಅವರು  ಬಹುಅಂಗಾಂಗ ವೈಫ‌ಲ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಸುಕಿನ 1.30 ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಈ ಹಿನ್ನಲೆಯಲ್ಲಿ ಶಶಿಕಲಾ ಪೆರೋಲ್‌ ಮೇಲೆ ಚೆನ್ನೈಗೆ ತೆರಳುತ್ತಿರುವುದಾಗಿ ತಿಳಿದು ಬಂದಿದೆ.

Advertisement

ಶಶಿಕಲಾ ಚೆನ್ನೈಗೆ ತೆರಳಿದ ಬಳಿಕವೇ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. 

ಪೆರೋಲ್‌ಗಾಗಿ ಮನವಿ ಸಲ್ಲಿಸಿದ ಕೂಡಲೇ ತುರ್ತಾಗಿ ಕಳುಹಿಸಿಕೊಡಲಾಗುತ್ತದೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ. 

ಬಹುಅಂಗಾಂಗ ವೈಫ‌ಲ್ಯ ಮತ್ತು ಶ್ವಾಸಕೋಶದ ಸೊಂಕಿನಿಂದ ಬಳಲುತ್ತಿದ್ದ ನಟರಾಜನ್‌ ಮಾರ್ಚ್‌ 16 ರಂದು ಗ್ಲೆನೇಗಲ್‌ ಗ್ಲೋಬಲ್‌ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next