Advertisement

UV Fusion: ಆಕಸ್ಮಿಕವೇ ದಂತಕಥೆಯಾದಾಗ..!

10:24 AM May 31, 2024 | Team Udayavani |

ಜೀವನದಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ವಿಷಯಗಳು ಸಂಭವಿಸುತ್ತಲೇ ಇರುತ್ತವೆ. ಕೆಲವೊಮ್ಮೆ ಇಚ್ಛೆಯಿಂದಲೋ ಅಥವಾ ಆಕಸ್ಮಿಕವಾಗಿಯೋ ಕೆಲವು ಘಟನೆಗಳು ಸಂಭವಿಸುತ್ತವೆ. ಅವು ನಮ್ಮ ವೈಯಕ್ತಿಕ ಹಿತಾಸಕ್ತಿಗೆ ಒಳ್ಳೆಯದೋ, ಕೆಟ್ಟದೋ ಎಂದು ಹೇಳಿದರೆ ಅದು ನನ್ನ ಸ್ವಾರ್ಥವಾಗುತ್ತದೆ ಮತ್ತು ಆ ವಿಷಯಗಳು ನೆನಪಿಡುವಂಥ ವಿಷಯವು ಆಗುವುದಿಲ್ಲ, ಬದಲಾಗಿ ಅವು ಲೋಕಹಿತಕ್ಕಾಗಿ ನಡೆದರೆ ಅದು ಚರ್ಚಾಸ್ಪದ. ಇಂದು ನಾನು ಹೇಳ ಬಯಸುತ್ತಿರುವ ಕೆಲವು ಆಕಸ್ಮಿಕ ಅಚಾತುರ್ಯದಿಂದ ನಡೆದ ಘಟನೆ ಲೋಕಕ್ಕೆ ವರದಾನವಾಗಿ ಬದಲಾದ ನೈಜ ಉದಾಹರಣೆಗಳು.

Advertisement

ಅಪಘಾತ ಎಂದರೆ ಕೇವಲ ರಕ್ತ, ಸಾವು, ನೋವುಗಳಲ್ಲ. ನಾನು ಹೀಗೆ ಹೇಳುವ ಆಕಸ್ಮಿಕ ಘಟನೆ ಮಾನವ ಸಂಕುಲಕ್ಕೆ ಸಿಕ್ಕ ಕೊಡುಗೆ.

ಅದು 70ರ ದಶಕದ ಒಬ್ಬ ಸಂಶೋಧಕ ಆಕಸ್ಮಿಕವಾಗಿ ಒಂದು ಉಪಕರಣದ ವೈರಿಂಗ್‌ ಅನ್ನು ತಪ್ಪಾಗಿ ಮಾಡುತ್ತಾರೆ. ವಿದ್ಯುತ್‌ ಹರಿಸಿದಾಗ ಅದು ನಡುಗತೊಡಗಿತು, ಗೊತ್ತೇ ಆಗದಂತೆ ಮಾಡಿದ ತಪ್ಪಿನಿಂದ ಸಾವಿರಾರು ರೂಪಾಯಿಯ ಉಪಕರಣ ಹಾಳಾಯಿತೇನೋ ಎಂಬ ಭಯ. ಅದೇ ಸಮಯಕ್ಕೆ ಆ ಸಂಶೋಧಕನಿಗೆ ಆಗಿದ್ದು ಇಡೀ ಲೋಕಕ್ಕೆ ಬೇಕಾದ ಮಿಡಿತದ ಅನುಭವ. ಆ ಅನುಭವ ಹೊಸತನಕ್ಕೆ ನಾಂದಿಯಾಯಿತು.

ಹೌದು ಅಂದು ಆ ಸಂಶೋಧಕನ ಒಳಮನದ ಅರಿವಿಗೆ ಬಂದದ್ದು ಕೃತಕ ಹೃದಯ ಮಿಡಿತ. “ಆಕಸ್ಮಿಕವಾಗಿ ಮಾಡಿದ್ದ ತಪ್ಪನ್ನೇ ಮತ್ತೆ ಅಭಿವೃದ್ಧಿಪಡಿಸಿ ತಪ್ಪು ಜೋಡಣೆಯನ್ನೇ ಸರಿಯೆಂದು ತಯಾರಿಸಿದ ಉಪಕರಣವೇ “ಹಾರ್ಟ್‌ ಪೇಸ್‌ ಮೇಕರ್‌’.

ಸಂಶೋಧನೆಯ ತೀವ್ರತೆಯಿಂದ ಮೊದಲು ನಾಯಿಯ ಹೃದಯಕ್ಕೇ ಈ ಹಾರ್ಟ್‌ ಪೇಸರ್‌ ನ್ನು ಅಳವಡಿಸಿ ನೋಡಿದಾಗ ನಿಂತ ಹೃದಯ ಬಡಿಯ ತೊಡಗಿತ್ತು.

Advertisement

70-80ರ ದಶಕದಲ್ಲಿ ಆಕಸ್ಮಿಕವಾಗಿ ಬಂದ ಈ ಉಪಕರಣ ಇಂದಿಗೂ ಲಕ್ಷಾಂತರ ಜನರ ಹೃದಯಕ್ಕೆ ಕೃತಕ ಬಡಿತ ನೀಡುತ್ತಿದೆ. ಅಂದಹಾಗೆ ಆ ಸಂಶೋಧಕನ ಹೆಸರು ವಿಲ್ಸನ್‌ ಗ್ರೇಟ್‌ಬ್ಯಾಚ್‌. ತನ್ನ 42ನೇ ವಯಸ್ಸಿನಲ್ಲಿ ಕಂಡು ಹಿಡಿದ ಆ ಉಪಕರಣ ಹಾರ್ಟ್‌ ಪೇಸ್‌ ಮೇಕರ್‌. ಇಂದು ಎrಛಿಚಠಿಚಿಚಠಿcಜ. ಐnc ಒಂದು ಮಿಲಿಯನ್‌ ಡಾಲರ್ಸ್‌ ಕಂಪೆನಿಯಾಗಿದೆ. ನೋಡಿ ಆಕಸ್ಮಿಕವಾಗಿ ನಡೆದ ಆ ಘಟನೆ ಕೊಟ್ಟದ್ದು ಸಾವಿರಾರು ಜೀವ..! ಲೋಕಹಿತಕ್ಕಾಗಿ ಬಂದ ಎಲ್ಲಾ ಸಂಶೋಧಕರಿಗೆ ಕೃತಜ್ಞರಾಗಿರೋಣ.

-ಮಂಜುನಾಥ್‌ ಕೆ. ಆರ್‌

ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next