ಪ್ರತಿ ಪದವನ್ನು ಲೇಖಕರು ಅವರ ತೆಕ್ಕೆಗೆ ಬೇಕಾದ ರೀತಿಯಲ್ಲಿ ಸಮರ್ಪಕವಾಗಿ ಬಳಸಿಕೊಂಡು ಪಕ್ವ ಭಂಡಾರವಾಗಿ ರೂಪಿಸಿ ಓದುಗರ ಮುಂದಿರಡುವಲ್ಲಿ ಯಶಸ್ವಿಯಾಗುತ್ತಾರೆ.ಹಾಗಾದ್ರೆ ನಾವು ಬಹಿರಂಗವಾಗಿ ಒಂದು ಪದಕ್ಕೆ ಹೊಸ ರೂಪ ನೀಡೋಣ, ಏನಂತೀರಾ?
ನನ್ನತನವನ್ನು ಪ್ರದರ್ಷಿಸುವ “ನಾನು’ ಎಂಬ ಶಬ್ದ ಕೇಳಿರಬಹುದು. ಈ ನಾನು ಎಂಬ ಶಬ್ದದ ಉದ್ಗಾರದೊಡನೆ ಧನಾತ್ಮಕ ಯೋಚನೆ ನಿರ್ಮಾಣವಾಗುವುದಕ್ಕಿಂತ ಮನಸ್ಸಿಗೆ ನಾಟುವುದು ಒಂದಿಷ್ಟು ಋಣಾತ್ಮಕ ಛಾಯೆಯೇ.
“ನಾನು’ ಎಂದರೆ ಸಾಮಾನ್ಯವಾಗಿ ಅದೊಂದು ಅಹ:ಮಿಕೆಯ ಸಂಕೇತದಂತೆ ಕಾಣುತ್ತೇವೆ. ಸಾಲಿನ ಜೋಡಣೆಯಿಂದ ಬೇರ್ಪಟ್ಟ “ನಾನು’ ಎಂದೆಂದಿಗೂ ಅದು ಗರ್ವದ ಪ್ರತೀಕ ಹಾಗೂ ಪ್ರತ್ಯೇಕ ನಿಲುವಿನ ಪದ. “ನಾನು’ ಎಂದರೆ ಪ್ರೀತಿ, ಕರುಣೆ, ತಾಳ್ಮೆ, ಸ್ವತಂತ್ರದ ಸ್ವಾವಲಂಬನೆಯ ಭಾವನೆ ಎಂದು ವರ್ಣಿಸುವವರು ಅತ್ಯಲ್ಪವೇ ;
ಹಾಗಾದ್ರೆ ಆಂಗ್ಲ ಭಾಷೆಯಲ್ಲಿ “ನಾನು’ ಎಂಬುವುದಕ್ಕೆ ಏನನ್ನು ಬಳಸುತ್ತೇವೆ ? ಹೌದು ಅದು “ಐ’ ಎಂಬ ಪದ ಬಳಸುವುದು ಗೊತ್ತೇ ಇದೆ. ಈ “ಐ’ ಏನನ್ನು ಸೂಚಿಸುತ್ತೆ ? ಎಂದಾದರೂ ಇದರ ಸುತ್ತ ಗಿರಕಿ ಹೊಡೆದಿದ್ದೀರಾ ! ಇದು ಇಂಗ್ಲಿಷ್ ವರ್ಣಮಾಲೆಯ 9ನೇ ಅಕ್ಷರ ಎಂಬುದೊಂದು ಬಿಟ್ಟರೆ ಇದಕ್ಕೆ ಹೊಸದೊಂದು ರೂಪ ನೀಡುವುದು ಬೇಡವೇ; ಇದನ್ನು ನಮ್ಮ ಪರಿಚಯಾತ್ಮಕ ವ್ಯಾಖ್ಯಾನವಾಗಿ ನಾವು ಸಾಮಾನ್ಯವಾಗಿ ಬಳಸುತ್ತೇವೆ. ಕನ್ನಡದ “ನಾನು’ ಎಂಬ ಪದದಂತೆ ಪೂರ್ಣ ವಾಕ್ಯದಿಂದ ಈ “ಐ’ ಯನ್ನು ಕಿತ್ತು ತೆಗೆದು ಈಗ ಪ್ರತ್ಯೇಕಿಸೋಣ. ಇವಾಗ ಹೇಳಿ ಏನನ್ನು ಇದು ಸೂಚಿಸಿದರೆ ಉತ್ತಮ ?
“ಐ’ ಎಂದರೆ ಇಂಪ್ರೂವೆ¾ಂಟ್ ಅಂತ ಹೇಳ್ಳೋಣವೇ ? ಖಂಡಿತ ನನ್ನ ಪ್ರಕಾರ ಅದು ಅರ್ಥ ವ್ಯತ್ಯಾಸವಾಗದು. “ಐ’ ಎಂಬುವುದನ್ನು ಧನಾತ್ಮಕ ರೂಢಿಯಾಗಿ ತೆಗೆದುಕೊಳ್ಳೋಣ.ಇಂಗ್ಲಿಷ್ ಪದಗಳ ಸಾಲಿನಲ್ಲಿ ಒಂದೇ ಅಕ್ಷರ ಒಂದು ಪದವಾಗಿ ಅರ್ಥವಾಗಿ ನಿಲ್ಲುವುದು ಅದು ಅಕ್ಷರ “ಐ’ ಮಾತ್ರ . ಆದ್ದರಿಂದ ಈ ಪದ ಸ್ವಾವಲಂಬನೆಯ ಪತಾಕೆಯಂತೆ ಗೋಚರವಾಗುತ್ತದೆ.
ತಾನು ಏನನ್ನು ಸಾಧಿಸಲಿಲ್ಲ ಅಥವಾ ತಾನೇನನ್ನೂ ಗೈಯಲ್ಲಿಲ್ಲವೆಂದು ಸಫಲತೆಯ ದಾರಿಯನ್ನೇ ಇಂಗ್ಲಿಷ್ ನಲ್ಲಿ ಅನುವಾದಿಸಲಿ ಅಥವಾ ತಾನು ಗೆದ್ದೆ ಅಥವಾ ಸಾಧಿಸಿದ ಸಂಭ್ರಮವನ್ನೇ ಪಡಿಯಚ್ಚಾಗಿಸಲಿ ಅವ ಅಥವಾ ಅವಳು “ಐ’ ಎಂದು ಆರಂಭದಲ್ಲಿ ಉಪಯೋಗಿಸಲೇಬೇಕು. ಅರ್ಥಕ್ಕೆ ಧಕ್ಕೆ ಬಾರದಿರಲು ಆ ಪದ ಬೇಕೇ ಬೇಕು.
ಆ “ಐ’ ಎಂಬ ಪದ ಸಂತೋಷದಲ್ಲಿರುವವರಿಗೆ ಹೊಸ ಅಧ್ಯಾಯವನ್ನು ಬಿಡಿಸಿಟ್ಟರೆ ಸೋಲುಗಳ ಅಡಿಯಲ್ಲಿ ನಿಲುಗಿರುವವರಿಗೆ ಹೇಗೆ ಬಡಿದೇಳಬೇಕು ಎಂದು ಏಕಾಂಗಿ ಅಕ್ಷರವಿದ್ದ ಆ “ಐ’ ಎಂಬ ಪದ ಉಸುರುತ್ತದೆ. ಹಾಗಾದ್ರೆ ನಾನು ಸಂಭೋಧಿಸುತ್ತೇನೆ ಅದು “ಐ’ ಎಂದರೆ ಖಡಾ ಖಂಡಿತವಾಗಿ ಇಂಪ್ರೂವ್ಮೆಂಟ್.. ಮತ್ತೆ ನೀವು ಹೇಳಿ “ಐ’ ಅಂದ್ರೆ?
ಸಮ್ಯಕ್ತ್ ಜೈನ್
ಕಡಬ