Advertisement

UV Fusion : ಕಸದಿಂದ ರಸ

10:46 AM Sep 11, 2023 | Team Udayavani |

ಕಸದಿಂದ ರಸ ಇತ್ತೀಚಿಗೆ ಹೆಚ್ಚು ಪ್ರಚಲಿತದಲ್ಲಿರುವ ಮಾತು. ಜಾಗತಿಕ ತಾಪಮಾನ ಏರಿಕೆ ನಾವೆಲ್ಲರೂ ಇಂದು ಕಂಡು, ಅನುಭವಿಸುತ್ತೀದ್ದೇವೆ. ಈ ಕಾಲಘಟ್ಟದಲ್ಲಿ ವಾತಾವರಣದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸುಸ್ಥಿರ ಬೆಳವಣಿಗೆಗೆ ಅಳಿಲ್ಲ ಸೇವೆ ಸಲ್ಲಿಸಬೇಕಾಗಿದೆ. ಕಲ್ಪವೃಕ್ಷ ಎಂದು ಕರೆ ಯು ವ ತೆಂಗಿನಮರದ ಬಳಕೆ ನಾನಾ ರೀತೀಯಲ್ಲಿ ಆಗುತ್ತದೆ ಕರಾವಳಿಯ ಎಲ್ಲ ಅಡುಗೆಯಲ್ಲಿ ತೆಂಗಿನಕಾಯಿ ಇರಲೇಬೇಕು.

Advertisement

ಚಟ್ನಿ, ಸಾಂಬಾರು, ಹೋಳಿಗೆ ಎಲ್ಲದರಲ್ಲಿ ಬಳಕೆಯಾಗುತ್ತದೆ. ಗಾಣದಿಂದ ತೆಗೆದ ತೆಂಗಿನೆಣ್ಣೆಒಂದು ಸಾವಯವ, ಆರೋಗ್ಯಕರ ಆಹಾರ ಪದಾರ್ಥ. ತೆಂಗಿನಮರದ ಗರಿಗಳಿಂದ ಹೆಣೆದು ಮಾಡಿದ ಮಡಲುಗಳು ದೈವ ನರ್ತನಗಳಲ್ಲಿಯೂ ಬಳಕೆ ಆಗುತ್ತದೆ. ತೆಂಗಿನಮರದ ಎಲ್ಲ ಭಾಗಗಳನ್ನು ಮನುಷ್ಯನು ಬಳಸುವುದರಿಂದ ಇದನ್ನು ಕಲ್ಪವೃಕ್ಷ ಎನ್ನಲಾಗುತ್ತದೆ.

ಈ ತೆಂಗಿನಕಾಯಿಯ ಗೆರಟೆ ಕೂಡ ಬಹುಉಪಯೋಗಿ. ತೆಂಗಿನಕಾಯಿಯ ಚಿಪ್ಪು ಎಂದ ಕೂಡಲೇ ಹೆಚ್ಚಿನವರಿಗೆ ಅನ್ನಿಸುವುದು ಅದೊಂದು ಕಸ ಅಥವಾ ಬೆಂಕಿ ಉರಿಸಬಲ್ಲ ವಸ್ತು ಮಾತ್ರವಲ್ಲ ಇದರಿಂದ ಅನೇಕ ಕಲಾತ್ಮಕ ರಚನೆಗಳನ್ನು ಮಾಡಬಹುದಾಗಿದೆ. ತೆಂಗಿನಕಾಯಿಯ ಚಿಪ್ಪಿನಿಂದ ಮಾಡಿದ ವಿಶಿಷ್ಟ, ವೈವಿಧ್ಯಮಯ ಕಲಾತ್ಮಕ ರಚನೆಗಳು ಕಲಾರಸಿಕರ ಕಣ್ಣಿಗೆ ತಪ್ಪು ನೀಡುತ್ತದೆ. ಇದರಲ್ಲಿ ಹಲವು ಬಗೆಗಳನ್ನು ಕಾಣಬಹುದು. ಅವುಗಳೆಂದರೆ ಅಲಂಕಾರಿಕ ವಸ್ತುಗಳು, ದೈನಂದಿನ ಜೀವನದಲ್ಲಿ ಬಳಕೆಯಾಗುವ ವಸ್ತುಗಳು ಅಥವಾ ಉಡುಗೊರೆಯಾಗಿ ನೀಡುವಂತಹ ಅನೇಕ ಕಲಾತ್ಮಕ ರಚನೆಗಳು ತಯಾರಾಗುತ್ತದೆ.

ಉಡುಪಿಯ ಚಿತ್ರಕಲಾಮಂದಿರ ದ್ರಶ್ಯಕಲಾ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಗೆರಟೆ ಕಲಾತ್ಮಕ ರಚನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಪ್ರತಿಯೊಬ್ಬರೂ ಮನೋರಂಜನೆ, ಜ್ಞಾನ, ಕೌಶಲಗಳನ್ನು ಬಳಸಿ ತಮ್ಮದೇ ಆದ ಕಲಾಕೃತಿಗಳನ್ನು ರಚಿಸಿದರು.

ನನ್ನ ಸಹಪಾಠಿಗಳು ಮೊದಲ ಗೆರಟೆಯನ್ನು ಶುಚಿಗೊಳಿಸಿ, ತಮಗೆ ಬೇಕಾದ ಆಕೃತಿಗಳಿಗೆ ಕತ್ತರಿಸಿಕೊಂಡರು. ಅನಂತರ ಅಂಟು ಅನ್ನು ಬಳಸಿ ವಿವಿಧ ಆಕೃತಿಗಳನ್ನು ಜೋಡಿಸಿ ಲ್ಲಾಟೀನ್‌, ಚಹಾ ಕಪ್‌, ಹೂದಾನಿ, ಆಟಿಕೆಯ ಆಮೆ, ಸೈಕಲ್‌ ತಯಾರಿಸಿ ಖುಷಿಪಟ್ಟರು. ಕೊನೆಯಲ್ಲಿ ತಮ್ಮ ಕಲಾ ಕೃ ತಿಗಳಿಗೆ ವಾರ್ನಿಷ್‌, ಬಣ್ಣ ಕೊಟ್ಟ ಅವುಗಳನ್ನು ಅಂದಗಾಣಿಸಿ ಆಕರ್ಷಣೀಯಗೊಳಿಸಿದರು.

Advertisement

ಒಂದು ವಾರದ ಕಾರ್ಯಾಗಾರ, ಕೊನೆಯ ದಿನ ಕಲಾಕೃತಿಗಳ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಇಂತಹ ಕಲಾಕೃತಿಗಳನ್ನು ಮನೆಯಲ್ಲಿಯೂ ತಯಾರಿಸಬಹುದು. ಇವುಗಳು ಮನೆಯ ಅಲಂಕಾರ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಕಸವಾಗುವುದನ್ನು ಕಲಾಕೃತಿಗೆ ಪರಿವರ್ತಿಸಿ ಉತ್ತಮ ಆದಾಯ ಪಡೆಯಬಹುದು.  ನಿತೀಶ್‌ ಕುಲಾಲ್‌ ಶಿವಪುರ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next