Advertisement
ದಿನ ಬೆಳಗಾದರೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಮಕ್ಕಳ ಕುರಿತು ಗಮನ ಹರಿಸುವಲ್ಲಿ ಇಂದಿನ ಹೆತ್ತವರು ಹಿಂದುಳಿದು ಬಿಟ್ಟಿದ್ದಾರೆ. ಟೀನೇಜ್ ಅನ್ನೋದು ಬಹಳ ಜಾಗರೂಕತೆಯಿಂದ ಇರಬೇಕಾದ ವಯಸ್ಸು. ಹೆತ್ತವರು ತಮ್ಮ ಮಕ್ಕಳನ್ನು ಈ ಸಮಯದಲ್ಲಿ ಅದೆಷ್ಟು ಕಾಳಜಿ ಮಾಡಿದರು ಕಡಿಮೆಯೇ. ಈ ವಯಸ್ಸಿನಲ್ಲಿ ಪ್ರತಿಯೊಂದು ಮಗುವಿಗೂ ಹೆತ್ತವರ ಪ್ರೀತಿ ಬಹಳ ಮುಖ್ಯ. ಪ್ರೀತಿ ಪ್ರೇಮ ಎಂಬ ಇನ್ನಿತರೆ ಹುಚ್ಚಾಟಗಳು ಇದೇ ವಯಸ್ಸಿನಲ್ಲಿ ಶುರುವಾಗುವುದು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಕೆಲವೊಂದು ಬದಲಾವಣೆಗಳ ಕೋಲಾಹಲ ಏರ್ಪಡುವುದು ಇದೇ ಅವಧಿಯಲ್ಲಿ. ಕೆಲ ಮುಗª ಜೀವಗಳು ಈ ವಿಚಾರದಲ್ಲಿ ಅತೀ ಹೆಚ್ಚು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಖನ್ನತೆಗೆ ಒಳಗಾಗುವುದುಂಟು. ಆದರೆ ಇವೆಲ್ಲವೂ ಆ ಮನಸ್ಸುಗಳಿಗೆ ಅರ್ಥವಾಗುವುದಿಲ್ಲ. ಇವುಗಳನ್ನೆಲ್ಲ ಅರ್ಥ ಮಾಡಿಕೊಳ್ಳಬೇಕಾಗಿರುವುದು ಪೋಷಕರು.
Related Articles
Advertisement
ಮಕ್ಕಳು ದೊಡ್ಡವರಾದ ಹಾಗೆ ಪೋಷಕರು ಅವರನ್ನು ಮಕ್ಕಳಂತೆ ಕಾಣದೆ ಸ್ನೇಹಿತರಂತೆ ಕಂಡರೆ ಈ ಸಮಸ್ಯೆಗೆ ಅತೀದೊಡ್ಡ ಪರಿಹಾರವನ್ನು ನೀಡುತ್ತದೆ. ಅದೇ ರೀತಿ ನಮ್ಮ ಇಷ್ಟವನ್ನು ಅವರ ಮೇಲೆ ಹೇರದೆ ಅವರ ಇಷ್ಟ – ಕಷ್ಟಗಳನ್ನು ಅರಿತುಕೊಂಡರೆ ಉತ್ತಮ. ಯಾವುದೇ ಒಳ್ಳೆಯ ಅಥವಾ ಇತರೆ ವಿಷಯಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಯಪಡಿಸುವುದು, ಶಾಲೆಯ ಚಟುವಟಿಕೆಗಳನ್ನು ಅವರೊಂದಿಗೆ ಜತೆಗೂಡಿ ಮಾಡುವುದರಿಂದ ಅವರಲ್ಲಿ ಸ್ನೇಹ ಮನೋಭಾವ ಹೆಚ್ಚುತ್ತದೆ.
ಹದಿಹರೆಯದ ವಯಸ್ಸು ಬದುಕಿನ ಒಂದು ಮಹತ್ವದ ಘಟ್ಟ. ಅಲ್ಲಿ ಒಂದಷ್ಟು ರಾಶಿ ಆಸೆ ಕನಸುಗಳಿವೆ. ಆ ಕನಸು ಸಫಲರಾದಗ ಪ್ರಪಂಚವನ್ನೇ ಮರೆತು ಬದುಕುವ ಕಾಲಘಟ್ಟವದು. ಆದರೆ ಅದನ್ನೆಲ್ಲ ಪೋಷಕರು ತಮ್ಮದೇ ಅಳತೆಗೂಲಿನಿಂದ ಅಳೆಯುತ್ತಾರೆ ಅಷ್ಟೇ. ತಾವು ಅವರಂತಿರುವಾಗ ಅವರಂತೆಯೇ ತಪ್ಪು ಮಾಡಿದ್ದೇವೆ ಎಂದು ಒಮ್ಮೆಯೂ ಯೋಚಿಸುವುದಿಲ್ಲ.
ಒಟ್ಟಾಗಿ ಈ ವಯಸ್ಸಿನೊಂದಿಗೆ ನಾವೂ ಹೆಜ್ಜೆ ಹಾಕಬೇಕು, ಅವರೊಂದಿಗೆ ನಾವೂ ಪುನಃ ಬೆಳೆಯಬೇಕು. ಮಕ್ಕಳೊಂದಿಗೆ ಮಕ್ಕಳಾಗಿ ಅವರ ಸುಖಃ ದುಃಖಗಳಲ್ಲಿ ಭಾಗಿಯಾದಾಗ ಸಂಬಂಧವೂ ಗಟ್ಟಿಯಾಗುತ್ತದೆ. ಇಂತಹ ಸಮಸ್ಯೆಗಳು ಹಾಗೂ ಕಂದಕಗಳಿಗೆ ಪರಿಹಾರ ಕಾಣಲು ಸಾಧ್ಯ.
-ಕಾವ್ಯಾ ಜಯರಾಜ್
ಬಾಳೆಪುಣಿ