Advertisement

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

05:11 PM Jan 12, 2025 | Team Udayavani |

ಹೊಸ ವರ್ಷ ಆರಂಭ ಆಗುತ್ತಲೇ ನಮಗೆ ಅನೇಕ ನಿರೀಕ್ಷೆ ಮೂಡುವುದು ಸಹಜ. ಅದೇ ರೀತಿ 2025ನೇ ಹೊಸ ವರ್ಷದಲ್ಲಿ ಸೋಲು- ಗೆಲುವಿನ ಜತೆ ಪಯಣಿಸುವ ಬದುಕು ನಮ್ಮದಾಗಬೇಕಿದೆ.

Advertisement

ಜಗತ್ತಿನಲ್ಲಿ ಎಲ್ಲರೂ ಸೋಲು ಗೆಲುವುಗಳ ಬಗ್ಗೆ ಮಾತಾಡುತ್ತೇವೆ. ಸೋಲಿಗೆ ಕಾರಣಗಳು ಹಾಗೂ ಗೆಲುವಿನ ಹಾದಿಯನ್ನು ಪರಾಮರ್ಶಿಸಲಾಗುತ್ತದೆ. ಆದರೆ ಗೆದ್ದ ಗೆಲುವನ್ನು ನಿಭಾಯಿಸುವುದು ಹೇಗೆ? ಅದೂ ಕೂಡ ಅಷ್ಟೇ ಮುಖ್ಯವಾದದ್ದು.

ಗೆಲುವಿನ ಗುಟ್ಟು ನಮ್ಮ ಮನದಲ್ಲಿನ ದೃಢಸಂಕಲ್ಪ. ಈ ದೃಢ ಸಂಕಲ್ಪವು ಗೆಲುವನ್ನು ನಿಭಾಯಿಸುವಲ್ಲೂ ಕಾರ್ಯಪ್ರವರ್ತಕವಾಗಿ‌ದ್ದಾಗ ಮಾತ್ರ ಗೆಲುವಿಗೆ ಸಾರ್ಥಕತೆ.

ಕ್ರೀಡೆ, ಸಿನೆಮಾ, ಮಾಧ್ಯಮರಂಗಗಳು, ಸಂಗೀತ, ಉದ್ಯಮ ಕ್ಷೇತ್ರಗಳು, ಯಾವುದೇ ವೃತ್ತಿಬದುಕಾಗಲಿ ಅಷ್ಟೇ ಏಕೆ ನಮ್ಮ ವ್ಯಯಕ್ತಿಕ ಬದುಕಿನಲ್ಲೂ ಹಲವು ಸೋಲುಗಳನ್ನು ಮೆಟ್ಟಿ ನಿಂತು ಗೆಲುವನ್ನು ಸಂಪಾದಿಸಬೇಕಾಗುತ್ತದೆ. ಅಗಣಿತ ತಪ್ಪುಗಳ ಅನಂತರವೇ ಯಶಸ್ಸು ಸಾಧ್ಯ ಎಂದು ಬರ್ನಾಡ ಷಾ ಒಂದೆಡೆ ಹೇಳಿದ್ದಾರೆ.

ಗೆಲುವೆನ್ನುವುದು ಇನ್‌ ಸ್ಟನ್ಟ್ ಫ‌ುಡ್‌ ಅಲ್ಲ. ಅದಕ್ಕೆ ಪರಿಶ್ರಮ, ಸಮಯ, ತಾಳ್ಮೆ, ದೃಢಸಂಕಲ್ಪ ಎಲ್ಲವೂ ಬೇಕು. ಎಲ್ಲೂ ಕೆಲವರಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ ಹಾಗೂ ಗೌರವವನ್ನು ಮುಂದುವರಿಸುವ ಜವಾಬ್ದಾರಿ ಸಿಕ್ಕರೆ, ಹೆಚ್ಚಿನವರಿಗೆ ಶೂನ್ಯದಿಂದಲೇ ಆರಂಭಿಸಬೇಕಾಗುತ್ತದೆ. ಕಲಿತ ವಿದ್ಯೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಲವಾರು ಸವಾಲುಗಳು, ಹಲವಾರು ಆಯ್ಕೆಗಳು ಕಣ್ಣ ಮುಂದೆ ನಿಲ್ಲುತ್ತವೆ.

Advertisement

ಒಮ್ಮೆ ಸಿಕ್ಕ ಗೆಲುವನ್ನು ನಿಭಾಯಿಸುವುದು ಇದೆಯಲ್ಲಾ ಅದು ಕೂಡ ಒಂದು ಕಲೆಯೇ. ಎಷ್ಟೊ ಮಂದಿ ಇಲ್ಲಿ ಎಡವಿ ಬೀಳುತ್ತಾರೆ. ಯಶಸ್ಸಿನ ಅಹಂ ತಲೆಗೇರಿಸಿಕೊಂಡರೆ ಹಣದೊಂದಿಗೆ ಬದುಕಬಹುದೇ ವಿನಃ ಸಮಾಜದೊಂದಿಗೆ ಅಲ್ಲ.

ಗೆಲುವು ತಲೆಗೆ ಏರಿಸಿಕೊಳ್ಳದೆ ಹೊಸಕನಸುಗಳಿಗೆ ಬುದ್ಧಿಯನ್ನು ಅಣಿಗೊಳಿಸಿಕೊಳ್ಳಬೇಕು.ಸಾಧನೆಯ ಹಾದಿಯಲ್ಲಿ ಆದ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ಮುನ್ನೆಡೆಯಬೇಕು.ತಪ್ಪುಗಳು ಎಂದೂ ಅಪರಾಧ ಎಂಬ ಹಣೆಪಟ್ಟಿಗೆ ಸಿಲುಕದಿರಲಿ. ನಮ್ಮ ಗೆಲುವು ಹಾಗೂ ಗೆಲುವಿನ ಅನಂತರದ ಬದುಕು ನಮ್ಮ ಕುಟುಂಬ ಹಾಗೂ ಸಮಾಜವನ್ನು ಮೆಚ್ಚುನಂತಿರಲಿ!

ಹಾಗಾದರೆ ಗೆಲುವನ್ನು ಉಳಿಸುಕೊಳ್ಳುವ ಮಾರ್ಗ ಯಾವುದು?
- ಬುದ್ಧಿ ಹಾಗೂ ಹೃದಯ ಜತೆ ಜತೆಯಾಗಿ ಕಾರ್ಯನಿರ್ವಹಿಸಬೇಕು.
- ಯಶಸ್ಸಿಗಾಗಿ ಜತೆಯಾಗಿ ನಿಂತವರನ್ನು ಹಾಗೂ ಹಾರೈಸಿದವರನ್ನು ಮರೆಯಬಾರದು.
- ಹತ್ತಿದ ಏಣಿಯನ್ನು ಒದೆಯಬಾರದು.
- ತನ್ನ ಸುತ್ತಲಿನವರೊಂದಿಗೆ ವ್ಯವಹರಿಸುವ ವಿಧಾನ ಸೂಕ್ತವಾಗಿರಲಿ
- ಕೆಟ್ಟ ಚಟಗಳು ಹಾಗೂ ಕೆಟ್ಟಜನರಿಂದ ದೂರವಿರಿ
- ಗಮ್ಯ ತಲುಪಿದರೂ, ಹೊಸ ಕನಸುಗಳನ್ನು ಮರೆಯಬಾರದು.
- ಯಶಸ್ಸು ಎಂಬುದು ಮದಗಜವಿದ್ದಂತೆ. ಅದು ನಮ್ಮನ್ನು ಆಳಲು ಬಿಡಬಾರದು.

-  ಗೀತಾಂಜಲಿ ಎಸ್‌.ಸಿ., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.