Advertisement
ಪ್ರತಿ ವರ್ಷ ಮುಗಿಯುವಾಗಲು ಮುಂದಿನ ವರ್ಷಕ್ಕೆ ನಿರೀಕ್ಷೆಗಳ ಸಂಖ್ಯೆಏರುತ್ತಿರುತ್ತದೆ. ನಾನು ಈ ವರ್ಷ ಇದನ್ನು ಮಾಡಿದೆ, ಇದನ್ನು ಮಾಡಬೇಕಿತ್ತು, ಹೀಗೆ ಆಸೆ, ಕನಸುಗಳು ಕಾಡುತಿರುತ್ತದೆ. ಈ ವರ್ಷ ಪಡೆಯಲಾರದನ್ನು ಮುಂದಿನ ವರ್ಷ ಪಡೆಯುವ ನಿರೀಕ್ಷೆ, ತಿಳಿದುಕೊಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುವ ನಿರೀಕ್ಷೆ ಹೆಚ್ಚಿನದನ್ನುಕಲಿಯುವ ನಿರೀಕ್ಷೆ. ಹೀಗೆ ವರ್ಷ ಕಳೆದರು ನಿರೀಕ್ಷೆಗಳಿಗೆ ಮಿತಿಯಿರುವುದಿಲ್ಲ. ನೆನಪಿನ ಬುತ್ತಿಯನ್ನು ಒಂದೊಂದಾಗೆ ಬಿಚ್ಚಿದಾಗಲೇ ತಿಳಿಯುವುದು ವರ್ಷದ ನೆನಪುಗಳು ಹೇಗಿದ್ದವೆಂದು. ಇಟ್ಟುಕೊಂಡ ನಿರೀಕ್ಷೆ ಹುಸಿಯಾದಾಗ ಬಂದಕಣ್ಣೀರು. ಅನಿರೀಕ್ಷಿತವಾಗಿ ನಮ್ಮನ್ನೆ ಹುಡುಕಿಕೊಂಡು ಬಂದ ಸಂತೋಷ. ನೀ ಪ್ರೀತಿಸುವವರೇ ನಿನ್ನನ್ನುತೊರೆದಕ್ಷಣ. ನಿನ್ನದಲ್ಲದವರು ನಿನ್ನ ಬೆಂಬಲಕ್ಕೆ ನಿಂತು ಸಂತೈಸಿದ ಕ್ಷಣ. ಜೀವನಾನೇ ಹಾಗೆ ಇಲ್ಲಿಯಾವುದೋಒಂದನ್ನು ಕಳೆದುಕೊಂಡರೆ. ಇನ್ನೊಂದುಯಾವುದೋ ನಮಗಾಗಿ ಕಾಯುತಿರುತ್ತದೆ.
Advertisement
UV Fusion: ಬಾಳಿಗೊಂದು ಹೊಸ ವರುಷ
04:55 PM Jan 13, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.