Advertisement

UV Fusion: ಆತ್ಮಹತ್ಯೆ ಪರಿಹಾರವಲ್ಲ, ಅದೇ ಒಂದು ಸಮಸ್ಯೆ

02:39 PM Sep 03, 2023 | Team Udayavani |

ನಾವೆಲ್ಲರೂ ಕೊರೊನಾ ಕಾಲಘಟ್ಟವನ್ನು ಕಳೆದು ಬಂದವರು. ಆ ಸಂದರ್ಭದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಇಡೀ ಜಗತ್ತು ಎಷ್ಟು ಹರಸಾಹಸ ಪಟ್ಟಿದೆ ಎಂದು ನಮಗೆ, ನಿಮಗೆ ತಿಳಿದ ವಿಚಾರ. ಅದೇಗೋ ಔಷಧ ಕಂಡುಹುಡುಕಿ, ಜನರಿಗೆ ವಿತರಿಸಿ ಹೇಗೋ ಆ ಕಷ್ಟಕಾಲವನ್ನು ಕಳೆದದ್ದಾಯಿತು. ಇಷ್ಟಾದರೂ ಪ್ರಯತ್ನಪಟ್ಟು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ!

Advertisement

ಹೌದು, ಪ್ರತಿದಿನ ಪತ್ರಿಕೆ ಓದುವಾಗ ಒಂದೆರಡಾದರೂ ಆತ್ಮಹತ್ಯೆ ಸುದ್ದಿಗಳು ಇದ್ದೇ ಇರುತ್ತವೆ. ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿದರೂ ಈ ಆತ್ಮಹತ್ಯೆಯೆಂಬ ಪಿಡುಗಿಗೆ ಪರಿಹಾರವಿಲ್ಲದಂತಾಗಿದೆ. ತಾಯಿ ನವ ಮಾಸ ಹೊತ್ತು – ಹೆತ್ತು, ತಂದೆಯಾದವನು ಜೀವ ಮುಡಿಪಾಗಿಟ್ಟು ಸಾಕಿ, ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಮಕ್ಕಳಿಗಾಗಿ ದಾನ ಮಾಡಿರುವಾಗ, ಮಕ್ಕಳÇÉೇ ಜೀವ ನೆಟ್ಟಿರುವಾಗ, ಅದಕ್ಕೆ ಪ್ರತಿಯಾಗಿ ಅದೆಷ್ಟೋ ಯುವಕ- ಯುವತಿಯರು ಇಂದು ಇವರಿಗೆ ಕೊಡುತ್ತಿರುವ ಉಡುಗೊರೆಯೇ ಈ ಆತ್ಮಹತ್ಯೆ.

ಮನೆಗೆ ಆಧಾರ ಸ್ಥಂಭವಾಗಬೇಕಾದವರು ಅಮ್ಮ ಮೊಬೈಲ್‌ ಕೊಡಲಿಲ್ಲ, ಅಪ್ಪ ಬೈಕ್‌ ತೆಗೆಸಿಕೊಟ್ಟಿಲ್ಲ, ಹುಡುಗಿ ಕೈ ಕೊಟ್ಟಳು, ಜೂಜು, ನಶೆ, ಸಾಲ, ಅವಮಾನ, ನಿರುದ್ಯೋಗ ಹೀಗೆ ಹತ್ತು ಹಲವು ಕ್ಷುಲ್ಲಕ ಕಾರಣಗಳಿಗೆ ಸಾವಿಗೆ ಶರಣಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಎಳೆ ವಯಸ್ಸಿನÇÉೇ ತಮ್ಮ ಜೀವನದ ಅತ್ಯಮೂಲ್ಯ ಸಿಹಿ ಕ್ಷಣಗಳನ್ನು ಅನುಭವಿಸುವ ಮೊದಲೇ ದುಡುಕಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಜತೆಗೆ ನಂಬಿದ ಕುಟುಂಬಕ್ಕೆ ಎಂದೂ ಮರೆಯಲಾಗದ ದುಃಖವನ್ನು ನೀಡುತ್ತಿದ್ದಾರೆ. ದೇಶದ ಅಭಿವೃದ್ಧಿ ಯುವ ಜನಾಂಗದ ಮೇಲೆ ನಿಂತಿದೆ ಎನ್ನುವುದು ನಿಜಾಂಶ. ಇಂತಹ ಯುವಕರು ಅನವಶ್ಯಕವಾಗಿ ಮಸಣ ಸೇರಿದರೆ ದೇಶ ಬೆಳೆಯುವುದಾದರೂ ಹೇಗೆ?

ಸಮಸ್ಯೆ ಎನ್ನುವುದು ಭೂಮಿಯಲ್ಲಿ ಹುಟ್ಟಿದ ಮೇಲೆ ಪ್ರತಿಯೊಂದು ಜೀವಿಗೂ ಕಟ್ಟಿಟ್ಟ ಬುತ್ತಿ. ಕೆಲವೊಂದು ಅವಮಾನಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುವುದು ಸಹಜ. ನಡೆಯುವವನು ಎಡವುತ್ತಾನೆಯೇ ಹೊರತು ಮಲಗಿದವನಲ್ಲ ಎಂಬ ಮಾತಿದೆ. ಹಿರಿಯರು ಈ ಮಾತನ್ನು ಸರಿಯಾಗಿ ಯೋಚಿಸಿಯೇ ಹೇಳಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಧೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸಾಧಿಸಲು ತುಂಬಾ ದಾರಿಗಳು ಕಾಣುತ್ತವೆ. ನನ್ನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಯಾವಾಗಲು ನಮಗೆ ಒಂದು ಮಾತು ಹೇಳುತ್ತಿದ್ದರು. ಆಕಾಶಕ್ಕೆ ಹಾರುವ ಪ್ರಯತ್ನ ಮಾಡು, ನೀನು ಮಾಡಿದ ಪ್ರಯತ್ನಕ್ಕೆ ಕಡೇ ಪಕ್ಷ ಅಂಗಳಕ್ಕೆ ಹಾರುವಷ್ಟದರೂ ಪ್ರತಿಫ‌ಲ ಸಿಗುತ್ತದೆ ಎಂದು. ಹಾಗೆಯೇ ಜೀವನದಲ್ಲೂ. ಕಷ್ಟ ಎಂದು ಸಾಯುವುದಕ್ಕಿಂತ ಪ್ರಯತ್ನ ಪಡೋಣ. ಅದರಿಂದ ಅಂದುಕೊಂಡಷ್ಟು ಅಲ್ಲವಾದರೂ ಸ್ವಲ್ಪವಾದರೂ ಪ್ರಯೋಜನವಾಗಬಹುದು.

Advertisement

-ದೀಪಕ್‌ ಸುವರ್ಣ, ವಿವಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next