ಮುಂಜಾನೆ ಮೊಬ್ಬಲಿ ಇಬ್ಬನಿ ತಾಕಿ ಅರಳಿದ ಹೂ, ಬೀಸಿದ ಗಾಳಿಯ ಜತೆಗೆ ಬಿದ್ದ ಮಳೆಯಲಿ ನಲುಗಿದ ಹಸಿರೆಲೆ, ಅದೇನನ್ನೋ ನೋಡಿ ನಕ್ಕು ಸುಮ್ಮನಾದ ಮಗು, ಚಲನಚಿತ್ರದಲ್ಲಿ ಮುಂಗುರುಳ ಸರಿಸಿ ಬಂದ ಕಥಾನಾಯಕಿ.
ಇಂತವುಗಳನ್ನೆಲ್ಲ ಕಂಡಾಗ ಮನದ ಮೂಲೆಯಲ್ಲಿ ಉಕ್ಕುವ ಭಾವದ ಹೆಸರು “ಇಷ್ಟ’ ಇಷ್ಟವೇ ಪ್ರೇಮವಾ! ಖಂಡಿತಾ ಅಲ್ಲ. ಅದು ಆಕರ್ಷಣೆಯ ವಿನೋದ.
ಹಾಗಾದ್ರೆ ಪ್ರೀತಿ! ನಿವೇದಿಸದೇ ಉಳಿದ, ಹೇಳದೆ ತಿಳಿದ, ಮೌನದಲ್ಲೇ ಆಳಿದ, ಉಕ್ಕಿದ ಭೀಕರ ಭಾವವ ತಡೆದ, ಬೇಡವೆಂದ ಮನಸಿಗೆ ಹಠ ಹಿಡಿದು ಸುಳಿದ, ಅದರದ ಭಾವನಾವಲ ಯದಲ್ಲಿ ಅರಿಯದೇ ಪ್ರಕಟವಾಗುವ ಭಾವುಕತೆಯ ಶೀರ್ಷಿಕೆಯೇ ಪ್ರೇಮ.
ಹುಡುಗ ನಕ್ಕನೆಂದು, ಹುಡುಗಿ ಬಿಕ್ಕಳೆಂದು ಅದೊಂದು ಭಾವ ಪರಿಚಯದ ಪ್ರಾರಂಭದಲಿ ಮನಸಿಗೆ ಅಂಟಿಕೊಂಡು ಬಿಡುತ್ತದೆ. ಮೆಲ್ಲಗೆ ಇಂಚಿಂಚೇ ಹೃದಯದಾಳದ ಮನಸನ್ನು ಆಕ್ರಮಿಸಿ ಆಡಳಿತ ನಡೆಸುವ ಪ್ರೇಮ, ಕೆಲವೊಮ್ಮೆ ಹೇಳದೆ ಅಂದವಾಗಿದ್ದರೆ. ಇನ್ನೂ ಕೆಲವೊಮ್ಮೆ ಹೇಳಿ ನಮ್ಮನ್ನ ನೋವಿನ ಪರಿಧಿಯೊಳಗೆ ಬಂಧಿಯಾಗಿಸುತ್ತದೆ.
ಒಂದುಗಂಡಿಗೊಂದು ಹೆಣ್ಣು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದ ಅಮೃತ ಉಂಡು, ದುಃಖ ಹಗುರ ಎನುತಿರೆ, ಪ್ರಮವೆನಲು ಹಾಸ್ಯವೇ? ಕೆ. ಎಸ್. ನರಸಿಂಹಸ್ವಾಮಿ ಅವರ ಕಾಗಿಯೊಂದರ ಸಾಲುಗಳಿವು. ಪ್ರೀತಿಯಲ್ಲಿ ಪರಿಚಯದ ಪ್ರಾರಂಭವಧಿ ಕಳೆದ ಅನಂತರ, ಪ್ರತಿ ಪ್ರೇಮಿಯ ಮನದಲ್ಲಿ ಕಾಡುವ ಪ್ರಶ್ನೆ! ಪ್ರೀತಿ ಅಂದ್ರೇನೆ ನೋವಾ! ಅದಕ್ಕೆ ಮನವೇ ಉತ್ತರಿಸುತ್ತೆ! ಇನ್ನೇನು ಹಾಸ್ಯವಾ!!
ದರ್ಶನ್ ಕುಮಾರ್,
ವಿ.ವಿ. ಕಾಲೇಜು ಮಂಗಳೂರು