Advertisement

UV Fusion: ನೆಮ್ಮದಿಯ ನಿಲ್ದಾಣ

12:05 PM Apr 21, 2024 | Team Udayavani |

ಮನುಷ್ಯನ ಜೀವನದ ಓಟದಲ್ಲಿ ನೆಮ್ಮದಿಯ ನಿಲ್ದಾಣ ಹುಡುಕುತ್ತಾ ಹೋದಂತೆಲ್ಲ ದಾರಿಯುದ್ದಕ್ಕೂ ತಿರುವುಗಳೆ ಜಾಸ್ತಿ. ಏಕೆ ಬದುಕು ಹೀಗೆ ಎಂದು ಯೋಚಿಸುತ್ತಾ ಕಾಲಹರಣ ಮಾಡುತ್ತಾ ಸಮಯ ಕಳೆಯುವುದೇ ಜೀವನ ಆಗಿದೆ.

Advertisement

ನೆಮ್ಮದಿ ಎಂಬುದು ಮೂರು ಅಕ್ಷರಗಳ ಪದವಾದರೂ ಪ್ರಪಂಚದಲ್ಲಿ ದೊರಕುವ ಎಲ್ಲ ವಸ್ತುಗಳಿಂದ ದುಬಾರಿ. ಅದನ್ನು ಪಡೆಯಬೇಕಾದರೆ, ಬೇಡವಾದ ವಿಷಯಗಳಿಂದ ದೂರವಿದ್ದಷ್ಟೂ ನೆಮ್ಮದಿ, ಕೆಟ್ಟ ಆಲೋಚನೆಗಳಿಂದ ಹೊರಗುಳಿದಷ್ಟು ನೆಮ್ಮದಿ, ಪ್ರಪಂಚದಲ್ಲಿ ನೆಮ್ಮದಿ ಹುಡುಕಲು ಅಸಾಧ್ಯವಾದದ್ದು.

ಜೀವನದ ನೆಮ್ಮದಿ ಕೆಡಿಸುವ ಮತ್ತೂಂದು ವಿಷಯವೆಂದರೆ ಹಣ. ಮನುಷ್ಯ ತಾನು ಸಾಕಷ್ಟು ಹಣ ಗಳಿಸಬೇಕೆಂಬ ದುರಾಸೆಯಿಂದ ಹಲವು ಕೆಟ್ಟ ಕೆಲಸಗಳನ್ನು ಮಾಡುತ್ತಾ ನೆಮ್ಮದಿ ಕಳೆದುಕೊಳ್ಳುವುದು ಸಹಜ. ನೆಮ್ಮದಿ ಪಡೆಯಲು ನಮ್ಮನ್ನು ನಾವೇ ಬದಲಾಯಿಸಿಕೊಂಡಾಗ ಮಾತ್ರ ಸಾಧ್ಯ. ಯಾವುದಾದರೂ ಕೆಲಸ ಕಾರ್ಯ ಕೈಗೊಳ್ಳುವಾಗ ಹಾಗೂ ಗುರಿಯತ್ತ ಸಾಗಬೇಕಾದ ಸಂದರ್ಭಗಳಲ್ಲಿ ನೆಮ್ಮದಿ ಜತೆಗಿದ್ದರೆ ಮಾತ್ರ ಗುರಿಸಾಧನೆ ಸಾಧ್ಯ.

ಜೀವನದಲ್ಲಿ ಜನರ ಪರಿಚಯ ಅತಿಯಾದಷ್ಟು ದಾರಿಯಲ್ಲಿ ಕವಲುಗಳು ಹೆಚ್ಚಾಗುತ್ತವೆ. ಏಕೆಂದರೆ ಹಲವು ಮನಸ್ಥಿತಿಯ ಜನರೊಡನೆ ನಮ್ಮ ನಿಜ ಮನಸ್ಥಿತಿಯೂ ಮರೆಮಾಚುತ್ತದೆ. ಏಕೆ ಹೀಗೆ ನಮ್ಮ ಜೀವನದಲ್ಲಿನ ಹಲವು ಮನಸ್ಥಿತಿಯ ಜನರೊಡನೆ ದಿನನಿತ್ಯ ಮುಖವಾಡದ ಬದುಕು ಬದುಕಬೇಕೇ ಹೊರತು ಅದೇ ಜನರಿಂದ ಬಂದ ಅನುಭವದ ಪಾಠಗಳನ್ನು ಅರಿತು ಮುಂದೆ ಸಾಗಬೇಕಾ ಎಂಬುದು ನಿಜವಾದ ಯಕ್ಷ ಪ್ರಶ್ನೆ.

ಇನ್ನು ಜೀವನ ಸಾಗುವ ದಾರಿಯಲ್ಲಿ ಆಯ್ಕೆಗಳು ಹೆಚ್ಚಾದಂತೆ ಗೊಂದಲಗಳು ಹೆಚ್ಚುತ್ತವೆ. ಅದಕ್ಕಾಗಿ ನಮ್ಮ ಮನಸಾಕ್ಷಿ ಒಪ್ಪುವ ದಾರಿಯನ್ನು ಆಯ್ದುಕೊಂಡು, ಕೆಟ್ಟ ಆಲೋಚನೆಗಳನ್ನು ಮಾಡದೇ, ಆದಷ್ಟು ಒಳ್ಳೆಯ ಮನಸ್ಥಿತಿಯ ಜನರೊಡನೆ ಸಾಗುತ್ತಾ  ಆಸಕ್ತಿ ಮತ್ತು ಶ್ರದ್ಧೆಯಿಂದ ಜೀವನದ ದಾರಿಯುದ್ದಕ್ಕೂ ಸಾಗಿದಾಗ ಮಾತ್ರ ನೆಮ್ಮದಿ ನಿಲ್ದಾಣ ತಲುಪಲು ಸಾಧ್ಯ.

Advertisement

-ಮಡು ಮೂಲಿಮನಿ

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next