Advertisement

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

02:20 PM Jun 24, 2024 | Team Udayavani |

ಶರವೇಗದಲ್ಲಿ ಮುನ್ನಡೆಯುವ ಕಾಲಘಟ್ಟವು ನಮ್ಮರಿವಿಗೆ ಬಾರದಂತೆ ಬದಲಾಗುತ್ತ ಓಡುತ್ತಿದೆ. ಇಂತಹ ಈ ಸಮಾಜದಲ್ಲಿ ಓರ್ವ ವ್ಯಕ್ತಿಯನ್ನು ಅಳೆಯುವುದು ಶಿಕ್ಷಣ ಕ್ಷೇತ್ರದಲ್ಲಿ ಆತ ಗಳಿಸಿರುವ ಅಂಕಗಳಿಂದ ಎನ್ನುವುದು ಸತ್ಯ ಸಂಗತಿ.  ಹಾಗಾದರೆ, ಕೇವಲ ಅಂಕಗಳಿಕೆ ಒಂದೇ ಶಿಕ್ಷಣವೇ?

Advertisement

ಗಳಿಸಿರುವ ಅಂಕವೇ ಆತನನ್ನು ಅಳೆಯುತ್ತದೆ ಎಂದಾದರೆ ವ್ಯಕ್ತಿತ್ವಕ್ಕೆ, ಗುಣಕ್ಕೆ, ಜ್ಞಾನಕ್ಕೆ ಬೆಲೆಯೇ ಇಲ್ಲವೇ? ಎಂಬುವುದು ನಮ್ಮಲ್ಲಿ ಉದ್ಭವಿಸಬಹುದಾದ ಸರ್ವೇಸಾಮಾನ್ಯವಾದ ಪ್ರಶ್ನೆ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ನಮಗೆ ತಿಳಿದಿದ್ದರೂ ಸಹ ಪ್ರಶ್ನೆ ಏಳುವಂತಹ ಸಂದರ್ಭವನ್ನು ಏಕೆ ನಾವೇ ಉಂಟು ಮಾಡುತ್ತೇವೆ?, ಎಂಬುದಕ್ಕೆ ಯಾರ ಬಳಿಯೂ ಉತ್ತರವಿರದೇನೋ. ಇದಕ್ಕೆ ಅನ್ವಯಿಸುವ ಒಂದು ಉದಾಹರಣೆ ಎಂದರೆ ಹಿಂದಿನ ಹಾಗೂ ಇಂದಿನ ಕಾಲದ ಶಿಕ್ಷಣ ರೀತಿ.

ವೇದಗಳ ಕಾಲದ ಶಿಕ್ಷಣ ಪದ್ಧತಿ

ವೈದಿಕ ಯುಗದಲ್ಲಿ ಹೆಚ್ಚಾಗಿ ಭಾರತೀಯ ಉಪಖಂಡದಲ್ಲಿ ಪ್ರಚಲಿತದಲ್ಲಿದ್ದ ಶಿಕ್ಷಣ ಪದ್ಧತಿ ಎಂದರೆ ಗುರುಕುಲ ಪದ್ಧತಿ.  ಅಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು. ಗುರುಕುಲ ಎಂದರೆ ಗುರುವಿನ ವಸತಿ. ಒಮ್ಮೆ ವಿದ್ಯೆ ಕಲಿಯಲು ಗುರುಕುಲ ಹೊಕ್ಕರೆ 7 ಅಥವಾ 12 ಅಥವಾ 21 ವರ್ಷಗಳವರೆಗೆ ಅಲ್ಲಿಯೇ ಇದ್ದು ಕಲಿಯುವುದು ಪದ್ಧತಿ. ದೈನಂದಿನ ಎಲ್ಲ ಚಟುವಟಿಕೆಗಳನ್ನು, ಜೀವನ ಪಾಠವನ್ನು, ಸಹ ಬಾಳ್ವೆಯನ್ನು, ಶಿಕ್ಷಣದೊಂದಿಗೆ ಕಲಿಯುವುದು ಇಲ್ಲಿನ ಉದ್ದೇಶ.

ತಮ್ಮ ಮನೆಯಿಂದ ಹೊರ ಉಳಿದವರಿಗೆ ಗುರು ಪತ್ನಿಯು ತಾಯಿ ಸ್ಥಾನದಲ್ಲಿರುವಳು. ಸಹಪಾಠಿಗಳು ಕುಟುಂಬದಂತಾಗಿ ಅಲ್ಲೊಂದು ಸುಂದರ ಬಾಂಧವ್ಯ, ಸ್ನೇಹ ಮನೋಭಾವ, ಸಂಬಂಧಗಳು ಸೃಷ್ಟಿಯಾಗಿ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿತುಕೊಳ್ಳುವ ಅವಕಾಶವಿತ್ತು.

Advertisement

ಗುರು ಶಿಷ್ಯರ ಮಧ್ಯೆ ಅಂತರ ಕಡಿಮೆ ಇದ್ದು ಉತ್ತಮ ಬಾಂಧವ್ಯವಿತ್ತು. ಗುರುವು ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕೊನೆಗೊಂದು ಗೌರವದ ಸಂಕೇತವೆಂಬಂತೆ ಗುರುದಕ್ಷಿಣೆ ಕೊಡುವ ಸಂಪ್ರದಾಯವಿತ್ತು. ಶಿಕ್ಷಣಾವಧಿ ಪೂರ್ಣವಾಗಿ ವಿದಾಯ ಹೇಳಿ ಹೊರಡುವ ಸಮಯದಲ್ಲಿ ಅವನೊಬ್ಬ ಸಂಸ್ಕಾರಯುತ ವ್ಯಕ್ತಿಯಾಗಿ ಹೊರಹೊಮ್ಮುತ್ತಿದ್ದುದು ಸತ್ಯ.

ಈಗಿನ ಕಾಲದ ಶಿಕ್ಷಣ ಪದ್ಧತಿ

ಇಂದಿನ ಶಿಕ್ಷಣವು ಯಾವ ರೀತಿ ಇದೆ ಎಂಬುದು ಒಂದು ಹಂತಕ್ಕೆ ಎಲ್ಲರಿಗೂ ತಿಳಿದಿದೆ. ಸರಳವಾಗಿ ಹೇಳುವುದಾದರೆ ವಿದ್ಯೆ, ವಿದ್ಯಾಸಂಸ್ಥೆಗಳು ವ್ಯವಹಾರದ ಆಧಾರದ ಮೇಲೆ ನಡೆಯುತ್ತಿವೆ. ವರ್‌ಷದಿಂದ ವರ್ಷಕ್ಕೆ ವಿದ್ಯಾಭ್ಯಾಸದ ಶುಲ್ಕವು ನಾಗಾಲೋಟದಲ್ಲಿ  ಏರುತ್ತಿದೆ.

ಒಂದು ಉದಾಹರಣೆ ಎಂದರೆ ಪದವಿ ಪೂರ್ವ ಶಿಕ್ಷಣ. ವರ್ಷದ ಕಲಿಕೆಗೆ ಹೇಗೂ ಲಕ್ಷಗಟ್ಟಲೆ ಶುಲ್ಕ ಕಟ್ಟಿದರೆ, ಇಉಖ, ಒಉಉ, Nಉಉಖ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳಿಗೆ ಮತ್ತೆ ಇನ್ನೊಂದಷ್ಟು ‘ಇಟಚcಜಜಿnಜ ಊಛಿಛಿs’ ಎಂಬ ಹಣೆಪಟ್ಟಿಯಲ್ಲಿ ಹಣ. ವಿದ್ಯಾರ್ಥಿಯೋರ್ವನ ದಿನದ ಬಹುಪಾಲು ಇಂತಹ  ತರಗತಿಗಳಿಗೆ ಮೀಸಲಾದರೆ, ಅಲ್ಲಿ ಕೊಡುವ ಚಟುವಟಿಕೆಗಳನ್ನು ಪೂರೈಸಲು ನಂತರದ ಸಮಯ ಕಳೆಯುತ್ತದೆ. ನಿತ್ಯವೂ ಇದೇ ಪುನರಾವರ್ತನೆಯಾದರೆ, ವೈಯಕ್ತಿಕ ಸಮಯ, ಕೌಟುಂಬಿಕ ಸಮಯ ಹಾಗೂ ಪಠ್ಯೇತರ ವಿಷಯಗಳಿಗೆ ಸಮಯವೆಲ್ಲಿ!? ಇದೊಂದು ರೀತಿಯ ಯಾಂತ್ರಿಕ ಜೀವನವಾಗುತ್ತದೆ.

ಇತ್ತೀಚೆಗೆ ಎರಡು-ಮೂರು ವರ್ಷದ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಪೂರ್ಣ ಅಂಕಗಳಿಸಿದ ವಿದ್ಯಾರ್ಥಿಗಳು ಹೆಚ್ಚಾಗಿ ಕಂಡಿದ್ದಾರೆ. ಅವರ ದಿನಚರಿ ಕೇಳಿದರೆ ಓದು-ಪುಸ್ತಕ-ಕೋಚಿಂಗ್‌ ಬಿಟ್ಟರೆ ಮತ್ತಿನ್ನೇನು ಇರುವುದಿಲ್ಲ. ಹಾಗಾದರೆ ಜೀವನಕ್ಕೆ ಅಷ್ಟೇ ಸಾಕೇ? ಅಷ್ಟು ಅಂಕಗಳಿಸಿದವರೆಲ್ಲರೂ ಉತ್ತಮರೇ? ಎಂಬ ಪ್ರಶ್ನೆಗೆ ಉತ್ತರ ನಗು ಒಂದೇ. ಆದರೆ ತಿಳಿಯಲೇಬೇಕಾದ ವಿಷಯವೇನೆಂದರೆ, ಯಾಂತ್ರಿಕ ಜೀವನದಲ್ಲಿ ವ್ಯಕ್ತಿತ್ವ- ಕೌಶಲ್ಯಗಳೆಲ್ಲದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.

ಎಲೆಕ್ಟ್ರಾನಿಕ್‌ ಉಪಕರಣಗಳು, ಕೃತಕ ಬುದ್ಧಿಮತ್ತೆ(ಅಐ) ಯಂತಹ ತಂತ್ರಜ್ಞಾನಗಳಿಗೆ ವಿದ್ಯಾರ್ಥಿಗಳು ಹೊಂದಿಕೊಂಡು ತಮ್ಮ ಯೋಚನಾ ಲಹರಿಯನ್ನು ಕಳೆದುಕೊಂಡಿದ್ದಾರೆ. ತಮ್ಮ ಮೆದುಳಿಗೆ ಕೆಲಸವೇ ಇಲ್ಲದಂತಾಗಿದೆ. ಇದಕ್ಕೆ ಮೂಲ ಕಾರಣ ಇಂದಿನ  ಶಿಕ್ಷಣ ಪದ್ಧತಿ ಎಂದರೆ ತಪ್ಪಾಗಲಾರದು.

‘ಶಿಕ್ಷಣ’ ಎಂಬ ಪದದಲ್ಲಿ ಇರುವಂತೆ ‘ಹಣ’ವೇ ಈಗ ಮುಖ್ಯ ಗುರಿಯಾಗಿ, ಶಿಕ್ಷೆ ಇಲ್ಲದ ಶಿಕ್ಷಣವಾಗಿಹೋಗಿರುವುದು ವಿಪರ್ಯಾಸ. ಸಮಾಜದಲ್ಲಿ ಹೇಗೆ ಜೀವನ ನಡೆಸುವುದು, ಸಹಬಾಳ್ವೆ- ಸಂಗ ಜೀವನ ಹೇಗೆ, ಎನ್ನುವುದು ಕಲಿಸಬೇಕಾದ ಶಿಕ್ಷಣವು ಈಗ ಕೌಶಲ್ಯಾಧಾರಿತವಾಗಿರದೆ ವ್ಯಾವಹಾರಿಕ ಮನಸ್ಥಿತಿಯಾಗಿದೆ..

“ಮನೆಯೇ ಮೊದಲ ಪಾಠಶಾಲೆ’ ಎಂಬುದೇನೋ ಸರಿ. ಆದರೆ ಮನೆಯವರೇ ಅಂಕದ ಹಿಂದೆ ಬಿದ್ದರೆ ಅಥವಾ ಮಕ್ಕಳಿಗೆ ಪೂರ್ಣಾಂಕಗಳಿಸು ಎಂದು ಆಮಿಷ ಒಡ್ಡಿದರೆ, ಅವರ ಮುಂದಿನ ದಿನಗಳು ದಾರುಣವಾಗಿರುವುದಂತೂ ಸತ್ಯ. ಹೀಗಿರುವಾಗ ಶಿಕ್ಷಣವು ಅಂಕಗಳಿಗೆ ಕೇಂದ್ರೀಕೃತವಾಗದೇ ವ್ಯಕ್ತಿತ್ವ ವಿಕಸನ, ಪಠ್ಯೇತರ ವಿಚಾರಗಳಿಗೂ ಪ್ರಾಮುಖ್ಯತೆ ನೀಡುವಂತಾಗಬೇಕು. ಜೀವನ ಮೌಲ್ಯಗಳನ್ನು ಅಳವಡಿಸ್ಕೊಳ್ಳುವ ಬುನಾದಿಯಾಗಬೇಕು.

ಇನ್ನಾದರೂ ಶಿಕ್ಷಣ ಕ್ಷೇತ್ರವು ಕೇವಲ ಧನಾಧಾರಿತವಾಗಿರದೇ ಇರಲಿ ಎಂಬ ಅಭಿಲಾಷೆ ನನ್ನದು. ಬಹುಶಃ ಇಂದಿನ ಮಕ್ಕಳಿಗೆ ಗುರುಕುಲ ಪದ್ಧತಿಯೇ ಪುನಃ ಬಂದರೂ ಉತ್ತಮವಾದೀತೇನೋ ಎಂಬುವುದು ನನ್ನ ಅಭಿಪ್ರಾಯ.

- ಕೃಪಾಶ್ರೀ

ಕುಂಬಳೆ 

Advertisement

Udayavani is now on Telegram. Click here to join our channel and stay updated with the latest news.

Next