ಈಗಿನ ಬಹುತೇಕ ಯುವ ಮನಸ್ಸುಗಳಿಗೆ ಪ್ರವಾಸಕ್ಕೆ ಹೋಗುವುದೆಂದರೆ ಅಚ್ಚುಮೆಚ್ಚು. ಬೈಕ್ ಅಥವಾ ಕಾರಿನಲ್ಲಿ ಸ್ನೇಹಿತರೊಂದಿಗೆ ಪ್ರಯಾಣ, ಪ್ರವಾಸಿ ತಾಣಗಳ ವೀಕ್ಷಣೆ, ಅಲ್ಲಲ್ಲಿ ಒಂದಷ್ಟು ತುಂಟಾಟ – ಕೀಟಲೆ, ಬೆಟ್ಟ ಹತ್ತುವುದು ಹೀಗೆ ಪ್ರವಾಸ ಎಂದರೆ ರೋಮಾಂಚನವಾಗುವುದಂತೂ ಖಂಡಿತ.
ಇತ್ತೀಚೆಗೆ ನಾನು ಸ್ನೇಹಿತರೊಂದಿಗೆ ಕೂಡಿ ಕೊಡಚಾದ್ರಿಗೆ ಹೋದ ಪ್ರವಾಸ ಎಂದೆಂದಿಗೂ ನನ್ನ ನೆನಪಿನಲ್ಲಿ ಉಳಿಯುವಂತಹ ಪ್ರವಾಸವಾಗಿದೆ ಎಂದರೆ ತಪ್ಪಾಗಲಾರದು.
ಕೊಡಚಾದ್ರಿಯ ಪ್ರಕೃತಿಯ ಸೌದರ್ಯ ಅದರಲ್ಲೂ ಮಳೆಗಾಲದಲ್ಲಿ ಕೊಡಚಾದ್ರಿಯ ರಮಣೀಯ ದೃಶ್ಯವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಇದೊಂದು ಪ್ರಕೃತಿ ಮಾತೆಯ ಅದ್ಭುತ ಸೃಷ್ಟಿ ಎಂದೇ ಹೇಳಬಹುದು.
ಕೊಡಚಾದ್ರಿಯ ಬೆಟ್ಟವನ್ನು ಹತ್ತುವುದೇ ಒಂದು ಮನೋ ರಂಜನಾ ಚಟುವಟಿಕೆ. ರಕ್ತದ ಕಣ ಕಣದಲ್ಲೂ ಇರುವ ಟ್ರೆಕ್ಕಿಂಗ್ ಕಿಚ್ಚು ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಟ್ಟದ ತುದಿಗೆ ಟ್ರೆಕ್ಕಿಂಗ್ ಮಾಡುತ್ತಾ ಸಾಗುವಾಗ ಕಂಡುಬರುವ ವನರಾಶಿ, ಕಾಡು
ದಾರಿ, ಪಕ್ಷಿಗಳ ಕಲರವ, ಸಣ್ಣಪುಟ್ಟ ತೊರೆಗಳು ನಮ್ಮನ್ನು ಪ್ರಕೃತಿಯ ಸೌದರ್ಯಕ್ಕೆ ಮನಸೂರೆಗೊಳ್ಳುವಂತೆ ಮಾಡುವುದಂತೂ ಖಂಡಿತ. ಅದರಲ್ಲೂ ಮಳೆಗಾ ಲದಲ್ಲಿ ಕೊಡಚಾದ್ರಿ ಪ್ರವಾಸ ಸಾಹಸವೇ ಸರಿ. ಅಂಕುಡೊಂಕಿನ ರಸ್ತೆಯಲ್ಲಿ, ಬೆಟ್ಟದ ಮೇಲಿಂದ ಬರುವ ಮಳೆನೀರಿಗೆ ಎದೆಯೊಡ್ಡಿ, ಕೆಸರುಮಯ ರಸ್ತೆ ಯಲ್ಲಿ ಜಾರುತ್ತ ಜೀಪಿನಲ್ಲಿ ಸಾಗುವುದು ಯಾವುದೇ ಸಾಹಸಕ್ಕೆ ಕಡಿಮೆಯಿಲ್ಲ.
ನಮ್ಮ ಪ್ರವಾಸ ಮಳೆಗಾಲದ ಸಮಯದಲ್ಲಿ ಹೋಗಿದ್ದರಿಂದ ಕೆಸರುಮಯ, ಸಾಹಸಮಯ ರಸ್ತೆಯ ನಡು ವೆಯೂ ಹಚ್ಚ ಹಸುರು ದೃಶ್ಯಗಳು ನಮ್ಮನ್ನು ಮನ ಸೂರೆಗೊಳಿ ಸಿತ್ತು. ಮಳೆಗಾಲದಲ್ಲಿ ಕೊಡಚಾದ್ರಿಯು ಧರೆಗಿಳಿದ ಅಪ್ಸರೆಯಂತೆ ಕಾಣುವುದಂತು ಖಂಡಿತ. ಸುತ್ತಲೂ ಮಂಜು ಮುಸುಕಿನ ವಾತಾವರಣ, ತಂಪು ಗಾಳಿ ಸೂಸುವ ಪರಿಸರ, ಎಲ್ಲೆಲ್ಲೂ ಹಸಿರು, ತಾಜನೀರಿನ ಕೆರೆ, ತೊರೆಗಳು, ನಗರದ ಗೌಜು ಗದ್ದಲಗಳಿಲ್ಲಶಾಂತತೆ ಇದನ್ನು ಒಂದು ‘ಭೂಮಿ ಮೇಲಿನ ಸ್ವರ್ಗದ ಹಾಗೆ ಕಾಣುವಂತೆ ಮಾಡುತ್ತದೆ’. ಒಟ್ಟಾರೆಯಾಗಿ ಕೊಡಚಾದ್ರಿ ನನ್ನ ಜೀವನದಲ್ಲಿ ಮರೆಯಲಾಗದ ಸ್ಥಳ.
ಹರ್ಷಿತಾ ಟಿ.
ಎಂಜಿಎಂ ಕಾಲೇಜು, ಉಡುಪಿ