Advertisement
ಬೆಳಗಿನ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿ ಚಹಾದಿಂದ ನನ್ನ ತುಟಿಗಳಿಗೆ ಶಾಖ ಕೊಡುತ್ತಾ ನನ್ನನ್ನು ನಾನು ನಿದ್ದೆಯಿಂದ ಎಬ್ಬಿಸುತ್ತಿದ್ದೆ. ಆ ಸಮಯದಲ್ಲಿ ಎಲ್ಲೋ ಸ್ವಲ್ಪ ದೂರದಲ್ಲಿ ಮಧುರವಾದ ಧ್ವನಿಯಲ್ಲಿ ಕನ್ನಡ ಚಲನಚಿತ್ರದ ಹಾಡೊಂದು ಕೇಳ ತೊಡಗಿತು. ಓ ನನ್ನ ಜಂಗಮವಾಣಿ ನನ್ನನ್ನು ಕರೆಯುತ್ತಿರುವುದೆಂದು ಅಲ್ಲಿಂದ ಎದ್ದೋಡಿದೆ. ಅಲ್ಲಿ ನೋಡಿದರೆ ನನ್ನ ಸ್ನೇಹಿತ ನನ್ನೊಂದಿಗೆ ಮಾತನಾಡಲು ಕಾತುರದಿಂದ ಕಾದು ನಿಂತು ಕರೆ ಮಾಡಿದ್ದ.
Related Articles
Advertisement
ನಾವು ನಮಗಾಗಿ ಬದುಕಿದರೆ ನಾವು ಸಂಪಾದಿಸಿರುವುದರಲ್ಲಿ ನಮ್ಮ ಮುಂದಿನ ಜೀವನಕ್ಕೆ ಉಳಿಯುತ್ತದೆ, ಅದೇ ಅಕ್ಕ-ಪಕ್ಕದಲ್ಲಿರುವವರನ್ನು ನೋಡಿ ನಾವು ಬದುಕು ಕಟ್ಟಿಕೊಳ್ಳಲು ಹೋದರೆ ನಮ್ಮ ದುಡಿಮೆಯ ಜತೆಗೆ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ, ಆಸೆ ರಾಜನನ್ನು ಗುಲಾಮನನ್ನಾಗಿಸುತ್ತದೆ, ತಾಳ್ಮೆ ಗುಲಾಮನನ್ನು ರಾಜನನ್ನಾಗಿಸುತ್ತದೆ.
ನಾವು ಮಾಡುವ ಕೆಲಸ ಯಾವುದೇ ಇರಲಿ ಒಳ್ಳೆಯ ಉದ್ದೇಶ ಇರಲಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ, ಯಶಸ್ಸಿಗಾಗಿ ಕಾಯುವ ತಾಳ್ಮೆ ಇರಲಿ, ಇಂದಲ್ಲ ನಾಳೆ ಖುಷಿಯ ದಿನಗಳು ಯಶಸ್ಸಿನೊಂದಿಗೆ ನಿನ್ನತ್ತ ಬರುತ್ತವೆ. ಎಷ್ಟೋ ಸಾಧಕರನ್ನು ಕಂಡಿಲ್ಲವೇ. ಸಾಧನೆ ಎನ್ನುವುದು ತತ್‌ಕ್ಷಣ ಒಳಿಯುವುದಿಲ್ಲ. ಎಷ್ಟೋ ವರ್ಷಗಳ ತಾಳ್ಮೆಯ, ಛಲದ ಪ್ರತಿಫಲವಾಗಿರುತ್ತದೆ. ನನ್ನ ಗುರಿಯನ್ನು ಸಾಧಿಸುವೆ ಎಂಬ ನಂಬಿಕೆ ಇಟ್ಟು ಪ್ರತೀ ದಿನವೂ ಅದರತ್ತ ನಡೆಯಬೇಕು ಎಂದು ಧೈರ್ಯ ತುಂಬಿದೆ.
ಗೆಳೆಯಾ ಇಲ್ಲಿ ಯಾರೂ ಕಷ್ಟಪಡದೆ ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಆಗಿಲ್ಲ. ಅವರವರ ಜೀವನಕ್ಕೆ ಅವರೇ ನಾಯಕ. ಆದರೆ ಯಾರೂ ಕಷ್ಟ ಪಡುತ್ತಾ ಮೇಲೆ ಬಂದಿದ್ದಾರೋ, ಅವರು ಜಗತ್ತಿಗೆ ನಾಯಕರಾಗಿ ನಿಂತಿದ್ದಾರೆ. ಅವರೇ ನಿಜವಾದ ನಕ್ಷತ್ರ (ರಿಯಲ್ ಸ್ಟಾರ್) ಆಗಿದ್ದಾರೆ.
ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ…
- ಭರತ್ ವಾಸು ನಾಯ್ಕ
ಮಾಳಂಜಿ, ಶಿರಸಿ