Advertisement

Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?

03:01 PM Jun 24, 2024 | Team Udayavani |

ಚಿಕ್ಕ ವಯಸ್ಸಿನಿಂದ ದೊಡ್ಡವರಾಗುವ ತನಕ ಅಪ್ಪ ಅಮ್ಮನ ಹೊಣೆ ಮಕ್ಕಳು. ಆದರೆ, ಸ್ವತಂತ್ರ ರಾಗಿ ಬದುಕುವ ಹಂತಕ್ಕೆ ಬಂದ ಮೇಲೆ ಮಕ್ಕಳೇ ಸ್ವತಃ ಬದುಕು ಕಟ್ಟಿಕೊಳ್ಳುವುದು ಸ್ವಾವಲಂಬನೆ. ಕೆಲಸ ಹುಡುಕ ಬೇಕು, ತಮಗೆ ಒಪ್ಪುವ  ಕೆಲಸ ಸಿಗುವುದೇ ದೊಡ್ಡ ಸಾಧನೆ. ಸಮಾಜದ ಮುಂದೆ ಗೌರವಯುತವಾಗಿ ಮತ್ತು ಸ್ವಾವಲಂಬನಿಯಾಗಿ ಬದುಕಲು ಕೆಲಸ ಬೇಕು. ಆ ಕೆಲಸಕ್ಕಾಗಿ ಪಡುವ ಪಾಡು ಅವರು ಎದುರಿಸುವ ಸಮಸ್ಯೆಗಳು ಸವಾಲುಗಳು ಸಾಕಷ್ಟು. ಶಿಫಾರಸ್ಸಿನ ಹಾವಳಿ ಮತ್ತು ಅನುಭವದ ಕೊರತೆ.

Advertisement

ಸ್ವಾವಲಂಬನೆಯಾಗಿ ಬದುಕಲು ಹಪಹಪಿಸುವ ನಿರುದ್ಯೋಗಿಗಳ ದೊಡ್ಡ ಸಮಸ್ಯೆಯೆ ಕೆಲಸ. ಬದುಕಿನ ಪರಿಸ್ಥಿತಿಗೆ ರಾಜಿಮಾಡಿಕೊಂಡು ಸಿಕ್ಕಿದ ಕೆಲಸದಲ್ಲೂ ಭಾವ ಪ್ರಾಪ್ತಿಯಾಗದೇ, ಅಂದುಕೊಂಡತೆ ಕೆಲಸ ಸಿಕ್ಕಿಲ್ಲ? ಹಾಗಿರಬೇಕಿತ್ತು? ಹೀಗಿರಬೇಕಿತ್ತು ? ಎನ್ನುವ ಭಾವವೇ ಕಾಡುವಂತದ್ದು?  ಸಿಕ್ಕಿದ್ದೇ ಕೆಲಸ ಬದುಕು ಸಾಗಿದರೆ ಸಾಕು ಅದೇ ಬಾಳಿಗೆ ಪಂಚಾಮೃತ ಎಂದು ಸ್ವೀಕರಿಸುವ ಅದೆಷ್ಟೋ ನೊಂದ ಮನಸುಗಳು. ಅಪೂರ್ಣ ಶಿಕ್ಷಣದ ಕೊರತೆ ಸರಿಯಾಗಿ ಬದುಕು ಕಟ್ಟಿಕೊಳ್ಳಲು ಆಗದೆ ಪರದಾಟ ಪಡುವ ಒಂದಷ್ಟು ಮಂದಿ.

ಬದುಕು ಹೀಗೇಕೆ? ನಾವು ಅಂದುಕೊಂಡಂತೆ ಬದುಕಲು ಸಾಧ್ಯವಾಗುತ್ತಿಲ್ಲ? ನಮಗೆ ಹೀಗೆ ಬೇಕು ಹಾಗೆ ಬೇಕು ಎಂದು ಕುಳಿತರೆ ಏನನ್ನು ಸಾಧಿಸಲು ಸಾಧ್ಯವಾಗದು. ಸತತವಾಗಿ ಪಡುವ ಪ್ರಯತ್ನವು ನಾವು ಅಂದುಕೊಂಡ ದಾರಿಗೆ ಕರೆದೊಯ್ಯುತ್ತದೆ.. ಕಷ್ಟವೇ ಆಗಲಿ ಸ್ವೀಕರಿಸಿ ಸವಾಲಾಗಿ ತೆಗೆದುಕೊಂಡಾಗಲೇ ಯಶಸ್ಸಿನ ಗುರಿ ತಲುಪಲು ಸಾಧ್ಯ.

ಬಡ ಕುಟುಂಬ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಉದ್ಯೋಗ ಕ್ಲಿಷ್ಟಕರವೇ ಮತ್ತು ಕನಸೇ ? ಏಕೆಂದರೆ, ಆರ್ಥಿಕ ಪರಿಸ್ಥಿತಿ ಅಭಾವ. ಸ್ವಂತ ಉದ್ಯೋಗ ಮಾಡಲು ಹಣವಿರಬೇಕು ಸ್ವಂತ ಉದ್ಯೋಗ ಒಂದು ಹಂತಕ್ಕೆ ಬರುವವರೆಗೂ ತಡೆದುಕೊಳ್ಳುವ ಹಣಕಾಸಿನ ವ್ಯವಸ್ಥೆಯ ಭದ್ರತೆ ಬೇಕು. ಆ ಭದ್ರತೆಯ ಬುನಾದಿಗೆ ಆರ್ಥಿಕ ಸಹಾಯವಿಲ್ಲದೆ ವಂಚಿತರಾಗಿ ಕಟ್ಟಿಕೊಳ್ಳುವ ಕನಸುಗಳ ಭಗ್ನವೇ? ಹೇಗೋ ಬದುಕಿದರೆ ಸಾಕು ಸಣ್ಣ ಪುಟ್ಟ ಕೆಲಸದಲ್ಲೇ ಜೀವನ ಕಳೆಯುವಂತೆ ಮನಸು ಮಾಡುವ ಪರಿಸ್ಥಿತಿ.

ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವಂತದಲ್ಲ ನಾವೇ ಅವಕಾಶಗಳ ಬೆನ್ನತ್ತಿ ಹೊರಟಾಗಲೇ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಛಲದಿಂದ ಬದುಕಲು ಸಾಧ್ಯ. ಶ್ರಮವಿಲ್ಲದೆ ಫಲ ಸಿಗದು. ಯಶಸ್ಸು ಶ್ರಮದ ಜತೆಗೆ ಇರುವ ಬೆಟ್ಟ . ಆ ಬೆಟ್ಟವನ್ನು ಹಠ ಛಲ ಪರಿಶ್ರಮದಿಂದ ಹತ್ತಿದಾಗಲೇ ಉನ್ನತ್ತಿ ಸಿಗುವುದು. ಪರಿಶ್ರಮದ ತ್ಯಾಗವೇ ಯಶಸ್ಸಿನ ಸುಂದರ ಹೂಗಳಾಗಿ ಅರಳುವುದು ಮತ್ತು ಬದುಕಿಗೆ ಬಣ್ಣ ತುಂಬುವುದು.  ವಾಣಿ ಮೈಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next