Advertisement

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

04:04 PM Jul 05, 2024 | Team Udayavani |

ಸಾಮಾನ್ಯವಾಗಿ ನಾವು ಮನುಷ್ಯನ ದೇಹದಲ್ಲಿ ನಾಲ್ಕು ರೀತಿಯ ರಕ್ತದ ಗುಂಪನ್ನು ಕಾಣಬಹುದು. ಎ,ಬಿ,ಎಬಿ ಹಾಗೆ ಒ ಪಾಸಿಟಿವ್‌ ನೆಗೆಟಿವ್‌ ಸೇರಿದಂತೆ ಒಟ್ಟು ಎಂಟು ವಿಧವನ್ನು ನಾವು ತಿಳಿದಿದ್ದೇವೆ.

Advertisement

ಆದರೆ ಸಾಧಾರಣವಾಗಿ ಕೆಲವರಿಗೆ ಗೊತ್ತಿಲ್ಲದ ಒಂದು ರಕ್ತದ ಗುಂಪಿದೆ. ಅದೇ ಆರ್‌ ಎಚ್‌ ನಲ್‌ ರಕ್ತದ ಗುಂಪು. ಇದು ವಿಶ್ವದಲ್ಲಿ 45 ರಿಂದ 50 ಜನರಲ್ಲಿ ಮಾತ್ರ ಕಾಣಸಿಗುತ್ತದೆ. ಸಂಶೋಧನೆಯ ಪ್ರಕಾರ ಇಲ್ಲಿಯವರೆಗೆ 43 ಜನರಲ್ಲಿ ಈ ರಕ್ತವು ಕಾಣಿಸಿಕೊಂಡಿದೆ.ಅದರಲ್ಲೂ ಕೇವಲ 9 ಜನರು ಮಾತ್ರ ರಕ್ತದಾನವನ್ನು ಮಾಡಲು ಸಾಧ್ಯ.

ಇದೊಂದು ಅಪರೂಪದ ರಕ್ತದ ಗುಂಪಾಗಿದ್ದು ಇದನ್ನು ಚಿನ್ನದ ರಕ್ತ ಎಂತಲೂ ಕರೆಯುತ್ತಾರೆ. ಇನ್ನು ಇದರ ವಿಶೇಷತೆಯನ್ನು ನೋಡುವುದಾದರೆ ಈ ರಕ್ತವನ್ನು ಬೇರೆ ಎಲ್ಲಾ ರಕ್ತದ ಗುಂಪಿನೊಂದಿಗೆ ಸಹಜವಾಗಿ ಹೊಂದಾಣಿಕೆ ಆಗುತ್ತದೆ. ಇವರ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತಾ ಬಂದರೆ ಕೂಡಲೇ ರಕ್ತ ಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು.ಆದರೆ ಈ ರಕ್ತದ ಗುಂಪಿನವರಿಗೆ ತುರ್ತು ರಕ್ತ ಬೇಕಿದ್ದರೆ ಸಿಗುವುದು ಬಹಳ ಕಷ್ಟ.

ಈ ರಕ್ತದ ಗುಂಪು ಹೊಂದಿರುವ ಜನರಿಗೆ ಕೆಲವು ಸಾಮಾನ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ದೇಹದಲ್ಲಿ ಹಿಮೋಗ್ಲೋಬಿನ್‌ ಕೊರತೆಯಿದೆ.  ಅನೇಕ ಜನರು ರಕ್ತಹೀನತೆಗೆ ಬಲಿಯಾಗುವ ಸಾಧ್ಯತೆ ಕೂಡ ಇದೆ. ಕಿಡ್ನಿ ವೈಫ‌ಲ್ಯವಾಗುವ ಸಾಧ್ಯತೆಯೂ ಹೆಚ್ಚು. ರಕ್ತ ಹೀನತೆ ಹಾಗೂ ಹಿಮೋಗ್ಲೋಬಿನ್‌ ಸಮಸ್ಯೆಯು ಕೆಲವೊಮ್ಮೆ ಗರ್ಭಪಾತದ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಕೆಲವು ಅಧ್ಯಯನ ವರದಿಯಲ್ಲಿ ತಜ್ಞರು ಈ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

1961 ರಲ್ಲಿ ಮೊಟ್ಟ ಮೊದಲಿಗೆ ಈ ರಕ್ತದ ಗುಂಪು ಆಸ್ಟ್ರೇಲಿಯಾದಲ್ಲಿ ಒಬ್ಬ ಆದಿವಾಸಿ  ಮಹಿಳೆಯಲ್ಲಿ ಈ ರಕ್ತ ಕಾಣಿಸಿಕೊಂಡಿತು. ವರ್ಷ ಹೋದಂತೆ  ಸಂಖ್ಯೆ ಹೆಚ್ಚಾಯಿತು. ಸಾಮಾನ್ಯವಾಗಿ ಮಾನವನ ದೇಹದಲ್ಲಿ 342 ರಲ್ಲಿ 160 ಆಂಟಿಜೆನ್ಸ್‌ ಕಂಡುಬರುತ್ತದೆ. ಇದಕ್ಕಿಂತ ಕಡಿಮೆ ಆಂಟಿಜೆನ್ಸ್‌ ಇದ್ದರೆ ಅದು ಅಪರೂಪದ ರಕ್ತದ ಮಾದರಿ ಎಂದು ಅರ್ಥ. ಮನುಷ್ಯನ ದೇಹದಲ್ಲಿ 60 ರಷ್ಟು ಆಂಟಿಜೆನ್ಸ್‌ ಕಡಿಮೆ ಆದರೆ ಅದನ್ನು ಆರ್‌.ಎಚ್‌.ನಲ್‌. ಎಂದು ಗುರುತಿಸಲಾಗುತ್ತದೆ.

Advertisement

-ಸ್ನೇಹ ವರ್ಗೀಸ್‌

ಎಂಜಿಎಂ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next