Advertisement

UV Fusion: ಸಿನೆಮಾ

03:57 PM Jun 28, 2024 | Team Udayavani |

ಈ ಬಾರಿಯ ನಮ್ಮ ವಿಶ್ವ ಸಿನಿಮಾ ಪರ್ಯಟನೆಯಲ್ಲಿ ಉಲ್ಲೇಖಿಸಲಾದ ಎರಡು ಸಿನಿಮಾಗಳು ನಿಮಗೆ ಪರಿಚಯವೇ. ಆದರೆ ಈ ಎರಡೂ ಸಿನಿಮಾಗಳು ಬಹಳ ವಿಶಿಷ್ಟವಾದವು. ತೀರಾ ಅಪರೂಪದ್ದು ಎನಿಸುವಂಥವು. ಎರಡೂ ಬೇರೆ ಬೇರೆ ಪ್ರಾಂತ್ಯದ ಸಿನಿಮಾಗಳು ಎನ್ನುವುದು ವಿಶೇಷ.

Advertisement

ಶಿರಿನ್

ಈ ಸಿನಿಮಾವನ್ನು ಪ್ರಯೋ ಗಾತ್ಮಕ ಎನ್ನುವ ಕಾರಣಕ್ಕೂ ನೋಡಬೇಕು. ಬಹಳ ವಿಭಿನ್ನವಾದ ಆಲೋಚನೆಯ ಸಿನಿಮಾ. ಪರ್ಷಿಯನ್‌ ಭಾಷೆಯ ಇರಾನ್‌ ದೇಶದ ನಿರ್ದೇಶಕ ಅಬ್ಟಾಸ್‌ ಕೀರೋಸ್ತಮಿ ನಿರ್ದೇಶಿಸಿರುವ ಸಿನಿಮಾವಿದು. ಇದರ ಹೆಸರೇ ಶಿರಿನ್‌. 2008 ರಲ್ಲಿ ನಿರ್ಮಾಣವಾದುದು.

ಇದೊಂದು ಸಣ್ಣ ಕಥೆ. ಪರ್ಸಿಯಾದ ರಾಜಕುಮಾರ ಖೊಸ್ರೊ ಹಾಗೂ ಆರ್ಮೇನಿಯಾದ ರಾಜಕುಮಾರಿ ಶಿರಿನ್‌ ನಡುವಿನ ಪ್ರೇಮದ ಕುರಿತಾದದ್ದು.  ಈ ಸಿನಿಮಾದ ವಿಶೇಷವೇನೆಂದರೆ ಇಡೀ ಸಿನಿಮಾ ನಡೆಯುವುದು ಚಿತ್ರಮಂದಿರದಲ್ಲಿ. ಅಂದರೆ ಚಿತ್ರಮಂದಿರದೊಳಗೆ ಮತ್ತೂಂದು ಸಿನಿಮಾ. ಸುಮಾರು 110 ಕ್ಕೂ ಹೆಚ್ಚು ಮಂದಿ ಚಿತ್ರನಟಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‌

ಅಭಿನಯವೆಂದರೆ ಏನು ಗೊತ್ತೇ? ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುತ್ತಾ ದೃಶ್ಯಗಳಲ್ಲಿನ ಭಾವನೆಗಳಿಗೆ ತಮ್ಮ ಮುಖ ಭಾವಗಳ ಮೂಲಕ ಪ್ರತಿ ಸ್ಪಂದಿಸು ವುದಷ್ಟೇ. ಸಿನಿಮಾ ಸಾಗುವಾಗ ಹಿನ್ನೆಲೆಯಲ್ಲಿ ಪರದೆಯ ಮೇಲಿನ ಪಾತ್ರಗಳ ಸಂಭಾಷಣೆ, ಸಂಗೀತ ಕೇಳಿಸುತ್ತದೆ. ಉಳಿದಂತೆ ಕ್ಯಾಮೆರಾ ಸಾಗುವುದು ಈ ಚಿತ್ರಮಂದಿರದೊಳಗೆ ಕುಳಿತ ಪ್ರೇಕ್ಷಕರು ಅಂದರೆ ನಟಿಯರ ಮುಖದ ಮೇಲೆ. ಆ ಮೂಲಕವೇ ನವರಸಗಳ ಭಾವನೆಯನ್ನು ಕಟ್ಟಿಕೊಡುವ ಪ್ರಯತ್ನ.

Advertisement

ಹಾಗಾಗಿ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಮುಖದಿಂದ ಕದಲುವುದೇ ಇಲ್ಲ. ಬಹಳ ವಿಶಿಷ್ಟವೆನಿಸಿರುವ ಸಿನಿಮಾ. ಒಂದು ನಾಟಕವನ್ನು ನೋಡುತ್ತಿದ್ದೇವೆಂದುಕೊಂಡು ಕೇಳಿದರೆ ಹೇಗಿರಬಹುದು? ಅಥವಾ ರಂಗದ ಬದಲಿಗೆ ಪ್ರೇಕ್ಷಕರಿಗೆ ಅಭಿಮುಖವಾಗಿ ಕುಳಿತು ನಾಟಕವನ್ನು ಅನುಭವಿಸಿದರೆ (ಕೇವಲ ಸಂಭಾಷಣೆ, ಹಿನ್ನೆಲೆ ಸಂಗೀತ ಇತ್ಯಾದಿ ಮೂಲಕ ಶ್ರವಣ) ಹೇಗಿರಬಹುದು. ಅಂಥದೊಂದು ವಿಶಿಷ್ಟ ಅನುಭವ ನೀಡುವ ಸಿನಿಮಾವಿದು.

ಎ ಟ್ರೂಮನ್‌ ಷೋ

ಈ ಸಿನಿಮಾ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ಇದೂ ಸಹ ವಿಶಿಷ್ಟವಾದುದೇ. ಈಗ ಎಲ್ಲ ನೋಡ್ತೀವಲ್ಲ ಟಿವಿ ಗಳಲ್ಲಿ. ರಿಯಾಲಿಟಿ ಷೋಗಳ ಭರ್ಜರಿ ಜಮಾನಾದಲ್ಲಿದ್ದೇವಲ್ಲ. ಇದಕ್ಕೆಲ್ಲ ಮೂಲ ಎನ್ನುವಂತೆ ರೂಪುಗೊಂಡ ಸಿನಿಮಾ ಇದು ಎ ಟ್ರೂಮನ್‌ ಷೋ. ಇಂದು ಬಿಗ್‌ ಬಾಸ್‌ ರಿಯಾಲಿಟಿ ಷೋನಲ್ಲಿ ಏನೆಲ್ಲ ನಡೆಯುತ್ತೋ ಆದೇ ರೀತಿಯಲ್ಲಿ ಕಥಾ ನಾಯಕ‌ನ ನಿತ್ಯದ ಬದುಕಿನ ಪ್ರತಿ ಕ್ಷಣಗಳನ್ನೂ ಅವನಿಗೆ ಅರಿವಿಲ್ಲದೇ ದಾಖಲಿಸಿಕೊಳ್ಳುತ್ತಾ ಟಿವಿ ಗಳಲ್ಲಿ ಲೈವ್‌ ಪ್ರಸಾರ ಮಾಡುವಂಥ ಕಥಾವಸ್ತುವಿನದ್ದು.

ಇದೊಂದು ಸೈಕಲಾಜಿಕಲ್‌ ಕಾಮಿಡಿ ಸಿನಿಮಾ. ಪೀಟರ ವೇರ್‌ ಸಿನಿಮಾವನ್ನು ನಿರ್ದೇಶಿಸಿದ್ದರು. ಜಿಮ್‌ ಕೆರಿ ಕಥಾ ನಾಯಕನಾಗಿ ಅಭಿನಯಿಸಿದ್ದರು. ಇದರ ಮೂಲ ಚಿತ್ರಕಥೆ ಒಂದು ಸೈನ್ಸ್‌ ಫಿಕ್ಷನ್‌ ನದ್ದಾಗಿತ್ತು. ನ್ಯೂಯಾರ್ಕ್‌ ಸಿಟಿಯಲ್ಲಿ ನಡೆಯುವಂಥದ್ದು.

ಒಂದಿಷ್ಟು ಬದಲಾವಣೆಯೊಂದಿಗೆ ಸಿನಿಮಾ ತೆರೆ ಕಂಡದ್ದು 1998 ರಲ್ಲಿ. ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಯಶಸ್ವಿಯಾಯಿತು. ಆಸ್ಕರ್‌ ಸೇರಿದಂತೆ ಹಲವಾರು ಪ್ರಶಸ್ತಿಗಳೂ ಬಂದವು.

ಒಂದು ಆಸಕ್ತಿದಾಯಕ ಸಂಗತಿಯೆಂದರೆ ಈ ಸಿನಿಮಾಕ್ಕೆ ಬರೀ ನಾಯಕರನ್ನಷ್ಟೇ ಆಯ್ಕೆ ಮಾಡಿರಲಿಲ್ಲ, ನಿರ್ದೇಶಕರನ್ನೂ ಸಹ. ಅವರ್‌ ಬಿಟ್‌ ಇವರ್‌ ಬಿಟ್‌ ಮತ್ತೂಬ್ಬರು ಬೇಕು ಎಂದು ಹುಡುಕಿ ಹುಡುಕಿ ಕೊನೆಗೇ ಪೀಟರ್‌ ವೇರ್‌ಅನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕ ತನ್ನ ನಿರೂಪಣೆ ಶೈಲಿಗೆ ಚಿತ್ರಕಥೆಯನ್ನೂ ಬದಲಿಸಿಕೊಂಡರು. ಹಾಗಾಗಿ ಅದು ಸೈಕಲಾಜಿಕಲ್‌ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತು. ಬಿಗ್‌ ಬಾಸ್‌ ಕ್ಕಿಂತ ಮೊದಲು ಇದನ್ನು ನೋಡಿ.

-ಅಪ್ರಮೇಯ

Advertisement

Udayavani is now on Telegram. Click here to join our channel and stay updated with the latest news.

Next