Advertisement
ಮಹಾಮಾರಿ ಕೋವಿಡ್ ವೈರಸ್‌ನಿಂದಾಗಿ ಇಂದು ಜಗತ್ತು ಮಮ್ಮಲ ಮರಗಿದೆ. ಲಕ್ಷಾಂತರ ಸಾವು-ನೋವು ಕಣ್ಮುಂದೆ ಕಾಣುವಂತಾಗಿದೆ. ಇದಲ್ಲದೇ ಅಲ್ಲಲ್ಲಿ ಮಿಡಿತೆ ದಾಳಿ, ಪಾಕೃತಿಕ ಅಸಮತೋಲದ ನಡುವೆ ಸಮಾಜವೂ ತಂಬಾಕು ಎಂಬ ವಿಷವೂ ಇಂದು ನಾಗರಿಕ ಸಮಾಜವನ್ನು ಬಹುವಾಗಿ ಕಾಡುತ್ತಿದೆ.
Related Articles
Advertisement
ಇಂದು ಬಹುತೇಕ ವಿದ್ಯಾವಂತರೆನಿಸಿಕೊಂಡವರೇ ತಂಬಾಕು ಸೇವೆನೆಗೆ ಮುಂದಾಗುತ್ತಿರುವುದು ವಿಪರ್ಯಾಸ. ಇದಕ್ಕೆಂದೇ ದುಡಿಮೆಯಲ್ಲಿ ಬಹುತೇಕ ಹಣವನ್ನು ವೃಥಾ ಖರ್ಚು ಮಾಡುತ್ತಿದ್ದು, ಕುಟುಂಬ ಜವಾಬ್ದಾರಿ ವಹಿಸುವ ಮಕ್ಕಳೇ ಹೀಗೆ ವ್ಯರ್ಥ ಹಣ ಪೋಲು ಮಾಡುವುದರಿಂದಾಗಿ ಮುಂದೆ ಕುಟುಂಬವೂ ಆರ್ಥಿಕ ಸಮಸ್ಯೆ ಎದುರಿಸಲು ಸಮಸ್ಯೆಯಾಗುತ್ತದೆ. ವ್ಯಸನವೊಂದು ಮುಂದೆ ಕೆಟ್ಟ ಹವ್ಯಾಸವಾಗಿ ಪರಿವರ್ತನೆಗೊಂಡು ಅದು ಮಾನಸಿಕ ಖಿನ್ನತೆ, ಕೀಳರಿಮೆ, ಕೌಟುಂಬಿಕ ಒತ್ತಡಗಳಿಗೆ ಸಿಲುಕಿಸುತ್ತದೆ. ಕೊನೆಗೆ ತಂಬಾಕು ಸಾವಿಗೆ ತಂದು ನಿಲ್ಲಿಸುತ್ತದೆ.
ಪ್ರತಿ ವರ್ಷ ತಂಬಾಕು ಸೇವನೆಯಿಂದ ಸುಮಾರು 9 ಲಕ್ಷದಿಂದ- 10 ಲಕ್ಷ ಜನ ಸಾಯುತ್ತಿದ್ದಾರೆ ಎಂಬ ವರದಿಯೂ ಅಪಾಯಕಾರಿ ಎನಿಸುತ್ತದೆ. ಹೀಗಾಗಿ ತಂಬಾಕು ವಿರೋಧಿಗೆ ಈ ದಿನವೂ ಮುಡುಪಾಗಿರಲಿ, ನಮ್ಮ ಯುವ ಜನತೆಗೆ ಈ ದಿನವೂ ಪಾಠವಾಗಲಿ ಎಂಬ ಆಶಯ ನನ್ನದು.
ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಇದ್ದೇ ಇರುತ್ತದೆ. ಅದನ್ನು ಕಂಡುಕೊಳ್ಳಲು, ಮಾನಸಿಕ ಹಾಗೂ ದೈಹಿಕವಾಗಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಾಗುವುದು. ಅಲ್ಲದೇ ಸರಕಾರದ ಮಟ್ಟದಲ್ಲಿ ಇದು ಚರ್ಚೆಯಾಗಿ, ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕಿದೆ.
ತಂಬಾಕು ವ್ಯಸನದ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಿಂದಲೂ ಜಾಗೃತಿ ಮೂಡಿಸಬೇಕಿದೆ. ಇವುಗಳೆಲ್ಲ ಮುಕ್ತವಾಗಿ ದಿನಂಪ್ರತಿ ಯೋಗ, ಧ್ಯಾನಗಳಿಗೆ ಯುವ ಸಮುದಾಯ ಮೊರೆಹೋದಾಗ, ಇದರಿಂದ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ.
ತಂಬಾಕು ಸೇವನೆಯ ದುಷ್ಪರಿಣಾಮಗಳು:
1. ತಂಬಾಕು ಉತ್ಪನ್ನಗಳಲ್ಲಿ ಸುಮಾರು 4,600 ಕ್ಯಾನ್ಸರ್ ಸಂಬಂಧಿ ರಾಸಾಯನಿಕಗಳಿರುವುದರಿಂದ, ಇದು ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡುತ್ತದೆ.
2. ರಕ್ತದೊತ್ತಡದಲ್ಲಿ ಹೆಚ್ಚಳವಾಗಿ, ಹೃದಯಾಘಾತ ಸಂಭವಿಸುವ ಸಾಧ್ಯತೆ.
3. ತಂಬಾಕು ಸೇವನೆ ಶೇ.95ರಷ್ಟು ಬಾಯಿಯ ಕ್ಯಾನ್ಸರ್, ಗಂಟಲು ಕ್ಯಾನ್ಸರ್‌ನ ಮೂಲ.
4. ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
5. ಮಾನಸಿಕ ಕಿರಿಕಿರಿ, ಖಿನ್ನತೆ ಒಳಗಾಗಬೇಕಾಗುತ್ತದೆ.
6. ತಂಬಾಕಿನ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮವು ಒಣಗಿ, ಸುಕ್ಕುಗಟ್ಟಿದಂತಾಗುತದೆ.
7. ಮೂಳೆ ಮಾಂಸಗಳ ಬೆಳವಣಿಗೆ ಆಮ್ಲಜನಕ ಸಿಗದೆ ದೇಹವು ಅಶಕ್ತತೆಗೆ ಒಳಗಾಗುತ್ತದೆ.
– ಶಿವರಾಜ ಕಮ್ಮಾರ್, ಮಾಚೇನಹಳ್ಳಿ