Advertisement
ಅವರು ಹೀಗೆ ಹೇಳಲೂ ಒಂದು ಕಾರಣವಿದೆ. ಮಾನವ ಒಬ್ಬ ಸಂಘಜೀವಿ. ಹೀಗಾಗಿಯೇ ಪ್ರತಿನಿತ್ಯ ನಮ್ಮ ನೆರೆಹೊರೆಯವರೊಂದಿಗೆ ಒಂದಿಲ್ಲೊಂದು ಕಾರಣಕ್ಕಾಗಿ ಮಾತನಾಡುತ್ತಲೇ ಬಂದಿದ್ದೇವೆ.
Related Articles
Advertisement
ನಾನು ಇತರರಿಗಿಂತ ಭಿನ್ನವಾ?, ನನ್ನನ್ನೇಕೆ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ?, ಯೋಚಿಸಿದ್ದನ್ನು ಹೇಳಿಕೊಳ್ಳಲು ನನ್ನಿಂದೇಕೆ ಆಗುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲ ಯುವಜನರನ್ನೂ ಕಾಡುತ್ತವೆ. ಎಲ್ಲರೂ ನಮ್ಮನ್ನು ಆತ್ಮೀಯತೆಯಿಂದ ಕಾಣಬೇಕು, ಪ್ರೀತಿಸಬೇಕೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆಯೇ ಹೊರತು ಆ ಕೆಲಸವನ್ನು ನಾವೆಷ್ಟು ಮಾಡುತ್ತಿದ್ದೇವೆ ಎಂದು ಒಮ್ಮೆಯೂ ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ಒಂದೊಮ್ಮೆ ಆ ಕೆಲಸ ಸರಿಯಾಗಿ ನಡೆಯುತ್ತಿದ್ದರೆ ಅದೆಷ್ಟೋ ಸಂಬಂಧಗಳು ಇಂದು ಮುರಿದುಬೀಳುವ ಹಂತಕ್ಕೆ ತಲುಪುತ್ತಿರಲಿಲ್ಲವೇನೋ.
ನಮ್ಮೊಡನೆ ನಾವೇ ನಡೆಸುವ ಸಂವಹನಕ್ಕೆ ಬಹಳ ಶಕ್ತಿಯಿದೆ. ಬೇರೆಯವರನ್ನು ಪ್ರಶ್ನಿಸುವುದು ಬಹಳ ಸುಲಭ. ಆದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವುದಿದೆಯಲ್ಲ ಅದು ಎಲ್ಲರಿಗೂ ಬಹಳ ಕಷ್ಟ. ದಿನದ ಆರಂಭ ಅಥವಾ ಅಂತ್ಯದಲ್ಲಿ ನಿಮ್ಮೊಡನೆ ನೀವೇ ಮಾತಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಈ ದಿನ ನಾನೇನು ಮಾಡಬಹುದು ಅಥವಾ ಈ ದಿನ ನಾನು ಏನೇನು ಮಾಡಿದೆ.
ಅದರಲ್ಲಿ ಸರಿ ತಪ್ಪುಗಳೆಷ್ಟಿದ್ದವು ಎಂಬುದನ್ನು ಪ್ರಶ್ನಿಸಿಕೊಳ್ಳಿ. ಇದರಿಂದ ನಿಮ್ಮ ತಪ್ಪಿನ ಅರಿವಾಗುವುದರ ಜತೆಗೆ ಅದನ್ನು ತಿದ್ದಿಕೊಳ್ಳಲೂ ಅವಕಾಶ ದೊರೆಯುತ್ತದೆ. ನಿಮ್ಮ ವ್ಯಕ್ತಿತ್ವವೂ ಉತ್ತಮವಾಗಲು ಸಾಧ್ಯವಾಗುತ್ತದೆ. ನೆನಪಿರಲಿ ನಿಮ್ಮ ಉತ್ತಮ ಸ್ನೇಹಿತ ಯಾವತ್ತಿದ್ದರೂ ನೀವೇ. ಹಾಗಾಗಿಯೇ ಆ ಸ್ನೇಹಿತನ ಬಳಿ ಎಲ್ಲರಿಗಿಂತ ತುಸು ಜಾಸ್ತಿಯೇ ಮಾತನಾಡಿ.
– ಪ್ರಸನ್ನ ಹೆಗಡೆ