Advertisement
ಒಂದನೇ ತರಗತಿಯಿಂದಲೇ ನಾನು ಇಟ್ಟುಕೊಂಡ ಗುರಿ ಏನೆಂದರೆ ನಾನು ಐ.ಎ.ಎಸ್. ಅಂದು ನನಗೆ ಈ ಹುದ್ದೆಯ ಕಾರ್ಯವ್ಯಾಪ್ತಿಯ ಅರಿವು ಇರಲಿಲ್ಲ. ಬಳಿಕ ಹುದ್ದೆಯ ಮಹತ್ವದ ಅರಿವು ನನ್ನಲ್ಲಿ ಆಯಿತು.
Related Articles
Advertisement
ಗುರಿಗಳ ಸಂಖ್ಯೆ ಹೆಚ್ಚಾದಂತೆ ದುಡ್ಡು ಸಂಪಾದಿಸಬೇಕು ಎನ್ನುವ ಹಂಬಲ ಹೆಚ್ಚಾಯಿತು. ದುಡ್ಡಿಗಾಗಿ ಹಾತೊರೆಯುತ್ತಿದ್ದ ನನ್ನಲ್ಲಿ, ದುಡ್ಡೇ ಜೀವನವಲ್ಲ ಎಂಬ ಪಾಠದ ಅರಿವಾಯಿತು. ದುಡ್ಡು ಜೀವನದ ಒಂದು ಭಾಗ ಮಾತ್ರ. ದುಡ್ಡಿನಿಂದ ಬಹಳಷ್ಟು ಕೆಲಸಗಳನ್ನು ನಾನು ಮಾಡಬೇಕೆಂದು ನಿರ್ಧರಿಸಿದ್ದೆ. ಬಳಿಕ ಆ ಕೆಲಸಗಳನ್ನು ನನ್ನ ಗುರಿಯನ್ನಾಗಿ ಬದಲಿಸಿದೆ.
ಇಷ್ಟನ್ನು ಸಾಧಿಸಲು ಯಾರಾದರೊಬ್ಬರ ಸಹಾಯ, ಬೆಂಬಲದ ಮಾತುಗಳು ಇರಲೇಬೇಕು. ನನ್ನ ಸರ್ವಸ್ವವಾದ ಹಾಗೂ ನಡೆದಾಡುವ ದೇವಿಯಾದ ನನ್ನ ತಾಯಿಯ ಸಹಕಾರ ಇದೆ. ನನ್ನ ಗುರಿಗಳನ್ನು ಜೀವಂತವಿರಿಸಿ ಅವುಗಳನ್ನು ಈಡೇರಿಸಲು ನನ್ನಲ್ಲಿ ಶಕ್ತಿತುಂಬುವ ಜವಾಬ್ದಾರಿಯನ್ನು ಹೊತ್ತಿರುವ ಏಕೈಕ ವ್ಯಕ್ತಿ ತಾಯಿ. ನನ್ನನ್ನು ಸಾಧನೆಯ ಅಂಚಿಗೆ ತಲುಪಿಸುವ ಅವಳಿಗೂ ಸಾರ್ಥಕ್ಯವನ್ನು ನೀಡಲು ಇಚ್ಛಿಸುತ್ತೇನೆ.
ಒಂದೇ ಗುರಿಯಿದ್ದರೆ ಅದರೆಡೆಗೆ ಹೋಗುವುದು ಸುಲಭ ಮತ್ತು ಅದರಿಂದ ಯಾವುದೇ ಪಾಠಗಳನ್ನು ನಾನು ಕಲಿಯಲು ಅಸಾಧ್ಯ ಆದ್ದರಿಂದ ಹೆಚ್ಚು ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾನು ಅಹಂಕಾರವನ್ನು ಕಳೆದು ನಿರಹಂಕಾರದಿಂದ ಬೆಳೆಯಬಲ್ಲೆ. ನನ್ನೊಂದಿಗೆ ಇತರರನ್ನು ಬೆಳೆಸಿ, ದೇಶವನ್ನೂ ಬೆಳೆಸಬಲ್ಲೆ. ನಾನು ಅಂದುಕೊಂಡ ಗುರಿಗಳನ್ನು ಮುಟ್ಟಿದರೆ, ಜನನಿ ಮತ್ತು ಜನ್ಮಭೂಮಿಯ ಋಣವನ್ನು ಸ್ವಲ್ಪ ಮಟ್ಟಿಗೆ ತೀರಿಸಿದಂತೆ.– ಮನೀಷಾ ಕಶ್ಯಪ್, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ