Advertisement
ಮೂಲತಃ ಶಿರಸಿ ಜಾಗನಳ್ಳಿ ಕುಟುಂಬದ ಸಿದ್ದಾಪುರತಾಲೂಕಿನ ತಟ್ಟಿàಕೈನಲ್ಲಿ ಹುಟ್ಟಿ ಬೆಳೆದು, ಎಳೆಯವಯಸ್ಸಿನಲ್ಲೇ ಸೇವೆಗೆ ಹೋಗಿದ್ದ ಶ್ರೀ ಸಹಜಾನಂದಅವಧೂತರಲ್ಲಿ ದೀಕ್ಷೆಯನ್ನೂ ಪಡೆದು, ಕೊಳಗಿಬೀಸ್‌ಬಳಿಕ 1973ರ ನಂತರ ದೀವಗಿಯಲ್ಲಿ ಆಶ್ರಮಕಟ್ಟಿದ ಶ್ರೀಗಳು ನಂಬಿ ಬಂದ ಶಿಷ್ಯರಿಗೆ ಭರವಸೆಯಶಕ್ತಿ ಆಗಿದ್ದರು. ಶ್ರೀ ರಾಮಾನಂದ ಅವಧೂತರುಕೊನೇ ಕ್ಷಣದ ತನಕ ಇಷ್ಟದ ಹಾಗೂ ಆರಾಧ್ಯದೈವಹನುಮಂತನ ಪೂಜೆ- ಪುನಸ್ಕಾರ ಆರಾಧನೆಯಲ್ಲೇಬದುಕು ನಡೆಸಿ, ಸಿದ್ಧಿಗಳಿಸಿದವರು.
Related Articles
Advertisement
ರಾಮಚಂದ್ರಅವರು ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ವೇದಮಂತ್ರಗಳ ಅಧ್ಯಯನದ ಮೇಲೆ ತಮ್ಮ ಮನಸ್ಸನ್ನುಸಂಪೂರ್ಣವಾಗಿ ಕೇಂದ್ರೀಕರಿಸಿದರಲ್ಲದೆ ವೈದಿಕಜೀವನ ಮತ್ತು ಆಧ್ಯಾತ್ಮದ ಆಳವಾದ ಚಿಂತನೆಯಲ್ಲಿತೊಡಗಿದರು.ತಮ್ಮ 22 ನೇ ವಯಸ್ಸಿನಲ್ಲಿ ಶ್ರೀಸಹಜಾನಂದ ಅವಧೂತ ಸ್ವಾಮೀಜಿಯವರಿಂದಸನ್ಯಾಸ ದೀಕ್ಷೆ ಪಡೆದ ರಾಮಚಂದ್ರರು ರಾಮಾನಂದಅವಧೂತರಾದರು.ಆಧ್ಯಾತ್ಮಿಕ ಜವಾಬ್ದಾರಿಯ ಸನ್ಯಾಸ ಸ್ವೀಕರಿಸಿದ್ದಅವಧೂತರು ಸ್ವಲ್ಪಕಾಲ ನೆಲಮಾವು, ಶೀಗೇಹಳ್ಳಿಮತ್ತು ನಂತರ ಗೋಕರ್ಣದಲ್ಲಿ ವಾಸಿಸುತ್ತಿದ್ದರು. ಗೋಕರ್ಣದ ಬಳಿಯ ಗುಹೆಯಲ್ಲಿ ವಾಸಿಸುತ್ತಿದ್ದರು.ಪ್ರತಿದಿನ ಒಮ್ಮೆ, ಅವರು ಮಹಾಬಲೇಶ್ವರದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಮಾರುತಿಯನ್ನುಕಂಬದಲ್ಲಿ ಪೂಜಿಸುತ್ತಿದ್ದರು. ಕನಸಿನಲ್ಲಿ ಸ್ಪೂರ್ತಿಪಡೆದ ಭಕ್ತರೊಬ್ಬರು ದೀವಗಿ ಮಲ್ಲಿಕಾರ್ಜುನದೇವಸ್ಥಾನದ ಪಕ್ಕದಲ್ಲಿ ಭೂಮಿಯನ್ನು ದಾನಮಾಡಿದರು. ಅಲ್ಲಿ, ಒಂದು ಆಶ್ರಮವನ್ನುಸ್ಥಾಪಿಸಿದರು ಮತ್ತು ಸದ್ಗುರು ಶ್ರೀ ಶ್ರೀಧರ ಸ್ವಾಮೀಜಿಪಾದುಕೆಗಳನ್ನು ಪೀಠಗಳಲ್ಲಿ ಇರಿಸಲಾಯಿತು.ಸುಮಾರು 1973 -74 ರಲ್ಲಿ, ವೀರ ಮಾರುತಿಮಂದಿರ ವನ್ನು ಸ್ಥಾಪಿಸಲಾಯಿತು.ಅದೇ ಭಕ್ತರ ಕೇಂದ್ರವಾಗಿತ್ತು. ಎಷ್ಟೋ ಸಂಕೀರ್ಣಸಮಸ್ಯೆಗೆ ದೀವಗಿ ಒಂದು ಆಧ್ಯಾತ್ಮಿಕ, ಧಾರ್ಮಿಕಉತ್ತರದ ನೆಲೆಯೂ ಆಗಿತ್ತು. ಹೃದಯ ಸಂಬಂಧಿಸಮಸ್ಯೆ ಉಂಟಾದಾಗಲೂ ಎದೆಗುಂದದೇ ಶ್ರೀಗಳುತಮ್ಮ ದಿನಚರಿ ಬಿಟ್ಟಿರಲಿಲ್ಲ. ಗಾಲಿ ಖುರ್ಚಿ ಮೇಲೆಕುಳಿತು ಜೀವನೋತ್ಸಾಹದಲ್ಲಿ ಇರುತ್ತಿದ್ದ ಶ್ರೀಗಳುಶಿಷ್ಯರ ಮನೆಗಳಿಗೆ ಬರುತ್ತೇನೆ ಎಂದರೆ ಎಂಥ ದೈಹಿಕನೋವು, ಕಷ್ಟ ಇದ್ದರೂ, ರಸ್ತೆ ಸರಿ ಇಲ್ಲದೇ ಇದ್ದರೂತೆರಳುತ್ತಿದ್ದರು. ಅವರ ಶಿಷ್ಯ ಪ್ರೀತಿಗೆ ಇವುಗಳುಸಾಕ್ಷಿಯಾಗುತ್ತಿದ್ದವು. ಶ್ರೀರಾಮಾನಂದ ಅವಧೂತರುಎಲ್ಲ ಮಠಾಧೀಶರ ಜೊತೆ ಅನ್ಯೋನ್ಯ ಸಂಬಂಧಇಟ್ಟುಕೊಂಡು ಪ್ರಚಾರ ಬಯಸದೇ ಆಧ್ಯಾತ್ಮಿಕ ಸಾಧನೆಮೂಲಕವೇ ಶಿಷ್ಯರ ಸಮೂಹ ಕಟ್ಟಿಕೊಂಡವರು.ಅವರಿಲ್ಲದೇ ಶಿಷ್ಯರು ಇಂದು ಅನಾಥರಾಗಿದ್ದಾರೆ.