ನವದೆಹಲಿ: ಉತ್ತರಾಖಂಡ್ ಹೈಕೋರ್ಟ್ ಆದೇಶದ ಮೇರೆಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಉತ್ತರಾಖಂಡ್ ಸರ್ಕಾರ ಮಂಗಳವಾರ(ಜೂನ್ 29) ಚಾರ್ ಧಾಮ್ ಯಾತ್ರೆಯನ್ನು ಮುಂದೂಡಿರುವುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಷ್ಕೃತ ಎಪ್ ಒಪಿ (ಮಾರ್ಗಸೂಚಿ) ಯನ್ನು ಹೊರಡಿಸಿದೆ.
ಇದನ್ನೂ ಓದಿ:ವಾರದಲ್ಲಿ ಉಡುಪಿ ಜಿಲ್ಲೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ಪೂರ್ಣ – ಸಚಿವ ಕೋಟ
ಹೈಕೋರ್ಟ್ ಆದೇಶದಿಂದಾಗಿ ಈಗಾಗಲೇ ಜುಲೈ 1ರಿಂದ ಪ್ರಾರಂಭವಾಗಬೇಕಿದ್ದ ಉದ್ದೇಶಿತ ಚಾರ್ ಧಾಮ್ ಯಾತ್ರೆಯನ್ನು
ರದ್ದುಗೊಳಿಸಿರುವುದಾಗಿ ತಿಳಿಸಿದೆ. ರಾಜ್ಯ ಸರ್ಕಾರ ಈ ಹಿಂದೆ ತೀರ್ಥಯಾತ್ರೆಗಾಗಿ ಹೊರಡುವ ಯಾತ್ರಾರ್ಥಿಗಳಿಗಾಗಿ ಕೋವಿಡ್ 19
ಮಾರ್ಗಸೂಚಿಯನ್ನು ಹೊರಡಿಸಿತ್ತು.
ಚಾರ್ ಧಾಮ್ ಯಾತ್ರೆಯ ಎರಡನೇ ಹಂತ ಜುಲೈ1ರಿಂದ ಪ್ರಾರಂಭವಾಗಲಿದೆ. ಕಡಿಮೆ ಪ್ರಮಾಣದ ಯಾತ್ರಾರ್ಥಿಗಳಿಗೆ ಚಾರ್ ಧಾಮಕ್ಕೆ ಭೇಟಿ ನೀಡಲು ಅನುಮತಿ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರ ತೆದುಕೊಳ್ಳಲಾಗಿತ್ತು. ಅಲ್ಲದೇ ಚಾರ್ ಧಾಮ್ ದೇವಾಲಯದ ಪೂಜೆಯನ್ನು ನೇರ ಪ್ರಸಾರ ಮಾಡುವಂತೆ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ರುದ್ರಪ್ರಯಾಗ್, ಚಮೋಲಿ ಮತ್ತು ಉತ್ತರ್ ಕಾಶಿ ನಿವಾಸಿಗಳಿಗೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು. ರುದ್ರಪ್ರಯಾಗ್ ನಿವಾಸಿಗಳಿಗೆ ತೀರ್ಥಯಾತ್ರೆ ಕ್ಷೇತ್ರವಾದ ಕೇದಾರನಾಥಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. ಅಲ್ಲದೇ ಚಮೋಲಿ ಜಿಲ್ಲೆಯ ಸ್ಥಳೀಯರಿಗೆ ಬದರಿನಾಥ್ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.