Advertisement

Uttarakhand: ಲಗ್ನವಾದ ಒಂದೇ ವರ್ಷದಲ್ಲಿ ವಿಚ್ಛೇದನಕ್ಕೆ ಅವಕಾಶ ಇಲ್ಲ: ಸಮಾನ ಸಂಹಿತೆ

11:58 PM Feb 06, 2024 | Team Udayavani |

ಡೆಹ್ರಾಡೂನ್‌: “ಉತ್ತರಾಖಂಡದಲ್ಲಿ ಮದುವೆಯಾದ 60 ದಿನಗಳಲ್ಲಿ ಅದನ್ನು ನೋಂದಣಿ ಮಾಡಿಸಬೇಕು. ಜತೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕವೂ ಕ್ರಮ ಬದ್ಧ ಗೊಳಿಸಬಹುದು.’

Advertisement

ಇದು ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರು ಮಂಗಳವಾರ ಮಂಡಿಸಿದ ಸಮಾನ ನಾಗರಿಕ ಸಂಹಿತೆಯಲ್ಲಿನ ಪ್ರಧಾನ ಅಂಶಗಳಲ್ಲೊಂದು.

ಮದುವೆಯನ್ನು ವಿವಿಧ ಧಾರ್ಮಿಕ ನಂಬಿಕೆ ಗಳು, ಆಚರಣೆಗಳ ಮೂಲಕ ವಿಧಿಬದ್ಧಗೊಳಿಸ ಬಹುದು. 1909ರ ಆನಂದ್‌ ವಿವಾಹ ಕಾಯ್ದೆ, 1954ರ ವಿಶೇಷ ವಿವಾಹ ಕಾಯ್ದೆ, 1937ರ ಆರ್ಯ ವಿವಾಹ ಕಾಯ್ದೆಯ ಮೂಲ ಕವೂ ವಿಧಿಬದ್ಧಗೊಳಿಸಬಹುದು ಎಂದಿದ್ದಾರೆ.

“2010, ಮಾ.26ರ ನಂತರ ನಡೆದ ಎಲ್ಲ ಮದುವೆಗಳನ್ನೂ 6 ತಿಂಗಳೊಳಗೆ ನೋಂದಣಿ ಮಾಡಿಸಬೇಕು’ ಎಂದು ಹೇಳಿದ್ದಾರೆ. ಒಂದು ವೇಳೆ ನೋಂದಣಿ ಮಾಡಿಸದಿದ್ದರೆ 20000 ರೂ. ದಂಡ ಪಾವತಿಸಬೇಕಾಗುತ್ತದೆ. ಹಾಗಂತ ವಿವಾಹ ವನ್ನು ಅಸಿಂಧು ಎಂದು ಘೋಷಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ವಿಧೇಯಕದಲ್ಲಿನ ಮತ್ತೂಂದು ಮಹತ್ವದ ಅಂಶವೆಂದರೆ ಮದುವೆ ವೇಳೆ ಸಂಗಾತಿಗಳಿಗೆ ಇನ್ನೊಬ್ಬ ಸಂಗಾತಿಯಿಲ್ಲದ ಪಕ್ಷದಲ್ಲಿ, ಮದುವೆಯನ್ನು ವಿಧಿಬದ್ಧ ಎಂದು ಪ್ರಕಟಿಸಬಹುದು.

ವಯೋಮಿತಿ ನಿಗದಿ: ಮದುವೆಯಾಗಲು ಪುರುಷನಿಗೆ 21 ವರ್ಷ, ಮಹಿಳೆಗೆ 18 ವರ್ಷ ಪೂರ್ಣವಾಗಿರಲೇಬೇಕು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ. ಮದುವೆ ವೇಳೆ ಇಬ್ಬರೂ, ಯಾವುದೇ ಮಾನಸಿಕ ಕಾರಣಗಳಿಂದ ಸೂಕ್ತ ರೀತಿಯಲ್ಲಿ ಒಪ್ಪಿಗೆ ನೀಡಲು ಅಸಮರ್ಥರಾಗಿ ರಬಾರದು. ಒಂದು ವೇಳೆ ಇಬ್ಬರೂ ಸಮ್ಮತ ರೀತಿಯಲ್ಲಿ ಒಪ್ಪಿಗೆ ನೀಡಿದರೂ, ಮದುವೆಗೆ ಅಡ್ಡಿಯಾಗುವಂತಹ ಯಾವುದೇ ಮಾನಸಿಕ ಅಥವಾ ಅದನ್ನು ಹೋಲುವಂತಹ ಸಮಸ್ಯೆ ಹೊಂದಿರಬಾರದು ಎಂದು ಸರ್ಕಾರ ತಿಳಿಸಿದೆ.

Advertisement

ವರ್ಷದೊಳಗಿಲ್ಲ ವಿಚ್ಛೇದನ: ಕೆಲವೊಂದು ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ವಿವಾಹವಾದ ಒಂದೇ ವರ್ಷದಲ್ಲಿ ವಿಚ್ಛೇದನಕ್ಕೆ ಅವಕಾಶ ಇಲ್ಲ ಎಂದು ಸಿಎಂ ಧಾಮಿ ಹೇಳಿದರು. ಸಂಗಾತಿಗಳಲ್ಲಿ ಒಬ್ಬರು ತಾವು ಅಶ್ಲೀಲ ಕೃತ್ಯಗಳಿಗೆ ಬಲಿಯಾಗಿದ್ದರೆ, ಮಾನಸಿಕ, ದೈಹಿಕ ಹಿಂಸೆಗೆ ತುತ್ತಾಗಿದ್ದರೆ, ಅನಗತ್ಯವಾಗಿ ದೂರ ತಳ್ಳಲ್ಪಟ್ಟಿದ್ದರೆ ನ್ಯಾಯಾಲಯದ ಕದ ತಟ್ಟಬಹುದು. ಧಾರ್ಮಿಕ ಮತಾಂತರಗೊಳಗಾದರೆ, ಸಂಗಾತಿ ಮಾನಸಿಕ ಅಸ್ವಾಸ್ಥ್ಯ ಹೊಂದಿದ್ದರೆ, ಲೈಂಗಿಕ ರೋಗಗಳನ್ನು ಹೊಂದಿದ್ದರೂ ದೂರಾಗಬಹುದು.
ಪಿತ್ರಾರ್ಜಿತ ಆಸ್ತಿ ಹಂಚಿಕೆ: ನೋಂದಾಯಿತ ವಿಲ್‌ ಬರೆಯದೇ ವ್ಯಕ್ತಿಯೊಬ್ಬ ಮೃತಪಟ್ಟರೆ, ಆತ ಕುಟುಂಬ ಸದಸ್ಯರಿಗೆ ಸಮಾನವಾಗಿ ಆಸ್ತಿ ಹಂಚಿಕೆ ಯಾ ಗುತ್ತದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಆತನಿಗೆ ನೇರ ಕುಟುಂಬ ಸದಸ್ಯರು ಇಲ್ಲದ ಪಕ್ಷದಲ್ಲಿ, ಆತನ ತಂದೆಯ ಕಡೆಯ ಸಮೀಪದ ರಕ್ತಸಂಬಂಧಿಗಳಿಗೆ ಆಸ್ತಿ ಹಂಚಿಕೆಯಾಗುತ್ತದೆ. ಅವರೂ ಇಲ್ಲವಾದರೆ, ದೂರಸಂಬಂಧಿಗಳಿಗೆ ಪಾಲು ಕೇಳುವ ಅಧಿಕಾರವಿರುತ್ತದೆ. ಆಸ್ತಿಯಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ಸಮಾನವಾದ ಅಧಿಕಾರವಿಕರುತ್ತದೆ. ಹಿಂದೂ ಅವಿಭಕ್ತ ಕುಟುಂಬಕ್ಕೆ ಈ ನಿಯಮ ಅನ್ವಯವಾಗುತ್ತದೆ

ವಿವಾಹಕ್ಕೆ ಏನೇನು ಕಾನೂನುಗಳು?
-60 ದಿನಗಳೊಳಗೆ ನೋಂದಣಿ ಕಡ್ಡಾಯ.
-2010, ಮಾ.26ರ ನಂತರ ನಡೆದ ಎಲ್ಲ ಮದುವೆಗಳನ್ನೂ 6 ತಿಂಗಳೊಳಗೆ ನೋಂದಣಿ
-ಮದುವೆಯಾಗಲು ಪುರುಷನಿಗೆ 21 ವರ್ಷ, ಮಹಿಳೆಗೆ 18 ವರ್ಷ ಮುಗಿದಿರಲೇಬೇಕು.
-ಇಬ್ಬರೂ, ಮಾನಸಿಕ ಕಾರಣಗಳಿಂದ ಸೂಕ್ತ ರೀತಿ ಯಲ್ಲಿ ಒಪ್ಪಿಗೆ ನೀಡಲು ಅಸಮರ್ಥರಾಗಿರಬಾರದು.

ವಿಚ್ಛೇದನ ನಿಯಮಗಳು
-ಮಹಿಳೆಯರಿಗೆ ವಿಚ್ಛೇದನ ಕೇಳಲು ವಿಶೇಷ ಹಕ್ಕು
-ಧಾರ್ಮಿಕ ಮತಾಂತರ, ಸಂಗಾತಿ ಮಾನಸಿಕ ಅಸ್ವಾಸ್ಥ ಹೊಂದಿದ್ದರೆ ವಿಚ್ಛೇದನ
-ಸಂಗಾತಿ ಅನಗತ್ಯವಾಗಿ ದೂರವಾಗಿದ್ದರೆ ಸಾಧ್ಯ

ಪಿತ್ರಾರ್ಜಿತ ಆಸ್ತಿ ಹಂಚಿಕೆ
-ನೋಂದಾಯಿತ ವಿಲ್‌ ಬರೆಯದೇ ವ್ಯಕ್ತಿ ಮೃತಪಟ್ಟರೆ, ಕುಟುಂಬಸ್ಥರಿಗೆ ಸಮಾನ ಆಸ್ತಿ ಹಂಚಿಕೆ
-ಸಮೀಪದ ಸಂಬಂಧಿಗಳು ಇಲ್ಲದಿದ್ದರೆ ದೂರಸಂಬಂಧಿಗಳಿಗೆ ಆಸ್ತಿಯಲ್ಲಿ ಪಾಲು
-ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ಸಮಾನವಾದ ಅಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next