Advertisement

Uniform Civil Code ಅಂಗೀಕಾರಗೊಂಡ ಮೊದಲ ರಾಜ್ಯವಾಗಿ ಉತ್ತರಾಖಂಡ: ಸಿಎಂ ಧಾಮಿ ಸಂತಸ

10:03 PM Feb 07, 2024 | Team Udayavani |

ಡೆಹ್ರಾಡೂನ್‌: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರಕಾರ ಮಂಡಿಸಿದ ಐತಿಹಾಸಿಕ ಏಕರೂಪ ನಾಗರಿಕ ಸಂಹಿತೆ ಉತ್ತರಾಖಂಡ್ 2024 ಮಸೂದೆಯನ್ನು ಬುಧವಾರ ಸದನದಲ್ಲಿ ಅಂಗೀಕರಿಸಲಾಗಿದೆ. ಇದರಿಂದಾಗಿ ಏಕರೂಪ ನಾಗರಿಕ ಸಂಹಿತೆ ಅಂಗೀಕಾರ ಗೊಂಡ ಮೊದಲ ರಾಜ್ಯವಾಗಿ ದಾಖಾಲಾಗಿದೆ.

Advertisement

ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಹಳೆಯ ವೈಯಕ್ತಿಕ ಕಾನೂನುಗಳನ್ನು ಬದಲಿಸಲು ಪ್ರಯತ್ನಿಸುವ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಸದನದ ಆಯ್ಕೆ ಸಮಿತಿಗೆ ಉಲ್ಲೇಖಿಸಲು ಪ್ರತಿಪಕ್ಷಗಳ ಒತ್ತಾಯದ ನಡುವೆ ಅಂಗೀಕರಿಸಲಾಯಿತು.

ಏತನ್ಮಧ್ಯೆ, ಪಕ್ಷ ಮಸೂದೆಗೆ ವಿರುದ್ಧವಾಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ, ಆದರೆ ಅದರ ಅಂಗೀಕಾರದ ಮೊದಲು ಅದರ ನ್ಯೂನತೆಗಳನ್ನು ತೆಗೆದುಹಾಕಲು ಅದರ ನಿಬಂಧನೆಗಳನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ಒತ್ತಾಯಿಸಿದೆ.

ಮಸೂದೆ ಸದನದಲ್ಲಿ ಅಂಗೀಕರಿಸುತ್ತಿದ್ದಂತೆಯೇ ಬಿಜೆಪಿ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದ್ದು “ಭಾರತ್ ಮಾತಾ ಕಿ ಜೈ” ಮತ್ತು ಇತರ ಘೋಷಣೆಗಳನ್ನು ಮೊಳಗಿಸಲಾಗಿದೆ.

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, “ದೇವಭೂಮಿ ಉತ್ತರಾಖಂಡದ ಜನರು ಈ ಭಾಗ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇರಬೇಕಾಗಿದ್ದ ಏಕರೂಪತೆ, ಸಂವಿಧಾನದಲ್ಲಿ ಹೇಳಿರುವುದು, ಸಂವಿಧಾನ ರಚನೆ ಮಾಡಿದವರು ಬಯಸಿದ್ದನ್ನು ಇಂದು ಉತ್ತರಾಖಂಡ ಮಾಡಿದೆ.ಸಂವಿಧಾನಕ್ಕೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ. ದೇವಭೂಮಿಯಿಂದ ದೇಶಾದ್ಯಂತ ಈ ಕಾನೂನು ಜಾರಿಯಾಗಲಿದೆ.ಇತರ ರಾಜ್ಯಗಳಲ್ಲೂ ಈ ಕಾನೂನಿಗೆ ಸಂಬಂಧಿಸಿದ ಚರ್ಚೆಗಳು ಆರಂಭವಾಗಿವೆ.ರಾಜಸ್ಥಾನ ಮತ್ತಿತರ ರಾಜ್ಯಗಳು ಈ ದಿಕ್ಕಿನತ್ತ ಹೆಜ್ಜೆ ಇಟ್ಟಿವೆ” ಎಂದರು.

Advertisement

“ಈ ಕಾನೂನು ಸಮಾನತೆ, ಏಕರೂಪತೆ ಮತ್ತು ಸಮಾನ ಹಕ್ಕುಗಳನ್ನು ಹೊಂದಿದೆ. ಈ ಬಗ್ಗೆ ಹಲವು ಅನುಮಾನಗಳು ಇದ್ದವು ಆದರೆ ವಿಧಾನಸಭೆಯಲ್ಲಿ ಎರಡು ದಿನಗಳ ಚರ್ಚೆ ಎಲ್ಲವನ್ನೂ ಸ್ಪಷ್ಟಪಡಿಸಿದೆ. ಈ ಕಾನೂನು ಯಾರ ವಿರುದ್ಧವೂ ಅಲ್ಲ. ಇದು ಸಾಮಾಜಿಕ ಕಾರಣದಿಂದ ಕಷ್ಟವನ್ನು ಎದುರಿಸಬೇಕಾದ ಮಹಿಳೆಯರಿಗೆ. ನಿಯಮಾವಳಿಗಳು.ಇದರಿಂದ ಅವರ ಆತ್ಮಸ್ಥೈರ್ಯ ಗಟ್ಟಿಯಾಗುತ್ತದೆ.ಮಹಿಳೆಯರ ಸರ್ವಾಂಗೀಣ ಅಭಿವೃದ್ದಿಗೆ ಈ ಮಸೂದೆ ಪಾಸಾಗಿದೆ.ರಾಷ್ಟ್ರಪತಿಗೆ ಕಳುಹಿಸುತ್ತೇವೆ.ರಾಷ್ಟ್ರಪತಿ ಅಂಕಿತ ಹಾಕಿದ ಕೂಡಲೇ ರಾಜ್ಯದಲ್ಲಿ ಕಾನೂನಾಗಿ ಜಾರಿಗೆ ತರುತ್ತೇವೆ” ಎಂದು ಧಾಮಿ ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next