ಶಿರಸಿ : ಓಲಂಫಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ ಛೋಪ್ರಾ ಅವರ ಗುರುಗಳಲ್ಲಿ ಒಬ್ಬರಾದ ಸುಭೇದಾರ ಕಾಶೀನಾಥ ನಾಯ್ಕ ಅವರು ಸ್ವ ಗ್ರಾಮದಲ್ಲಿ ಇರುವ ತನ್ನ ಪ್ರಥಮ ಕ್ರೀಡಾ ಗುರುವನ್ನು ನಮಿಸಿ ಆಶೀರ್ವಾದ ಪಡೆದು ಧನ್ಯತಾ ಕ್ಷಣ ಅನುಭವಿಸಿದರು.
ಇದನ್ನೂ ಓದಿ : ಪುಣ್ಯಕ್ಷೇತ್ರ ‘ಮಥುರಾ’ದಲ್ಲಿ ಮಾಂಸ-ಮದ್ಯ ಮಾರಾಟ ನಿಷೇಧಿಸಿದ ಸಿಎಂ ಯೋಗಿ
ಮೂಲತಃ ಬನವಾಸಿ ಸಮೀಪದ ಬೆಂಗಳಿಯ ಕಾಶೀನಾಥ ಓದಿದ್ದು ಕನ್ನಡ ಪ್ರಾಥಮಿಕ ಶಾಲೆಯಲ್ಲಿ. ಮನೆಯ ಸಮೀಪವೇ ಇದ್ದ ಓಣಿಕೇರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಕಾಶೀನಾಥ ಅವರು ಮೂರನೇ ತರಗತಿಯಲ್ಲಿ ಇದ್ದಾಗ ಮುಖ್ಯಾಧ್ಯಾಪಕರಾಗಿ ಬಂದಿದ್ದ ಪ್ರಭಾಕರ ಮುರ್ಡೇಶ್ವರ ಅವರು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಿ ಕ್ರಿಡೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಿದ್ದರು.
ನನಗೆ ಕಬ್ಬಡ್ಡಿ, ಗುಂಡು, ಚಕ್ರ ಎಸೆತ ಕಲಿಸಿದ್ದರು. ಅವರು ಕ್ರೀಡೆಯ ಜಾಗೃತಿ ಮೂಡಿಸದೇ ಹೋದರೆ ಇಂದು ಹೀಗೆಲ್ಲ ಸಾಧನೆ ಆಗುತ್ತಿರಿಲ್ಲ. ಈ ಕಾರಣದಿಂದ ಪೂನಾದಿಂದ ಊರಿಗೆ ಹೋದವನು ಓಣಿಕೇರಿಯಲ್ಲಿನ ಅವರ ಮನೆಗೆ ತೆರಳಿ ನಮಿಸಿ ಬಂದೆ. ನಮ್ಮ ಪ್ರೀತಿಯ ಮುರ್ಡೇಶ್ವರ ಮಾಷ್ಟ್ರು ಅವರಾಗಿದ್ದರು ಎಂದು ಭಾವುಕರಾದರು.
ಇದನ್ನೂ ಓದಿ : ಮುಂಬೈನಲ್ಲಿ ಈಶಾನ್ಯ ಮಾರುತದ ಅಬ್ಬರ : ಭೂಕುಸಿತ, ಕೆಲವೆಡೆ ಅಸ್ತವ್ಯಸ್ಥಗೊಂಡ ರಸ್ತೆ ಸಂಚಾರ