Advertisement

ಕಾರ್ಮಿಕ ಸುರಕ್ಷಾ ಕಿಟ್ ಹಾಗೂ ಇತರೆ ಕಿಟ್ ಗಳನ್ನು ಶೀಘ್ರವಾಗಿ ನೀಡಿ : ಶಿವರಾಮ ಹೆಬ್ಬಾರ್

05:01 PM Aug 26, 2021 | Team Udayavani |

ಶಿರಸಿ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು (ಗುರುವಾರ, ಆಗಸ್ಟ್ 26) ವಿಕಾಸ ಸೌಧದ ಕಾರ್ಯಾಲಯದಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾ ಕಾರ್ಮಿಕ  ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕವಾಗಿ ಸಭೆ ನಡೆಸಿದರು.

Advertisement

ಈ ಸಭೆಯಲ್ಲಿ ಸಚಿವರು ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿಗೊಳಿಸುವುದಕ್ಕೆ ಒಂದು ತಿಂಗಳುಗಳ ಕಾಲ ಕಾರ್ಮಿಕ ಅದಾಲತ್ ನಡೆಸಲಾಗುತ್ತದೆ. ಈ ಅಭಿಯಾನದ ಬಗ್ಗೆ ಅಧಿಕಾರಿಗಳು  ವ್ಯಾಪಕವಾಗಿ ಪ್ರಚಾರ ನಡೆಸುವಂತೆ ಸೂಚಿಸಿದರು.  ಕಾರ್ಮಿಕ ಸುರಕ್ಷಾ ಕಿಟ್ ಹಾಗೂ ಇತರೆ ಕಿಟ್ ಗಳನ್ನು ಶೀಘ್ರವಾಗಿ ನೀಡುವಂತೆ ತಿಳಿಸಿದರು.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ನಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ

ಕಾರ್ಮಿಕರಿಗೆ ನೀಡಲಾಗುತ್ತಿರುವ ಯೋಜನೆ  ಪ್ರಗತಿ ಕುರಿತು ಹಾಗೂ ಸೆನ್ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ ಹಾಗೂ ಕಾರ್ಮಿಕ ಆಯುಕ್ತ ಅಕ್ರಂ ಪಾಷಾ ಹಾಗೂ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯ ನಿರ್ದೇಶಕರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ : ಸುಪ್ರೀಂ ಕೋರ್ಟ್ ನಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next