ಉತ್ತರ ಪ್ರದೇಶ: ಬಲವಂತದ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ(ಲವ್ ಜಿಹಾದ್) ವಿರುದ್ಧದ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರು ಶನಿವಾರ (ನವೆಂಬರ್ 28, 2020) ಅಂಕಿತ ಹಾಕಿದ ಬೆನ್ನಲ್ಲೇ ಇದೀಗ ಮೊದಲ ಪ್ರಕರಣ ದಾಖಲಾಗಿದೆ.
ಬರೇಲಿ ಜಿಲ್ಲೆಯ ದೇವರ್ ನಿಯಾನ್ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರು ತಮ್ಮ ಮಗಳನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ದೇವರ್ ನಿಯಾನ್ ಗ್ರಾಮದ ಟಿಕಾರಾಮ್ ಎಂಬ ವ್ಯಕ್ತಿ, ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಉವೈಶ್ ಅಹಮ್ಮದ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ತನ್ನ ಮಗಳನ್ನು ಆಕರ್ಷಿಸಿ ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಗಿದೆ;ದೇಶದ್ರೋಹಿಗಳನ್ನು ಮಟ್ಟ ಹಾಕುವುದು ಖಂಡಿತಾ: CT ರವಿ
ಮಾತ್ರವಲ್ಲದೆ ತನ್ನ ಮಗಳು ಮತ್ತು ಉವೈಶ್ ಅಹಮದ್ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಈ ವೇಳೆ ಉವೈಶ್ ತನ್ನ ಮಗಳಿಗೆ ಧಾರ್ಮಿಕ ಮತಾಂತರವಾಗಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇಲ್ಲವಾದಲ್ಲಿ ಕಿಡ್ನಾಪ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ತಿಳಿಸಿದ್ದಾರೆ.
ಇದೀಗ ಉವೈಶ್ ಅಹಮ್ಮದ್ ವಿರುದ್ದ ಐಪಿಸಿ ಸೆಕ್ಷನ್ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಲು ಮತ್ತು ಆರೋಪಿಯನ್ನು ಬಂಧಿಸಲು ಪೊಲೀಸರ ನಾಲ್ಕು ತಂಡ ಕಾರ್ಯಾಚರಣೆಗಿಳಿದಿದೆ.
ಇದನ್ನೂ ಓದಿ: ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳಿದವರ ಕಾರಿಗೆ ಬೆಂಕಿ: ಓರ್ವ ಸಜೀವ ದಹನ !