ಲಕ್ನೋ: ಏಳು ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಇದುವರೆಗಿನ ಮತ ಎಣಿಕೆ ಪ್ರಕ್ರಿಯೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮುನ್ನಡೆ ಸಾಧಿಸಿದೆ.
ಆರಂಭಿಕ ಹಂತದಲ್ಲಿ ಬಿಜೆಪಿ 250ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಪ್ರಬಲ ಪ್ರತಿಸ್ಪರ್ಧಿಯಾಗಿದ್ದು ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಲಕ್ನೋದಲ್ಲಿ ಗದ್ದುಗೆ ಏರಬೇಕಾದರೆ 202 ಕ್ಷೇತ್ರಗಳಲ್ಲಿ ಜಯ ಗಳಿಸಬೇಕಾಗಿದೆ.
ಗೋರಖಪುರ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುನ್ನಡೆ ಸಾಧಿಸಿದ್ದಾರೆ. ಉಳಿದಂತೆ ಎಸ್ಪಿ ಚೀಫ್ ಅಖಿಲೇಶ್ ಯಾದವ್ ಅವರು ಕರ್ಹಾಲ್ ನಲ್ಲಿ, ಜಸ್ವಂತ್ ನಗರದಲ್ಲಿ ಶಿವಪಾಲ್ ಯಾದವ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಸಿರಾತ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಅಖಿಲೇಶ್ ಯಾದವ್ ಅವರ ವಿರುದ್ಧ ಕಣಕ್ಕಿಳಿದಿರುವ ಕೇಂದ್ರ ಸಚಿವ ಎಸ್ ಪಿ ಸಿಂಗ್ ಬಾಘೆಲ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಆರಂಭಿಕ ವರದಿಯ ಪ್ರಕಾರ ಅಖಿಲೇಶ್ ಯಾದವ್ 7298 ಮತ ಪಡೆದರೆ, ಭಾಘೆಲ್ ಅವರು ಕೇವಲ 504 ಮತಗಳನ್ನು ಪಡೆದಿದ್ದಾರೆ.
ಮಾಯಾವತಿ ಅವರ ಬಿಎಸ್ ಪಿ ಮತ್ತು ಕಾಂಗ್ರೆಸ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ. ಪ್ರಿಯಾಂಕಾ ಗಾಂಧಿ ಅವರ ಬಿರುಸಿನ ಪ್ರಚಾರದ ನಡುವೆಯೂ ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಎರಡಂಕಿಯ ಮುನ್ನಡೆಯನ್ನೂ ಪಡೆದಿಲ್ಲ.
ಇದನ್ನೂ ಓದಿ:Live:ಪಂಚರಾಜ್ಯ ಚುನಾವಣಾ ಮತಎಣಿಕೆ ಶುರು,ಗೋವಾದಲ್ಲಿ ಕಾಂಗ್ರೆಸ್, ಯುಪಿಯಲ್ಲಿ ಬಿಜೆಪಿ ಮೇಲುಗೈ
ಚುನಾವನೋತ್ತರ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮರಳಿ ಅಧಿಕಾರ ಪಡಯಲಿದ್ದಾರೆ.