Advertisement

ಉತ್ತರ ಪ್ರದೇಶ ಐದನೇ ಹಂತದ ಚುನಾವಣೆ: ಶೇ.27.03ರಷ್ಟು ಮತದಾನ

12:15 PM Feb 27, 2017 | udayavani editorial |

ಲಕ್ನೋ : ಉತ್ತರ ಪ್ರದೇಶದಲ್ಲಿ ಐದನೇ ಹಂತದ ಮತದಾನ ಇಂದು ಸೋಮವಾರ ಚುರುಕಿನಲ್ಲಿ ಸಾಗುತ್ತಿದ್ದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಶೇ.27.03 ಮತದಾನ ದಾಖಲಾಗಿದೆ. 

Advertisement

1.84 ಮತದಾರರು 51 ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ 617 ಅಭ್ಯರ್ಥಿಗಳ ಭವಿಷ್ಯವನ್ನು ತೀರ್ಮಾನಿಸಲಿದ್ದಾರೆ. ಬೆಳಗೆ 7 ಗಂಟೆಗೆ ಮತದಾನ ಆರಂಭವಾಗಿದೆ.

ಬೆಳಗ್ಗೆ 11 ಗಂಟೆಯ ವೇಳೆಗೆ ಫೈಜಾಬಾದ್‌ನಲ್ಲಿ ಶೇ.27.03, ಅಂಬೇಡ್ಕರ್‌ ನಗರ ಶೇ.25.09, ಅಮೇಠಿ ಶೇ.26.73, ಸಿದ್ಧಾರ್ಥ ನಗರ ಶೇ.24.4 ಮತ್ತು ಗೋಂಡಾದಲ್ಲಿ ಶೇ.22 ಮತದಾನ ದಾಖಲಾಗಿದೆ.

ಇದೇ ವೇಳೆ ಇಂದು, ಗ್ಯಾಂಗ್‌ಸ್ಟರ್‌ ಆಗಿ ಪರಿವರ್ತಿರಾಗಿರುವ ರಾಜಕಾರಣಿ, ಮುಖ್‌ತಾರ್‌ ಅನ್ಸಾರಿ ತನಗೆ  ಪೆರೋಲ್‌ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು  ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿದೆ. ಹಾಗಾಗಿ ಆತ ಜೈಲಿನಲ್ಲೇ ಉಳಿಯುವುದು ಅನಿವಾರ್ಯವಾಗಿದೆ. ಅನ್ಸಾರಿ ಅವರು 2005ರಲ್ಲಿ ನಡೆದಿದ್ದ  ಬಿಜೆಪಿ ಶಾಸಕ ಕೃಷ್ಣಾನಂದ ರಾಯ್‌ ಅವರ ಕೊಲೆ ಪ್ರಕರಣದ ಆರೋಪಿಯಾಗಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next