Advertisement

ಆಟೋ, ಟ್ಯಾಕ್ಸಿ ಚಾಲಕರ ಸೇವೆ ಬಳಸಿಕೊಳ್ಳಿ

11:32 AM Apr 17, 2021 | Team Udayavani |

ಮುಂಬಯಿ: ಕೋವಿಡ್‌ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಆಟೋ ರಿûಾ ಮತ್ತು ಟ್ಯಾಕ್ಸಿ ಚಾಲಕರು ಸಂಕಷ್ಟದಲ್ಲಿದ್ದು, ಸದ್ಯ ಬಾಡಿಗೆ ತೀವ್ರಗತಿಯಲ್ಲಿ ಕ್ಷೀಣಿಸಿದ ಪರಿಣಾಮ ದೈನಂದಿನ ಸಂಪಾದನೆಯಲ್ಲಿ ನಷ್ಟ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೆಜಾನ್‌ ಸಂಸ್ಥೆಯು ಮುಂಬಯಿ ಮತ್ತು ಉಪನಗರಗಳಲ್ಲಿನ ಆಟೋ ರಿûಾ ಮತ್ತು ಟ್ಯಾಕ್ಸಿ ಚಾಲಕರನ್ನು ಬಳಸಿ ತಮ್ಮ ಗ್ರಾಹಕರಿಗೆ ವಸ್ತು ಗಳನ್ನು ತಲುಪಿಸುವಲ್ಲಿ ಅವಕಾಶ ಒದಗಿಸುವಂತೆ ಅಮೆಜಾನ್‌ ಜಾಗತಿಕ ಹಿರಿಯ ಉಪಾಧ್ಯಕ್ಷ, ಅಮೆಜಾನ್‌ ವ್ಯವಸ್ಥಾಪಕ ನಿರ್ದೇಶಕ ಅಮಿತ್‌ ಅಗರ್ವಾಲ್‌ ಅವರಿಗೆ ಅಂಧೇರಿ ಪಶ್ಚಿಮದ ಮಾಜಿ ಶಾಸಕ, ಶಿವಸೇನೆ ಧುರೀಣ, ಮುಂಬಯಿ ಉಪನಗರಗಳಲ್ಲಿನ ಆಟೋ ರಿûಾ ಮತ್ತು ಟ್ಯಾಕ್ಸಿ ಡ್ರೈವರ್‌ಗಳ ಒಕ್ಕೂಟ ಕಾಮಾYರ್‌ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಹೆಗ್ಡೆ ಮನವಿ ಮಾಡಿದ್ದಾರೆ.

Advertisement

ಅಮೆಜಾನ್‌ ಸಂಸ್ಥೆ ಪ್ರಸ್ತುತ ಜಾಗತಿಕವಾಗಿ ಅತೀದೊಡ್ಡ ಕಂಪೆನಿಗಳಲ್ಲಿ ಒಂದಾ ಗಿದ್ದು, ವಿಶ್ವದ ಅತೀದೊಡ್ಡ ಲಾಜಿಸ್ಟಿಕ್‌ ಮತ್ತು ಮಾನವಶಕ್ತಿಯನ್ನು ತೊಡಗಿಸಿ ಕೊಳ್ಳುತ್ತಿರುವ ಕಂಪೆನಿಯೂ ಹೌದು. ಆದ್ದರಿಂದ ಮುಂಬಯಿ ಮತ್ತು ಉಪನಗರಗಳಲ್ಲಿನ ಆಟೋ ರಿûಾ ಅಥವಾ ಟ್ಯಾಕ್ಸಿ ಚಾಲಕರನ್ನು ತಮ್ಮ ಸಂಸ್ಥೆಯಲ್ಲಿ ತೊಡಗಿಸಿಕೊಂಡು ತಮ್ಮ ಉತ್ಪನ್ನಗಳನ್ನು ತಲುಪಿಸಲು ಅಮೆಜಾನ್‌ ಗಮನ ಹರಿಸಿದರೆ ಈ ಚಾಲಕರಿಗೆ ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಚಾಲಕರು ಬೃಹತ್‌ ಉತ್ಪನ್ನಗಳನ್ನೂ ತಲುಪಿಸಬಹುದು. ಈ ಚಾಲಕ‌ರು ತಮ್ಮ ಕಂಪೆನಿಗೆ ಸಮಯೋಚಿತ, ಕ್ಲಪ್ತ, ಪ್ರಾಮಾಣಿಕತೆಯಿಂದ ಸೇವೆ ನೀಡುವ ಭರವಸೆಯನ್ನು ನಾವು ನೀಡುತ್ತೇವೆ. ಇದರಿಂದ ಆಟೋ ರಿûಾ ಮತ್ತು ಟ್ಯಾಕ್ಸಿ ಚಾಲಕರು ಈ ಕಷ್ಟದ ಸಮಯದಲ್ಲಿ ಸ್ವಲ್ಪ ಆದಾಯವನ್ನು ಗಳಿಸಲು ಸಹಕಾರಿಯಾಗಬಲ್ಲದು. ಇದು ತಮ್ಮ ಉದ್ಯಮದ ಸಿಎಸ್‌ಆರ್‌ ಸೇವೆಯ ಉದ್ದೇಶವನ್ನೂ ಪೂರೈಸಿದಂತಾಗಬಹುದು ಎಂದು ಪತ್ರದ ಮೂಲಕ ಕೃಷ್ಣ ಹೆಗ್ಡೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next