ಉಡುಪಿ: ಉಜ್ವಲ ಯೋಜನೆಯಲ್ಲಿ ರಾಜ್ಯದ ಸಹ ಭಾಗಿತ್ವಕ್ಕೆ ಕೇಂದ್ರ ಸರಕಾರದ ಸಮ್ಮತಿ ಎಂಬ ಸಚಿವ ಯು.ಟಿ. ಖಾದರ್ ಹೇಳಿಕೆಗೆ ಬಿಜೆಪಿ ಮುಂದಾಳು ಕೆ. ಉದಯಕುಮಾರ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಜ್ವಲ ಯೋಜನೆಯು ಸಂಪೂರ್ಣ ಕೇಂದ್ರ ಸರಕಾರದ ಯೋಜನೆ ಯಾಗಿದೆ. ಇದರಲ್ಲಿ ಉಚಿತವಾಗಿ ಒಂದು ಸಿಲಿಂಡರ್, ರೆಗ್ಯುಲೇಟರ್, ಸುರಕ್ಷಾ ನಳಿಗೆ, ಒಂದು ಗ್ಯಾಸ್ ಪುಸ್ತಕದೊಂದಿಗೆ ನೋಂದಣಿ ಮಾಡಿ
ಕೊಡಲಾಗುವುದು. ಸ್ಟವ್ ಮತ್ತು ಅನಿಲ ಬೇಕಾದವರಿಗೆ 990 ರೂ. ಸ್ಟವ್ ಮತ್ತು 540 ರೂ. ಅನಿಲ ನೀಡಲಾಗುವುದು. ಅವರಿಗೆ 2 ವರ್ಷ ಗ್ಯಾಸ್ ಸಬ್ಸಿಡಿ ನೀಡುವುದಿಲ್ಲ. ಬಿಪಿಎಲ್‌ದಾರರು 2 ವರ್ಷಕ್ಕೆ 5ರಿಂದ 6 ಸಿಲಿಂಡರ್ ಮಾತ್ರ ಉಪ ಯೋಗಿಸುತ್ತಾರೆ.
2011ರಲ್ಲಿ ನಡೆಸಿದ ಗ್ರಾಮೀಣಾ ಭಿವೃದ್ಧಿ ಇಲಾಖೆ ಸೋಶಿಯೋ ಇಕಾನಮಿ ಕಾಸ್ಟ್ ಸೆನ್ಸಸ್ ಪ್ರಕಾರ, ಬಿಪಿಎಲ್‌ದಾರರು ಉಡುಪಿ ಜಿಲ್ಲೆಯಲ್ಲಿ 48,256, ದ.ಕ. ಜಿಲ್ಲೆಯಲ್ಲಿ 52,968 ಮಂದಿ ನೋಂದಣಿಯಾಗಿ ದ್ದಾರೆ. ಈಗ ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುತ್ತಿದೆ. ಈಗಾಗಲೇ ಗ್ಯಾಸ್ ಏಜೆನ್ಸಿಗಳಲ್ಲಿ ಉಜ್ವಲ ಯೋಜನೆ ಮೂಲಕ ಬಡ ವರ್ಗದ ಜನರಿಗೆ ಉಚಿತವಾಗಿ ಗ್ಯಾಸ್‌ಸಂಪರ್ಕ ನೀಡಲಾಗುತ್ತಿದೆ. ಇದು
ಬಡವರ್ಗದವರಿಗೆ ಆಶಾ ದಾಯಕ ವಾಗಲಿದೆ ಎಂದು ತಿಳಿಸಿದ್ದಾರೆ.