ಸಿಡ್ನಿ: ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಾರತಕ್ಕೆ ಆಗಮಿಸಿದೆ. ಎರಡು ಬ್ಯಾಚ್ ಗಳಾಗಿ ಪ್ಯಾಟ್ ಕಮಿನ್ಸ್ ಪಡೆ ಭಾರತಕ್ಕೆ ಕಾಲಿರಿಸಿದೆ. ಆದರೆ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರು ವಿಮಾನ ತಪ್ಪಿಸಿಕೊಂಡಿದ್ದಾರೆ.
ಉಸ್ಮಾನ್ ಖವಾಜಾ ಅವರಿಗೆ ವೀಸಾ ಸಮಸ್ಯೆಯಾಗಿದೆ. ಹೀಗಾಗಿ ಎರಡೂ ಬ್ಯಾಚ್ ಗಳಲ್ಲಿ ಅವರಿಗೆ ವಿಮಾನ ಏರಲು ಸಾಧ್ಯವಾಗಿಲ್ಲ. ಬುಧವಾರ ವೀಸಾ ಸಮಸ್ಯೆ ಬಗೆಹರಿಯ ಬಹುದು. ಹೀಗಾದರೆ ಗುರುವಾರ ಅವರು ಭಾರತಕ್ಕೆ ಪ್ರಯಾಣಿಸುತ್ತಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರೆಸ್ ಮೀಟ್ ನಲ್ಲಿ ಚಿತ್ರ ನಿರ್ದೇಶಕರ ಮೈಮೇಲೆ ಅಗೋಚರ ಶಕ್ತಿ!
ಸೋಮವಾರ ರಾತ್ರಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಉಸ್ಮಾನ್ ಖವಾಜಾ ಭಾಗವಹಿಸಿದ್ದರು. ಅತ್ಯುತ್ತಮ ಟೆಸ್ಟ್ ಆಟಗಾರನಿಗೆ ನೀಡಲಾಗುವ ಶೇನ್ ವಾರ್ನ್ ಪ್ರಶಸ್ತಿಯನ್ನು ಉಸ್ಮಾನ್ ಖವಾಜಾ ಪಡೆದಿದ್ದರು.
Related Articles
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಕೂಟವು ಫೆಬ್ರವರಿ 9ರಂದು ಆರಂಭವಾಗಲಿದೆ. ಸರಣಿಯ ನಾಲ್ಕು ಪಂದ್ಯಗಳು ನಾಗ್ಪುರ, ಹೊಸದಿಲ್ಲಿ, ಧರ್ಮಶಾಲಾ ಮತ್ತು ಅಹಮದಾಬಾದ್ ನಲ್ಲಿ ನಡೆಯಲಿದೆ.