Advertisement
– ತುಳಸಿ ಎಲೆಯ ರಸಕ್ಕೆ ನಿಂಬೆರಸ ಸೇರಿಸಿ ಹದವಾಗಿ ಕಲಸಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ಸ್ವತ್ಛ ನೀರಿನಿಂದ ತೊಳೆದುಕೊಳ್ಳಿ. ಮುಖದ ಮೇಲಿನ ಕಪ್ಪು ಕಲೆಗಳು, ಮೊಡವೆಗಳು ಮಾಯವಾಗುತ್ತವೆ.
Related Articles
Advertisement
– ಮೈಗೆ ತುಳಸಿ ರಸ ಲೇಪಿಸಿಕೊಳ್ಳುವ ಮೂಲಕ ಸೊಳ್ಳೆಗಳ ಕಡಿತದಿಂದ ಪಾರಾಗಬಹುದು.
– ಋತುಮಾನ ಬದಲಾವಣೆಯಿಂದ ಜ್ವರ, ನೆಗಡಿ ಬಂದರೆ ತುಳಸಿದಳ, ಕರಿಮೆಣಸಿನ ಪುಡಿ, ಬೆಲ್ಲ, ನೀರು ಬೆರೆಸಿ ಕುದಿಸಿ ಕಷಾಯ ಮಾಡಿ ಸೇವಿಸಿ.
– ತುಳಸಿ ಹಾಗೂ ಹಸಿ ಶುಂಠಿ ರಸವನ್ನು ಜೇನು ತುಪ್ಪದಲ್ಲಿ ಬೆರೆಸಿ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ. ನೆಗಡಿ, ಜ್ವರ ಶಮನವಾಗುತ್ತದೆ.
– ನೆಗಡಿ ಹಾಗೂ ಜ್ವರ ಬಂದಾಗ ತುಳಸಿ ಎಲೆ, ಹಾಲು ಮತ್ತು ಸಕ್ಕರೆ ಕುದಿಸಿ ತಯಾರಿಸಿದ ಕಷಾಯ ಸೇವಿಸಬಹುದು.
– ತುಳಸಿ ಎಲೆ, ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಕೂಡ ನೆಗಡಿ ಮತ್ತು ಜ್ವರವನ್ನು ನಿಯಂತ್ರಿಸಬಲ್ಲದು.
– ತುಳಸಿ ರಸವನ್ನು ಸೀಮೆಎಣ್ಣೆಯೊಂದಿಗೆ ಸೇರಿಸಿ ಸಿಂಪಡಿಸಿದರೆ, ಸೊಳ್ಳೆಗಳು ಸುಳಿಯುವುದಿಲ್ಲ.
– ನಿತ್ಯ ತುಳಸಿಯ ರಸ ಸೇವಿಸುವುದರಿಂದ ಕೆಂಪು ರಕ್ತ ಕಣಗಳು ಸಮೃದ್ಧವಾಗುವವು.
– ಕೀಲುಗಳಲ್ಲಿ ನೋವಿದ್ದರೆ 10 ಗ್ರಾಂ ತುಳಸಿ ರಸಕ್ಕೆ 10 ಗ್ರಾಂ ಶುಂಠಿರಸ ಸೇರಿಸಿ ಕುಡಿದರೆ ನೋವು ಕಡಿಮೆಯಾಗುತ್ತದೆ.
ಮಕ್ಕಳಿಗೂ ಸಂಜೀವಿನಿ1. ಮಗುವಿಗೆ ನಿತ್ಯವೂ ತುಳಸಿ ರಸ ಕೊಡುತ್ತಿದ್ದರೆ ರೋಗಬಾಧೆ ದೂರವಾಗುತ್ತದೆ. 2. ಹತ್ತು ಹನಿ ತುಳಸಿ ರಸವನ್ನು ನೀರಿಗೆ ಬೆರೆಸಿ, ನಿತ್ಯ ಕುಡಿಸುವುದರಿಂದ ಮಗುವಿನ ಸ್ನಾಯು, ಎಲುಬುಗಳು ಬಲಿಷ್ಠವಾಗುತ್ತವೆ. 3. ಮಗುವಿಗೆ ಹಲ್ಲು ಬರುವ ಪೂರ್ವದಲ್ಲಿ ತುಳಸಿ ರಸವನ್ನು ವಸಡಿಗೆ ಲೇಪಿಸುತ್ತಿದ್ದರೆ ಹಲ್ಲು ಬರುವಾಗಿನ ನೋವನ್ನು ತಪ್ಪಿಸಬಹುದು. 4. ಒಣಕೆಮ್ಮಿದ್ದರೆ ತುಳಸಿಯ ಚಿಗುರೆಲೆಗಳನ್ನು ಶುಂಠಿಯೊಂದಿಗೆ ಜಜ್ಜಿ ಜೇನುತುಪ್ಪದೊಂದಿಗೆ ಹದವಾಗಿ ಬೆರೆಸಿ ನೆಕ್ಕಿಸಿ. 5. ಎದೆಹಾಲು ಕುಡಿಯುವ ಮಗು ವಾಂತಿ ಅಥವಾ ವಾಕರಿಕೆ ಮಾಡಿಕೊಳ್ಳುತ್ತಿದ್ದರೆ ತುಳಸಿ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿಸಿ.
ಶರಣಾಂಬಾ ಬ ಹುಡೇದಗಡ್ಡಿ