Advertisement

ಸಿಪ್ಪೆ ಸೂಪರು…

07:39 PM Feb 11, 2020 | mahesh |

ಬಾಳೆಗಿಡ ನಮಗೇನು ಕೊಡುತ್ತದೆ ಅಂತ ಕೇಳಿದರೆ, ಊಟಕ್ಕೆ ಬಾಳೆ ಎಲೆ, ತಿನ್ನಲು ಹಣ್ಣು, ಪಲ್ಯ ಮಾಡಲು ದಿಂಡು, ಚಟ್ನಿಗೆ ಬಾಳೆ ಹೂವು, ಚಿಪ್ಸ್‌ ಮಾಡಲು ಬಾಳೆಕಾಯಿ ಅನ್ನುವ ಉತ್ತರ ಸಿಗುತ್ತದೆ. ಆದರೆ, ಬಾಳೆಹಣ್ಣಿನ ಸಿಪ್ಪೆ ಅಂತ ಹೇಳುವವರ ಸಂಖ್ಯೆ ಕಡಿಮೆ ಇದೆ. ಯಾಕಂದ್ರೆ, ಸಿಪ್ಪೆಯ ಉಪಯೋಗಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಚರ್ಮ, ಹಲ್ಲು ಮತ್ತು ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಲು, ಸಿಪ್ಪೆಯನ್ನು ಬಳಸಬಹುದು.

Advertisement

– ಬಾಳೆಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ಕನಿಷ್ಠ ವಾರಕ್ಕೆರಡು ಬಾರಿ ತಿಕ್ಕಿದರೆ, ಹಳದಿಗಟ್ಟಿದ ಹಲ್ಲು ಬಿಳಿಯಾಗುತ್ತದೆ.
-ಸಿಪ್ಪೆಯನ್ನು ನುಣ್ಣಗೆ ಅರೆದು, ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತೆ.
-ಸಿಪ್ಪೆಯನ್ನು ಅರೆದು, ಮೊಟ್ಟೆಯ ಹಳದಿಯೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.
-ಸಿಪ್ಪೆಯ ಬಿಳಿ ಭಾಗವನ್ನು ಮುಖಕ್ಕೆ ಉಜ್ಜಿ ಮಸಾಜ್‌ ಮಾಡಿದರೆ, ಮೊಡವೆ ಕಲೆ ಹೋಗುತ್ತದೆ.
-ಸೊಳ್ಳೆ, ತಿಗಣೆ ಕಡಿದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆ ಉಜ್ಜಿದರೆ ತುರಿಕೆ ಕಡಿಮೆಯಾಗುತ್ತದೆ.
-ಅಂಗಾಲಿನಲ್ಲಿ ಗಂಟಾಗಿದ್ದರೆ (ಆಣಿ), ಸಿಪ್ಪೆಯ ಬಿಳಿ ಭಾಗವನ್ನು ಅದರ ಮೇಲಿಟ್ಟು ಪಟ್ಟಿ ಕಟ್ಟಿಕೊಳ್ಳಿ. ಪ್ರತಿ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಗಂಟು ಕರಗುತ್ತದೆ.
-ಬಾಳೆಹಣ್ಣಿನ ಸಿಪ್ಪೆಯನ್ನು ಶೂ ಪಾಲಿಶ್‌ ಮಾಡಲು, ಬೆಳ್ಳಿ ವಸ್ತುಗಳನ್ನು ತೊಳೆಯಲೂ ಉಪಯೋಗಿಸಬಹುದು.
– ಚರ್ಮದ ಮೇಲಿನ ಹೊಲಿಗೆತ ಕಲೆ, ಗಾಯದ ಕಲೆ ಹೋಗಲಾಡಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next