Advertisement

ಅವಕಾಶ ಬಳಸಿ ಯಶಸ್ಸು ಗಳಿಸಿ

12:37 PM Feb 17, 2017 | |

ಮೈಸೂರು: ವಿದ್ಯಾರ್ಥಿಗಳು ನದಿಯನ್ನು ಆದರ್ಶವನ್ನಾಗಿಟ್ಟುಕೊಂಡು, ಜೀವನದಲ್ಲಿ ಎದುರಾಗುವ ಅವಕಾಶಗಳನ್ನು ಬಳಸಿ ಕೊಂಡು ಬದುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಂಗೀತ ನಿರ್ದೇಶಕ ವಿ. ಮನೋಹರ್‌ ಸಲಹೆ ನೀಡಿದರು.

Advertisement

ಮೈಸೂರು ವಿಶ್ವ ವಿದ್ಯಾನಿಲಯ, ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಮಹಾ ರಾಜ ಕಾಲೇಜಿನ ಶತಮಾನೋತ್ಸವ ಭವನ ದಲ್ಲಿ ಆಯೋಜಿಸಿರುವ ಎರಡು ದಿನಗಳ ಚಲನಚಿತ್ರಗೀತೆಗಳ ಗಾಯನ ಸ್ಪರ್ಧೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಸಂದರ್ಭದಲ್ಲಿ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತ ಗೊಳ್ಳದೆ ಕ್ರೀಡೆ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅಲ್ಲದೆ ವಿದ್ಯಾರ್ಥಿಗಳು ನದಿಯನ್ನು ಆದರ್ಶ ವಾಗಿಟ್ಟುಕೊಂಡು ಜೀವನದಲ್ಲಿ ಎದುರಾ ಗುವ ಕಷ್ಟ – ಸುಖಗಳನ್ನು ಧೈರ್ಯದಿಂದ ಎದುರಿಸುವ ಮೂಲಕ ಮುಂದೆ ಸಾಗುವ ಜತೆಗೆ ಜೀವನದಲ್ಲಿ ನಿರ್ದಿಷ್ಟ ವಾದ ಗುರಿಯನ್ನು ಹೊಂದಬೇಕು ಎಂದರು.

ವರನಟ ಡಾ. ರಾಜ್‌ಕುಮಾರ್‌ ಅವರು ದೇಶದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು, ಅವರೊಂದಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ತನ್ನ ಸಂಗೀತವನ್ನು ಆಲಿಸಿದ್ದ ರಾಜ್‌ಕುಮಾರ್‌ ಅವರು ಅನೇಕ ಸಿನಿಮಾಗಳಲ್ಲಿ ಅವಕಾಶಗಳನ್ನು ದೊರಕಿಸಿ ಕೊಟ್ಟರು ಎಂದು ತಾವು ಚಿತ್ರರಂಗಕ್ಕೆ ಪ್ರವೇಶಿ ಸಿದ ದಿನಗಳನ್ನು ಮೆಲುಕು ಹಾಕಿದರು.

ಇತ್ತೀಚಿನ ದಿನಗಳಲ್ಲಿ ನಗರೀಕರಣದ ಭರಾಟೆ ಹೆಚ್ಚುತ್ತಿದ್ದು, ಇದಕ್ಕಾಗಿ ಸಾಕಷ್ಟು ಮರಗಳ ಹನನ ಮಾಡಲಾಗುತ್ತಿದೆ. ಇದ ರಿಂದಾಗಿ ಪರಿಸರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವ ಮೂಲಕ ಸಾಂಸ್ಕೃತಿಕ ನಗರಿ ಪರಿಸರ ಉಳಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶು ಪಾಲ ಪ್ರೊ. ಸಿ.ಪಿ. ಸುನೀತಾ, ಆಡಳಿತಾಧಿಕಾರಿ ಡಾ. ಎಲ್‌. ಲಿಂಬ್ಯಾನಾಯಕ್‌, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಡಾ. ಎಸ್‌.ಟಿ. ರಾಮಚಂದ್ರ, ಸದಸ್ಯ ಡಾ. ಸತ್ಯನಾರಾಯಣ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next