Advertisement

ಜೀವಕ್ಕೆ ಶಕ್ತಿ ತುಂಬುವ ಪ್ರಾಣಾಯಾಮ

12:41 PM Jan 26, 2021 | Team Udayavani |

ಪ್ರಾಣಾಯಾಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಶಕ್ತಿಯನ್ನು ಒದಗಿಸುತ್ತದೆ. ಹೀಗಾಗಿ ಇದನ್ನು ಜೀವ ಶಕ್ತಿ ಎಂದೇ ಪರಿಗಣಿಸಲಾಗಿದೆ. ಪ್ರಾಣಾಯಾಮದ ಅಭ್ಯಾಸ ಸರಳ ಎಂದು ಬಹುತೇಕ ಮಂದಿ ಭಾವಿಸುತ್ತಾರೆ. ಆದರೆ ಇದಕ್ಕೂ ನಿಯಮಿತ ತರಬೇತಿ ಅಗತ್ಯ. ಇಲ್ಲಿ ಉಸಿರನ್ನು ತೆಗೆದುಕೊಳ್ಳುವ ಮತ್ತು ಬಿಡುವ ಬಗ್ಗೆ ಸರಿಯಾದ ಕ್ರಮವನ್ನು ತಿಳಿಸಲಾಗುತ್ತದೆ. ಇದು ದೇಹದ ಎಲ್ಲ ಭಾಗಗಳನ್ನು ಒಳಗೊಂಡಿರುತ್ತದೆ. ಪ್ರಣಾಯಾಮದ ಮೂಲಕ ತಾಜಾ ಆಮ್ಲಜನಕವು ದೇಹದ ಪ್ರತಿಯೊಂದು ಅಂಗವನ್ನು ತಲುಪುತ್ತದೆ.

Advertisement

ಇದನ್ನೂ ಓದಿ:ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

ಪ್ರಾಣಾಯಾಮದ ಪ್ರಯೋಜನಗಳು
*ದೇಹದ 80 ಸಾವಿರ ನರಗಳನ್ನು ಶುದ್ಧೀಕರಿಸುತ್ತದೆ. ದೇಹದಲ್ಲಿ ಶಕ್ತಿಯ ಹರಿವನ್ನು ಸಮತೋಲನಗೊಳಿಸಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಪ್ರಾಣಾಯಾಮದ ನಿರಂತರ ಅಭ್ಯಾಸದಿಂದ ಮನಸ್ಸು ಮತ್ತು ರೋಗ ಮುಕ್ತವಾಗುತ್ತದೆ.

*ದೈಹಿಕ ಸಾಮರ್ಥ್ಯ ವೃದ್ಧಿಸಲು ಪ್ರಾಣಾಯಾಮ ಸಹಕಾರಿ. ದೇಹದ ಎಲ್ಲ ಅಂಗಗಳಿಗೆ ಅಮ್ಲಜನಕ ದೊರೆಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಮತೋಲನದಲ್ಲಿರುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ಅಲ್ಲದೇ ಚೈತನ್ಯವನ್ನು ವೃದ್ಧಿಸುತ್ತದೆ.

*ನಿರಂತರವಾಗಿ ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಏಕಾಗ್ರತೆ ವೃದ್ಧಿಸುತ್ತದೆ. ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ದಿನವೀಡಿ ಉಲ್ಲಾಸದಿಂದ ಇರಲು ಮನಸ್ಸು ಆರೋಗ್ಯವಾಗಿರುವುದು ಬಹಳ ಮುಖ್ಯ. ಇದಕ್ಕೆ ಪ್ರಾಣಾಯಾಮ ಸಹಾಯ ಮಾಡುತ್ತದೆ. ನರಗಳಿಗೆ ಶಾಂತಿ ದೊರೆತು ರಕ್ತಪರಿಚಲನೆ ಹೆಚ್ಚಾಗಿ ಒತ್ತಡ ನಿವಾರಣೆಯಾಗುವುದು.

Advertisement

*ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಪ್ರಾಣಾಯಾಮ ಅಭ್ಯಾಸ ಮಾಡುವುದು ಅತ್ಯುತ್ತಮ. ವೇಗದಲ್ಲಿ ಹೆಚ್ಚಾಗುವ ರಕ್ತದೊತ್ತಡವನ್ನು ಕೂಡಲೇ
ನಿಯಂತ್ರಣಕ್ಕೆ ತರಲು ಪ್ರಾಣಾಯಾಮ ಅಭ್ಯಾಸದಿಂದ ಸಾಧ್ಯವಾಗುತ್ತದೆ. ಇದು ಧ್ಯಾನಸ್ಥ ಸ್ಥಿತಿಯಾಗಿರುವುದರಿಂದ ದೇಹವನ್ನು ಸಂಪೂರ್ಣ ವಿಶ್ರಾಂತಿಗೆ ತರುವ
ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ಮಧುಮೇಹ, ಖನ್ನತೆಯ ತೊಂದರೆಯನ್ನೂ ನಿವಾರಿಸುತ್ತದೆ.

*ವ್ಯಕ್ತಿಯ ಆಯುಷ್ಯವು ಉಸಿರಾಟದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಪ್ರಾಣಾಯಾಮದಿಂದ ಉಸಿರಾಟವನ್ನು ವ್ಯವಸ್ಥಿತವಾಗಿ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರಾಣಾಯಾಮವು ವ್ಯಕ್ತಿಯ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂಬುದು ಅಧ್ಯಯನಗಳಿಂದಲೂ ಸಾಬೀತಾಗಿದೆ.

*ದೇಹದ ತೂಕ ಇಳಿಸ ಬಯಸುವವರು ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಲು
ಸಹಾಯ ಮಾಡುತ್ತದೆ.ನಿಯಮಿತವಾಗಿ ಇದನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿನ ಅಸಮತೋಲನ ನಿವಾರಣೆಯಾಗುತ್ತದೆ. ಆಹಾರ ತಿನ್ನಬೇಕು ಎಂಬ ಹಂಬಲವನ್ನು ಕಡಿಮೆಗೊಳಿಸುತ್ತದೆ. ದೇಹವು ದಣಿದ, ಆಯಾಸಗೊಂಡ ಸ್ಥಿತಿಯಲ್ಲಿರುವಾಗ ನಾವು ಆನಾರೋಗ್ಯಕರ ಆಹಾರವನ್ನು ಸೇವಿಸುತ್ತೇವೆ. ಪ್ರಾಣಾಯಾಮವು ಸಮತೋಲನವನ್ನು ಅಭ್ಯಾಸ ಮಾಡಿಸುತ್ತದೆ ಮತ್ತು ನಾವು ಸೇವಿಸುವ ಆಹಾರದ ಬಗ್ಗೆ ಅರಿವು ಹೆಚ್ಚಿಸುತ್ತದೆ.

ಪ್ರಾಣಾಯಾಮ ಮಾಡುವ ವಿಧಾನ
*ಯೋಗ ಮ್ಯಾಟ್‌ನ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತುಕೊಳ್ಳಿ.

*ಹೆಬ್ಬೆರಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ. ಎಡ ಮೂಗಿನ ಹೊಳ್ಳೆಯಿಂದ ಉಸಿರಾಡಿ.

*ಬೆನ್ನು ನೇರವಾಗಿ, ದೇಹ ಶಾಂತವಾಗಿರಿಸಿ ಎಡಗೈಯನ್ನು ಎಡ ಮೊಣಕಾಲಿನ ಮೇಲೆ ಇಡಿ.

*ಎಡಗಡೆಯ ಮೂಗಿನ ಹೊಳ್ಳೆಯನ್ನು ಬಲಗೈಯ ಉಂಗುರದ ಬೆರಳಿನಿಂದ ಮುಚ್ಚಿ. ಅನಂತರ ಬಲ ಮೂಗಿನ ಹೊಳ್ಳೆಯಿಂದ ಉಸಿರನ್ನು ಬಿಡುಗಡೆ ಮಾಡಿ.

*ಇದನ್ನು 15 ನಿಮಿಷಗಳ ಕಾಲ ಪುನರಾವರ್ತಿಸಿ. ಬೇಕಿದ್ದರೆ ಐದು ನಿಮಿಷಕ್ಕೆ ವಿರಾಮ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next