Advertisement

ಆಹಾರ ಹಾಳು ಮಾಡದೇ ಹಿತಮಿತವಾಗಿ ಬಳಸಿ-ಸೋಂದಾದ ಶ್ರೀ ಭಟ್ಟಾಕಲಂಕ ಭಟ್ಟಾರಕ

04:59 PM Feb 17, 2024 | Team Udayavani |

ಉದಯವಾಣಿ ಸಮಾಚಾರ
ಅಡಹಳ್ಳಿ: ಹಸಿದ ಹೊಟ್ಟೆ ತುಂಬಿಸುವ ಅನ್ನಕ್ಕಿಂತ ಮತ್ತೂಂದು ದೇವರಿಲ್ಲ. ಅಸಂಖ್ಯಾತ ಪಶು, ಪಕ್ಷಿ ಹಾಗೂ ಪ್ರಾಣಿಗಳಿಗೆ ಆಹಾರವಾಗಿ, ಜೀವವಾಗಿ ಅನ್ನ ಒಡಲು ತುಂಬುತ್ತದೆ. ಈ ಪ್ರಪಂಚದಲ್ಲಿ ಅದೆಷ್ಟೋ ಜೀವಿಗಳು ಆಹಾರವಿಲ್ಲದೇ ಸಾಯುತ್ತಿರುವಾಗ ಅನ್ನವನ್ನು ಹಾಳು ಮಾಡದೆ ಹಿತಮಿತವಾಗಿ ಬಳಸಬೇಕು ಎಂದು ಸೋಂದಾದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಮೀಪದ ನಂದಗಾಂವ ಗ್ರಾಮದಲ್ಲಿ ಶುಕ್ರವಾರ ಜರುಗಿದ ಪಂಚಕಲ್ಯಾಣ ಮಹೋತ್ಸವದ ಗರ್ಭಕಲ್ಯಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಜೀವನ ಸಂಸ್ಕಾರದಲ್ಲಿ ಗರ್ಭ ಸಂಸ್ಕಾರಕ್ಕೆ ಪ್ರಮುಖ ಸ್ಥಾನವಿದೆ.

ಗರ್ಭವತಿಯಾದ ಹೆಣ್ಣುಮಗಳು 24 ತೀರ್ಥಂಕರರ ಮಾತಾಪಿತರನ್ನು ಸ್ಮರಿಸಿಕೊಂಡು ನಮಿಸಿದರೆ ಲೋಕಕಲ್ಯಾಣ ಮಾಡುವ ಸಂಸ್ಕಾರವಂತ ಮಕ್ಕಳು ಜನಿಸುತ್ತಾರೆ. ನೀವು ಕೂಡಾ ಲೋಕ ಮಾತೆ ಎನಿಸಿಕೊಳ್ಳುತ್ತೀರಿ ಎಂದರು.

ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಪಂಚಕಲ್ಯಾಣ ಪೂಜೆಯಿಂದ ಇಡೀ ಮಾನವ ಕುಲಕ್ಕೆ ಒಳಿತಾಗುತ್ತದೆ. ಎಲ್ಲಿ ಅಹಿಂಸೆ ಇರುತ್ತದೆಯೋ ಅಲ್ಲಿ ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ. ನಾನು ಅಲ್ಪಸಂಖ್ಯಾತರ ಸಚಿವನಿದ್ಧಾಗ ಜೈನ ಧರ್ಮದ ಕುರಿತು ಅಧ್ಯಯನ ಮಾಡಿ ಬಸದಿಗಳಿಗೆ ಸಾಕಷ್ಟು ಅನುದಾನ ನೀಡಿದ್ಧೇನೆ. ಶ್ರವಣ ಬೆಳಗೋಳ ಮಹಾಮಸ್ತಕಾಭಿಷೇಕ ಮಾಡಲು ಬಜೆಟ್‌ನಲ್ಲಿ 50 ಕೋಟಿ ಮೀಸಲಿಟ್ಟಿದ್ಧೆ, ಜೈನ ಸಮಾಜದ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಈ ಶುಭಸ್ಥಾನದಲ್ಲಿ ಸಮಸ್ತ ಮುನಿ, ಆಯ್ನಿಕ ಹಾಗೂ ಭಟ್ಟಾರಕರ ಸಾನ್ನಿಧ್ಯದಲ್ಲಿ ಪಾಲ್ಗೊಳ್ಳುವುದೇ ಪರಮ ಪುಣ್ಯವಾಗಿದೆ ಎಂದರು.

Advertisement

ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು, ಸಾಧನರತ್ನ ಅಮಿತಸೇನ ಮುನಿಮಹಾರಾಜರು ಆಶೀರ್ವಚನ ನೀಡಿದರು.
ಧನ್ಯಕುಮಾರ ಗುಂಡೆ, ಸುರೇಶ ತಂಗಾ, ಬಾಬಾಸಾಹೇಬ ಪಾಟೀಲ, ಕೆಎಂಎಫ್‌ ಮಾಜಿ ಜಿಲ್ಲಾಧ್ಯಕ್ಷ ಬಾಬು ಗಲಗಲಿ, ಅಧಿಕಾರಿ ಶ್ರೀಕಾಂತ ಮಾಕಾಣಿ, ಶ್ರೀ ಕಜ್ಜಂಪಾಡಿಸುಭ್ರಮಣ್ಯಂ ಭಟ್‌, ಅಭಯಕುಮಾರ ಅಕಿವಾಟೆ, ದಾದಾ ಪಾಟೀಲ, ರಾವಸಾಬ ಬಿರಾದಾರಪಾಟೀಲ, ಮುತ್ತಪ್ಪ ಕಾತ್ರಾಳ, ಪುಷ್ಪಕುಮಾರ ಪಾಟೀಲ, ಭರಮು ಬಳ್ಳೋಜ, ಗೋಪು ಸಪ್ತಸಾಗರ, ಧನಪಾಲ ಕುಸನಾಳ, ಜಿನ್ನಪ್ಪ ಕಾಗವಾಡ, ಶಿವಕುಮಾರ ಪಡಸಲಗಿ, ರಾಯಪ್ಪ ಗುಡ್ಡೊಡಗಿ, ಬಸಪ್ಪ ಗುಮಟಿ, ವಜ್ರಕುಮಾರ ಮಗದುಮ್ಮ, ಜಯಪಾಲ ನಂದೇಶ್ವರ ಸೇರಿದಂತೆ ಹಲವರು ಇದ್ದರು.

ಜೈನ ಸಮಾಜದ ಜೊತೆ ನನ್ನ ಅವಿನಾಭಾವ ಸಂಬಂಧವಿದೆ. ನನ್ನ ಬಹುತೇಕ ಗೆಳೆಯರು ಇದೇ ಸಮುದಾಯದವರಾಗಿದ್ದರಿಂದ ನಾನು ಮರಾಠಾ ಸಮಾಜದವನಾದರೂ ಕೂಡ ಇಂದಿಗೂ ಮಾಂಸಾಹಾರ ಸೇವನೆ ಮಾಡಿಲ್ಲ. ನನಗೆ ಜೈನ ಸಮಾಜದ ಸಸ್ಯಾಹಾರ ಮತ್ತು ಸಾತ್ವಿಕ ಜೀವನ ಪ್ರೇರಣೆಯಾಗಿದೆ.
ಶ್ರೀಮಂತ ಪಾಟೀಲ, ಮಾಜಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next