Advertisement
ಸ್ಟಾಪ್ ಕ್ಲಾಕ್ ಪ್ರಯೋಗಕೆಲವು ದಿನಗಳ ಹಿಂದೆ ಮುಗಿದ ವೆಸ್ಟ್ ಇಂಡೀಸ್- ಇಂಗ್ಲೆಂಡ್ ನಡುವಣ ಟಿ20 ಸರಣಿಯಲ್ಲಿ ಮೊದಲ ಬಾರಿ “ಸ್ಟಾಪ್ ಕ್ಲಾಕ್’ ಅನ್ನು ಬಳಕೆ ಮಾಡಲಾಯಿತು. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿರ್ಬಂ ಧಿಸಲು ಮತ್ತು ಆಟದ ವೇಗವನ್ನು ಸಾಧ್ಯ ವಾದಷ್ಟು ಹೆಚ್ಚಿಸಲು ಐಸಿಸಿ “ಸ್ಟಾಪ್ ಕ್ಲಾಕ್’ ಬಳಕೆಯ ಪ್ರಯೋಗ ಮಾಡಲು ಮುಂ ದಾಗಿದೆ. ಮುಂದಿನ ಎಪ್ರಿಲ್ ಅಂತ್ಯದವರೆಗೆ ವಿಶ್ವದ ವಿವಿಧೆಡೆಗಳಲ್ಲಿ ನಡೆಯಲಿರುವ ಹಲವು ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಈ ಪ್ರಯೋಗ ನಡೆಸಲಾಗುತ್ತದೆ. ಆ ಬಳಿಕ ಐಸಿಸಿಯ ಸಮಿತಿ ಇದರ ಬಗ್ಗೆ ಚರ್ಚಿಸಿ ಭವಿಷ್ಯದ ಪಂದ್ಯಗಳಲ್ಲಿ ಇದರ ಬಳಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸುವ ಉದ್ದೇ ಶದಿಂದ “ಸ್ಟಾಪ್ ಕ್ಲಾಕ್’ ಬಳಕೆ ಮಾಡಲಾ ಗುತ್ತದೆ. ಇಲ್ಲಿ ಬೌಲಿಂಗ್ ಮಾಡುವ ತಂಡವು ಹಿಂದಿನ ಓವರ್ ಮುಗಿದ 60 ಸೆಕೆಂಡುಗಳ ಅಂತರದಲ್ಲಿ ತಮ್ಮ ಮುಂದಿನ ಓವರಿನ ಮೊದಲ ಎಸೆತವನ್ನು ಮಾಡಲು ಸಿದ್ಧವಿ ರಬೇಕು. ಎರಡು ಎಚ್ಚರಿಕೆಯ ಬಳಿಕ ಬೌಲಿಂ ಗ್ ತಂಡ ಮೂರನೇ ಬಾರಿ ಒಂದು ವೇಳೆ ತಪ್ಪು ಮಾಡಿದರೆ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ಇಲ್ಲಿ ಮೂರನೇ ಅಂಪಾಯರ್ ಓವ ರೊಂದು ಪೂರ್ತಿಯಾದ ತತ್‌ಕ್ಷಣ “ಸ್ಟಾಪ್ ಕ್ಲಾಕ್’ ಆನ್ ಮಾಡುತ್ತಾರೆ. ಇದರ ಚಿತ್ರವನ್ನು ಮೈದಾನದಲ್ಲಿ ಅಳವಡಿಸಲಾದ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಬ್ಯಾಟ್ಸ್‌ಮನ್ ಸಲ ಕರಣೆ ಬದಲಾವಣೆ, ಪಾನೀಯ ಅಥವಾ ಗಾಯದ ವಿರಾಮವಿದ್ದರೆ 60 ಸೆಕೆಂಡುಗಳ ಫೀಲ್ಡಿಂಗ್ ಸಮಯ ಮೀರಿದರೆ ದಂಡ ವಿಧಿಸಲಾಗುವುದಿಲ್ಲ. ಒಂದು ವೇಳೆ ಬೌಲರ್ ಸಿದ್ಧರಾಗಿದ್ದರೂ ಬ್ಯಾಟ್ಸ್‌ಮನ್ ಸಿದ್ಧವಾ ಗದಿದ್ದ ಸಂದರ್ಭ ಪಂದ್ಯದ ಅಧಿಕಾರಿಗಳು ಬ್ಯಾಟಿಂಗ್ ತಂಡದ ಇನ್ನಿಂಗ್ಸ್‌ನ ಸಮಯದ ಅವಧಿಯಿಂದ ಬ್ಯಾಟ್ಸ್‌ಮನ್ ವ್ಯರ್ಥ ಮಾಡಿದ ನಿಮಿಷಗಳನ್ನು ಕಡಿತ ಮಾಡುತ್ತಾರೆ ಮಾತ್ರವಲ್ಲದೇ ಅಗತ್ಯಬಿದ್ದರೆ ದಂಡ ವಿಧಿಸುವ ಸಾಧ್ಯತೆಯೂ ಇದೆ.
Related Articles
Advertisement
ಶಂಕರನಾರಾಯಣ ಪಿ.