Advertisement

ಗ್ರಾಮಾಭಿವೃದ್ಧಿಗೆ ನರೇಗಾ, ಹಣಕಾಸು ಯೋಜನೆ ಬಳಸಿ

02:33 PM Feb 23, 2021 | Team Udayavani |

ಹುಣಸೂರು: ಗ್ರಾಮ ಪಂಚಾಯ್ತಿ ಸದಸ್ಯರು ತಮ್ಮ ಕರ್ತವ್ಯಗಳನ್ನು ಅರಿತುಕೊಂಡಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು ಎಂದು ಶಾಸಕ ಎಚ್‌.ಪಿ. ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಮರಳಯ್ಯನಕೊಪ್ಪಲು-ಮಾದಹಳ್ಳಿಯಲ್ಲಿ 1.22. ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಪಂ ಉಪಾಧ್ಯಕ್ಷೆ ಗೌರಮ್ಮ ಹಾಗೂ ಸ್ಥಳೀಯಜನಪ್ರತಿನಿಧಿಗಳ ಜೊತೆಗೂಡಿ ಚಾಲನೆ ನೀಡಿ ಮಾತನಾಡಿದರು.

ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ 1.22 ಕೋಟಿ ರೂ. ಬಿಡುಗಡೆಯಾಗಿದ್ದು, ರಸ್ತೆ ಡಾಂಬರಿಕರಣ ಹಾಗೂ ಕಾಂಕ್ರೀಟ್‌ ಚರಂಡಿ, ಡೆಕ್‌ ಗಳನ್ನು ನಿರ್ಮಿಸಲಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಪಿಡಿಒಗಳು ಸಾಮರಸ್ಯದಿಂದ ಕೆಲಸನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳುಸಾರ್ವಜನಿಕರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಗ್ರಾಪಂ ಸದಸ್ಯರು ಸರ್ಕಾರ ನೀಡುತ್ತಿರುವ ತರಬೇತಿ ಪಡೆದು, ಯಾವುದೇ ಅಭಿವೃದ್ಧಿ ಹಾಗೂ ಜನರಿಗೆ ನೀಡಬೇಕಾದ ಸವಲತ್ತುಗಳನ್ನು ಗ್ರಾಮ ಸಭೆಗಳಲ್ಲೇ ಆಯ್ಕೆ ಮಾಡಿ ಸಮಗ್ರ ಪಟ್ಟಿ ಮಾಡಬೇಕು. ಜಿಲ್ಲಾ ಪಂಚಾಯತ್‌,ತಾಲೂಕು ಹಾಗೂ ಗ್ರಾಮ ಪಂಚಾಯಿತಿಯಿಂದಸಿಗುವಂತಹ ಸೌಲಭ್ಯಗಳನ್ನು ಸಾರ್ವಜನಿಕರಿಗೆಕೊಡಿಸುವತ್ತ ಗಮನ ಹರಿಸಬೇಕು. 14-15ನೇ ಹಣಕಾಸು ಹಾಗೂ ನರೇಗಾ ಯೋಜನೆಯಡಿಕಾಮಗಾರಿಗಳನ್ನು ಕೈಗೆತ್ತಿಕೊಂಡು ಗ್ರಾಮ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಾದಹಳ್ಳಿ ಮಠದ ಸಾಂಬಸದಾಶಿವ ಸ್ವಾಮೀಜಿ, ಶಾಸಕರ ಜನಪರ ಕಾಳಜಿಯನ್ನು ಪ್ರಶಂಸಿಸಿ ರಸ್ತೆ ನಿರ್ಮಾಣದಿಂದಾಗಿ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯ್ತಿ ಸದಸ್ಯ ಕೆಂಗಯ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬೇಬಿ,ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜಳಾ,ಕಾರ್ಯದರ್ಶಿ ವೇದಮೂರ್ತಿ, ಗ್ರಾಪಂ ಸದಸ್ಯರಾದ ಲೋಕೇಶ್‌, ಚಂದ್ರ ಶೇಖರ್‌,ಅಂಬಿಕಾ, ಶಿವಮ್ಮ, ಚಂದ್ರಶೇಖರ, ನಿಂಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next