Advertisement

ರಾಗಿ-ಸಿರಿಧಾನ್ಯ ಬಳಸಿ: ಗುರುಮಹಾಂತ ಸ್ವಾಮೀಜಿ

06:05 PM Sep 10, 2022 | Team Udayavani |

ಇಳಕಲ್ಲ: ರಾಗಿ ಮತ್ತು ಇತರೆ ಸಿರಿಧಾನ್ಯಗಳನ್ನು ಆಹಾರ ಪದ್ಧತಿಯಲ್ಲಿ ಬಳಸಿ ರೋಗಗಳು ಬರದಂತೆ ನೋಡಿಕೊಳ್ಳಬೇಕು ಎಂದ ಇಳಕಲ್ಲ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀ ಹೇಳಿದರು. ನಗರದ ಎನ್‌. ಆರ್‌. ಪಾಟೀಲ ಆಸ್ಪತ್ರೆ ಮತ್ತು ಇಳಕಲ್ಲ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಫಿಸಿಯೋಥೆರೆಪಿ (ಭೌತಚಿಕಿತ್ಸಾ) ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದದಲ್ಲಿ ಅವರು ಮಾತನಾಡಿದರು.

Advertisement

ಆರೋಗ್ಯದಿಂದ ಇರಬೇಕಾದರೆ ಮುಖ್ಯವಾಗಿ ಕ್ರಿಯಾಶೀಲರಾಗಿರಬೇಕು ಮತ್ತು ಆರೋಗ್ಯವನ್ನು ಕಾಪಾಡಿಕೊಂಡು ಜೀವನ ಶೈಲಿ ಬದಲಿಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಗರದ ವೈದ್ಯ ಎನ್‌.ಆರ್‌. ಪಾಟೀಲ ಮಾತನಾಡಿ, ರೋಗ ಬರುವ ಮುಂಚೆಯೇ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯವಾಗಿದೆ ಅದಕ್ಕಾಗಿ ದಿನನಿತ್ಯ ವ್ಯಾಯಾಮ, ವಾಕಿಂಗ್‌ ಅಲ್ಲದೆ ಆಹಾರ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದರು.

ಫಿಸಿಯೋಥೆರೆಪಿ ವೈದ್ಯರಾದ ಡಾ.| ಎಂ. ರಾಜಕಿರಣ ಮಿನುಗಾ, ಇಳಕಲ್ಲ ರೋಟರಿ ಸಂಸ್ಥೆಯ ಅಧ್ಯಕ್ಷ ರೋಟೆರಿಯನ್‌ ಸಂಗಮೇಶ ಸಜ್ಜನ, ವಿಶ್ವ ಫಿಸಿಯೋಥೆರೆಪಿ ಮಾತನಾಡಿದರು. ಫಿಸಿಯೋಥೆರೆಪಿ ವೈದ್ಯರಾದ ಡಾ| ಆರತಿ ಪಾಟೀಲ, ರೋಟರಿ ಕಾರ್ಯದರ್ಶಿ ತೋಟಿಗೇರ, ಖಜಾಂಚಿ ಬಾಬು ರಾಜೊಳ್ಳಿ, ಡಾ| ಶಂಕರಗೌಡ ಪಾಟೀಲ, ಡಾ| ಶಾಂತಲಾ ಪಾಟೀಲ ಉಪಸ್ಥಿತರಿದ್ದರು. ರೋಟರಿ ಹಿರಿಯ ಸದಸ್ಯರಾದ ಚಂದ್ರಶೇಖರ ಮಾಳಿ, ಕೆ.ಎಸ್‌. ಕೂಡ್ಲೆಪ್ಪನವರ, ಬಸವರಾಜ ಹುಂಡೇಕಾರ, ವೀರೇಶ ಕೂಡಲಗಿಮಠ, ಮುತ್ತು ಬೆಂಗಳೂರ, ರವಿ ಚಟ್ಟೇರ, ಪರಶುರಾಮ ರಾಜೊಳ್ಳಿ, ಬಸವರಾಜ ಯಲ್ಲಟ್ಟಿ, ಚಂದ್ರು ಹರಿಹರ, ಶ್ರೀಕಾಂತ ಭಂಡಾರಿ ಭಾಗವಹಿಸಿದ್ದರು.

ರಾಜಶೇಖರ ನೇತೃತ್ವದ ಬೆಂಗಳೂರಿನ ಮಿಡಿಯಾ ಲ್ಯಾಬ್‌ ಸಿಬ್ಬಂದಿಯಿಂದ ತಪಾಸಣೆ ಕಾರ್ಯ ನಡೆಯಿತು. ಸಂಜೆಯವರೆಗೆ ನಡೆದ ಶಿಬಿರದಲ್ಲಿ 250ಕ್ಕಿಂತ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ರೋಟರಿ ಸದಸ್ಯ ಬಸಲಿಂಗಪ್ಪ ತೋಟದ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಶೇಖರ ತೋಟಿಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next